ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣದಲ್ಲಿ ಎಲ್ಲ ೩೨ ಆರೋಪಿಗಳು ನಿರ್ದೋಷಿ

  • ಬಾಬರಿ ಮಸೀದಿ ಧ್ವಂಸ, ಇದು ಪೂರ್ವ ನಿಯೋಜಿತ ಸಂಚಲ್ಲ ಎಂದು ನ್ಯಾಯಾಲಯದ ತೀರ್ಪು

  • ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಸಾಧ್ವಿ ಋತಂಭರಾದೊಂದಿಗೆ ಎಲ್ಲರೂ ನಿರಪರಾಧಿಗಳು

  • ೨೮ ವರ್ಷಗಳ ನಂತರ ತೀರ್ಪು

  • ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಬಗ್ಗೆ ಹಿಂದೂಗಳಿಗೆ ಭಯೋತ್ಪಾದಕರು ಹಾಗೂ ಹಿಂಸಕರು ಎಂದು ಹಣೆಪಟ್ಟಿ ಕಟ್ಟುವ ಕಾಂಗ್ರೆಸ್, ಮತಾಂಧರು, ಪ್ರಗತಿ(ಅಧೋಗತಿ)ಪರರು, ಸಾಮ್ಯವಾದಿಗಳು, ಸಮಾಜವಾದಿಗಳು ಮುಂತಾದವರಿಗೆ ಕಪಾಳಮೋಕ್ಷ !
  • ೨೮ ವರ್ಷಗಳ ನಂತರ ಸಿಗುವ ನ್ಯಾಯವು ಅನ್ಯಾಯವಾಗಿದೆ ಎಂದು ಯಾರದ್ದಾರೂ ಮನಸ್ಸಿಗೆ ಬಂದರೆ, ಅದರಲ್ಲೇನು ತಪ್ಪಿದೆ ? ನ್ಯಾಯಾಂಗದ ಕೊರತೆಯನ್ನು ದೂರ ಮಾಡಲು ಸರಕಾರ ಪ್ರಯತ್ನಗಳನ್ನು ಮಾಡುವುದು ಅಗತ್ಯವಿದೆ !

ಲಕ್ಷ್ಮಣಪುರಿ (ಲಕ್ನೋ) – ೧೯೯೨ ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಣಪುರಿಯ ಸಿಬಿಐನ ವಿಶೇಷ ನ್ಯಾಯಾಲಯವು ಭಾಜಪದ ಹಿರಿಯ ಮುಖಂಡರಾದ ಲಾಲಕೃಷ್ಣ ಅಡವಾಣಿ, ಮುರಳಿ ಮನೋಹರ ಜೋಶಿ, ವಿನಯ ಕಟಿಯಾರ್, ಉಮಾ ಭಾರತಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಹ, ಸಾಧ್ವಿ ಋತಂಭರಾ ಇವರೊಂದಿಗೆ ಎಲ್ಲ ೩೨ ಆರೋಪಿಗಳನ್ನು ನಿದೋರ್ಷಿಗಳೆಂದು ತೀರ್ಪು ನೀಡಿದೆ. ರಾಮಜನ್ಮಭೂಮಿ ತೀರ್ಪಿನ ನಂತರ ಈ ಪ್ರಕರಣದ ಬಗ್ಗೆ ಇಡೀ ದೇಶದ ಗಮನ ಸೆಳೆದಿತ್ತು. ಇದರ ವಿಚಾರಣೆಯ ಸಮಯದಲ್ಲಿ ೨೬ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಎಲ್.ಕೆ.ಅಡವಾಣಿ ಮಾತ್ರ ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ತಿನ ಪತ್ರಿಕಾ ಪ್ರಕಟಣೆ

ಈ ಸಮಯದಲ್ಲಿ ‘ಬಾಬರಿ ಮಸೀದಿ ಧ್ವಂಸ ಮಾಡಿದ್ದು ಪೂರ್ವನಿಯೋಜಿತ ಕೃತ್ಯವಲ್ಲ, ಅದು ಆಕಸ್ಮಿಕವಾಗಿ ನಡೆದಿತ್ತು’, ಎಂದು ನಿರೀಕ್ಷಣೆಯನ್ನು ನೋಂದಾಯಿಸಲಾಯಿತು ಹಾಗೂ ಆರೋಪಿಗಳ ವಿರುದ್ಧ ಯಾವುದೇ ರೀತಿಯ ಪ್ರಬಲವಾದ ಸಾಕ್ಷ್ಯಗಳು ಇಲ್ಲ ಎಂದು ಹೇಳುತ್ತಾ ಎಲ್ಲ ಆರೋಪಿಗಳು ನಿರ್ದೋಷಿಯೆಂದು ತೀರ್ಪು ನೀಡಿತು. ವಿಶ್ವ ಹಿಂದೂ ಪರಿಷತ್ ಇದರಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಏನೆಲ್ಲೆ ಘಟನೆ ಆಯಿತೋ ಅದು ಆಕಸ್ಮಿಕವಾಗಿ ನಡೆದ ಘಟನೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ೩೫೧ ಸಾಕ್ಷಿದಾರರು ಮತ್ತು ಸುಮಾರು ೬೦೦ ದಾಖಲೆಪತ್ರಗಳನ್ನು ನ್ಯಾಯಾಲಯಕ್ಕೆ ಪುರಾವೆ ಎಂದು ಹಾಜರುಪಡಿಸಿತ್ತು. ೪೮ ಜನರ ವಿರುದ್ಧ ಆರೋಪಗಳನ್ನು ನಿಗದಿಪಡಿಸಲಾಗಿತ್ತು; ಆದರೆ ಖಟ್ಲೆ ನಡೆಯುತ್ತಿರುವಾಗ ಅವರಲ್ಲಿ ೧೬ ಮಂದಿ ಸಾವನ್ನಪ್ಪಿದ್ದರು.