ತಮಿಳುನಾಡಿನಲ್ಲಿ ಹಿಂದೂ ವಿರೋಧಿ ನಾಯಕ ದಿವಂಗತ ಪೆರಿಯಾರ್ ಅವರ ಪ್ರತಿಮೆಯ ಮೇಲೆ ಕೇಸರಿ ಬಣ್ಣ ಎರಚಲಾಯಿತು

ತಿರುಚಿರಾಪಿ (ತಮಿಳುನಾಡು) – ತಮಿಳುನಾಡಿನ ಹಿಂದೂ ವಿರೋಧಿ ನಾಯಕ ದಿವಂಗತ ಇ.ವಿ. ರಾಮಸ್ವಾಮಿ ‘ಪೆರಿಯಾರ್’ ಪ್ರತಿಮೆಯ ಮೇಲೆ ಅಜ್ಞಾತರು ಕೇಸರಿ ಬಣ್ಣ ಹಾಗೂ ಚಪ್ಪಲಿಗಳನ್ನು ಹಾಕಿರುವ ಘಟನೆ ನಡೆದಿದೆ. ಈ ಪ್ರತಿಮೆ ಇನಾಮಕುಲಾತೂರನ ಸಮತುವಾಪುರಮ್ ಕಾಲೋನಿಯಲ್ಲಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಒ. ಪನಿರಸೆಲ್ವಮ್ ಇವರು ಈ ಘಟನೆಯನ್ನು ಖಂಡಿಸುತ್ತಾ, ‘ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ್ದಾರೆ. ಈ ಹಿಂದೆ ಕೊಯಮತ್ತೂರಿನ ಪೆರಿಯಾರ್ ಪ್ರತಿಮೆಯ ಮೇಲೆ ಕೇಸರಿ ಬಣ್ಣ ಎರಚಿದ್ದು ಕಂಡುಬಂದಿತ್ತು.