‘ಫೇಸ್‌ಬುಕ್ನಲ್ಲಿ ‘ಕಪಲ್ ಚಾಲೆಂಜ್ನಲ್ಲಿ ದಂಪತಿಗಳು ಫೋಟೋಗಳನ್ನು ‘ಅಪ್‌ಲೋಡ್ ಮಾಡುತ್ತಿರುವ ಪ್ರಕರಣ
ನಾಗಪುರ – ಪ್ರಸ್ತುತ ‘ಫೇಸ್‌ಬುಕ್ ಈ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ‘ಕಪಲ ಚ್ಯಾಲೆಂಜ್ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಅನೇಕ ದಂಪತಿಗಳು ತಮ್ಮ ಫೋಟೋಗಳನ್ನು ‘ಅಪ್‌ಲೋಡ್ ಮಾಡಿದ್ದಾರೆ. ತಮ್ಮ ಛಾಯಾಚಿತ್ರವನ್ನು ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ವಿವಿಧ ಸ್ಥಳಗಳ ಛಾಯಾಚಿತ್ರಗಳನ್ನು ‘ಅಪ್‌ಲೋಡ್ ಮಾಡುವ ಮೂಲಕ, ನಮಗೆ ಗೊತ್ತಿಲ್ಲದೇ ಸೈಬರ್ ಅಪರಾಧಿಗಳಿಗೆ ನಮ್ಮದೇ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿಸುತ್ತೇವೆ. ಛಾಯಾಚಿತ್ರಗಳ ಮೂಲಕ ನಿಮ್ಮ ಪರಿಸ್ಥಿತಿಯನ್ನು ಗುರುತಿಸುವ ಮೂಲಕ ಅಪರಾಧಿಗಳು ನಿಮ್ಮನ್ನು ‘ಬ್ಲ್ಯಾಕ್ ಮೇಲ್ ಮಾಡಬಹುದು, ಆದ್ದರಿಂದ ನಿಮ್ಮ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ‘ಅಪ್ ಲೋಡ್ ಮಾಡುವಾಗ ಜಾಗರೂಕರಾಗಿರಿ ಎಂದು ಸೈಬರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕರಾದ ಅಶೋಕ್ ಬಾಗುಲ್ ಮನವಿ ಮಾಡಿದ್ದಾರೆ. ಅಪರಾಧಿಗಳು ಪ್ರಸಾರ ಮಾಧ್ಯಮಗಳಲ್ಲಿ ಚಿತ್ರಗಳನ್ನು ‘ಎಡಿಟ್ ಮಾಡಿ ಇಷ್ಟವಾಗುವ ವ್ಯಕ್ತಿಯ ಅಶ್ಲೀಲ ಫೋಟೋವನ್ನು ನಿರ್ಮಿಸಿ ಈ ಮೂಲಕ ‘ಬ್ಲ್ಯಾಕ್‌ಮೇಲ್ ಮಾಡುವ ಸಾಧ್ಯತೆ ಹೆಚ್ಚು ಇದೆ. ನಾಗಪುರದಲ್ಲಿ ‘ಪ್ರಸಾರ ಮಾಧ್ಯಮಗಳಲ್ಲಿ ಛಾಯಾಚಿತ್ರಗಳನ್ನು ಬಳಸಿಕೊಂಡು ‘ಬ್ಲ್ಯಾಕ್‌ಮೇಲ್ ಮಾಡಿದ ಬಗ್ಗೆ ೩೫೦ ದೂರುಗಳು ಬಂದಿದ್ದು, ಒಟ್ಟು ಸೈಬರ್ ಅಪರಾಧಗಳ ಸಂಖ್ಯೆ ೩,೫೦೦ ಕ್ಕಿಂತ ಹೆಚ್ಚಿದೆ. (‘ಕಪಲ್ ಚಾಲೆಂಜ್ನ ನಿರರ್ಥಕತೆಯನ್ನು ಅರಿತುಕೊಂಡು ಸಾಮಾಜಿಕ ಮಾಧ್ಯಮಗಳ ಮನವಿಗೆ ಬಲಿಯಾಗಬೇಡಿ, ಬದಲಿಗೆ ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸಲು ಮಾತ್ರ ಸಾಮಾಜಿಕ ಮಾಧ್ಯಮವನ್ನು ಬಳಸಿ ! – ಸಂಪಾದಕರು)