ಚಲನಚಿತ್ರಗಳ ‘ಐಟಂ ಡ್ಯಾನ್ಸ್’, ಅಶ್ಲೀಲ ಚಲನಚಿತ್ರಗಳು ಅತ್ಯಾಚಾರದ ಮಾನಸಿಕತೆ ಸೃಷ್ಟಿಸುತ್ತವೆ ! – ರಾಷ್ಟ್ರೀಯ ಜನತಾದಳದ ನಾಯಕ ಶಿವಾನಂದ್ ತಿವಾರಿ

ಬುಡಕಟ್ಟು ಪ್ರದೇಶದಲ್ಲಿ ಹುಡುಗಿಯ ಅಥವಾ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಬುಡಕಟ್ಟು ಸಂಸ್ಕೃತಿಯಲ್ಲಿ ಅತ್ಯಾಚಾರಕ್ಕೆ ಸ್ಥಾನವಿಲ್ಲ; ಆದರೆ ಆಧುನಿಕ ಸಮಾಜದ ಹೆಸರಿನಲ್ಲಿ ಪರಿಚಯಿಸಲ್ಪಟ್ಟ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಭೋಗದ ಸಾಧನವಾಗಿ ಚಿತ್ರಿಸಲಾಗಿದೆ.

ಬಂಗಾಲದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಾವಲು ಪಡೆಯ ಮೇಲೆ ನಡೆದ ಕಲ್ಲು ತೂರಾಟದಿಂದಾಗಿ ವಾಹನಗಳಿಗೆ ದೊಡ್ಡ ಹಾನಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಅವರ ಬೆಂಗಾವಲು ವಾಹನಗಳ ಮೇಲೆಯೂ ದೊಡ್ಡದೊಡ್ಡ ಕಲ್ಲುಗಳು ಮತ್ತು ಸಿಮೆಂಟ್‌ನ ಇಟ್ಟಿಗೆಗಳನ್ನು ಎಸೆಯಲಾಯಿತು. ವಾಹನಗಳಿಗೆ ಹಾನಿಯುಂಟಾಗಿದೆ. ರಾಜ್ಯದ ಬಿಜೆಪಿ ಉಸ್ತುವಾರಿ ಕೈಲಾಸ್ ವಿಜಯವರ್ಗಿಯ ಅವರ ವಾಹನಕ್ಕೂ ಕಲ್ಲು ಎಸೆಯಲಾಯಿತು.

ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಮಸೂದೆ ಅಂಗೀಕಾರ

ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆಯನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಕಾನೂನಿನ ಪ್ರಕಾರ, ಹಸು ಮತ್ತು ಕರುಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿರುತ್ತದೆ. ೧೩ ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ.

ಅಲ್ಲಾಹನ ಹೆಸರಿನಲ್ಲಿ ಬಾಂಗ್ಲಾದೇಶದ ಮಸೀದಿಗಳಲ್ಲಿ ಮತ್ತು ಮದರಸಾಗಳಲ್ಲಿ ಪ್ರತಿದಿನ ಅತ್ಯಾಚಾರ ನಡೆಯುತ್ತದೆ ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರಿನ್ ಅವರ ಆರೋಪ

ಬಾಂಗ್ಲಾದೇಶದ ಮಸೀದಿ ಮತ್ತು ಮದರಸಾಗಳಲ್ಲಿ ಪ್ರತಿದಿನ ಅತ್ಯಾಚಾರ ನಡೆಯುತ್ತಿದೆ. ಅಲ್ಲಾಹನ ಹೆಸರಿನಲ್ಲಿ ಅತ್ಯಾಚಾರ ನಡೆಯುತ್ತಿದೆ. ಮದರಸಾದಲ್ಲಿ ಅತ್ಯಾಚಾರಿ ಶಿಕ್ಷಕ ಮತ್ತು ಮಸೀದಿಯಲ್ಲಿ ಅತ್ಯಾಚಾರಿ ಇಮಾಮ್ ಅವರಿಗೆ ದಿನಕ್ಕೆ ಐದು ಬಾರಿ ನಮಾಜ ಪಠಣ ಮಾಡಿದರೆ, ಅಲ್ಲಾಹನು ಅವರನ್ನು ಕ್ಷಮಿಸುವನು ಮತ್ತು ಅವರು ಈ ಪಾಪದಿಂದ ಮುಕ್ತರಾಗುತ್ತಾರೆ ಎಂದು ಭಾವಿಸುತ್ತಾರೆ ಎಂದು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಲೇಖಕಿ ತಸ್ಲೀಮಾ ನಸ್ರಿನ್ ಟ್ವೀಟ್ ಮಾಡಿದ್ದಾರೆ.

ಬಂಗಾಲದಲ್ಲಿ ಭಾರತ ಮಾತೆಯ ಪೂಜೆಯ ಆಯೋಜನೆಯ ಭಿತ್ತಿಪತ್ರವನ್ನು ಹಾಕಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ

ಘಟನೆಗೆ ಒಂದು ದಿನ ಮೊದಲು ಬಿಜೆಪಿ ಅಸನಸೊಲ್‌ನಲ್ಲಿ ದ್ವಿಚಕ್ರ ವಾಹನ ಮೆರವಣಿಗೆಯನ್ನು ಮಾಡಿದ್ದರು. ಅದರ ಮೇಲೆ ಗುಂಡು ಹಾರಾಟ ಹಾಗೂ ಕಲ್ಲೆಸೆತ ಮಾಡಲಾಗಿತ್ತು. ಈ ಸಮಯದಲ್ಲಿ ನಾಡಬಾಂಬ್ ಸಹ ಎಸೆಯಲಾಯಿತು. ಇದರಲ್ಲಿ ಐದರಿಂದ ಏಳು ಜನರು ಗಾಯಗೊಂಡಿದ್ದಾರೆ. ಪೊಲೀಸರಿಗೆ ಸಹಾಯ ಕೇಳಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಕುತುಬ್ ಮಿನಾರ್ ಪ್ರದೇಶದ ಮಸೀದಿಯನ್ನು ೨೭ ಹಿಂದೂ ಮತ್ತು ಜೈನ ದೇವಾಲಯಗಳನ್ನು ನೆಲಸಮಗೊಳಿಸಿ ನಿರ್ಮಾಣ ಮಾಡಿರುವುದರಿಂದ ಅದನ್ನು ತೆರವುಗೊಳಿಸಬೇಕು ! – ದೆಹಲಿ ನ್ಯಾಯಾಲಯದಲ್ಲಿ ಅರ್ಜಿ

ದೆಹಲಿಯ ಕುತುಬ್ ಮಿನಾರ್ ಪ್ರದೇಶದಲ್ಲಿರುವ ಕುವತ್ ಉಲ್ ಇಸ್ಲಾಂ ಮಸೀದಿಯನ್ನು ೨೭ ಹಿಂದೂ ಮತ್ತು ಜೈನ ದೇವಾಲಯಗಳು ನೆಲಸಮಗೊಳಿಸಿ ನಿರ್ಮಿಸಲಾಗಿದೆ. ಈ ನಿಟ್ಟಿನಲ್ಲಿ ಸಾಕ್ಷ್ಯವೂ ಲಭ್ಯವಿದೆ. ಈ ಕಾರಣದಿಂದಾಗಿ ಇಲ್ಲಿ ದೇವಾಲಯಗಳನ್ನು ಪುನರ್ನಿರ್ಮಿಸಬೇಕು ಮತ್ತು ೨೫ ದೇವತೆಗಳ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಸಾಕೆತ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಶ್ರೀ ಕ್ಷೇತ್ರ ಬೆಲಗೂರಿನ ಸ್ವಾಮಿ ಬಿಂದೂ ಮಾಧವ ಶರ್ಮಾ ಇವರ ದೇಹತ್ಯಾಗ

ಸ್ವಾಮೀಜಿಯವರು ಹನುಮಂತನ ಭಕ್ತರಾಗಿದ್ದು ಅವರಿಗೆ ಅಷ್ಟಸಿದ್ಧಿಗಳು ಪ್ರಾಪ್ತವಾಗಿವೆ. ಸ್ವಾಮೀಜಿಯವರಿಗೆ ನಾಥ ಸಂಪ್ರದಾಯದ ಮೂರು ಸಾವಿರ ವರ್ಷಗಳ ಪರಂಪರೆಯಿದೆ. ಸ್ವಾಮೀಜಿಯವರಿಗೆ ಸೂಕ್ಷ್ಮದ ವಿಷಯದಲ್ಲಿ ಬಹಳ ಜ್ಞಾನವಿದೆ. ಸಾಧಕರ ಭೇಟಿಯ ಸಮಯದಲ್ಲಿ ಅವರು ಸೂಕ್ಷ್ಮ ಜ್ಞಾನದ ಮೂಲಕ ಪರಾತ್ಪರ ಗುರು ಡಾ. ಆಠವಲೆ, ಹಿಂದೂ ರಾಷ್ಟ್ರ ಮತ್ತು ಸನಾತನ ಸಂಸ್ಥೆ ಇವುಗಳ ಬಗ್ಗೆ ಮುಂದಿನ ಮಾರ್ಗದರ್ಶನವನ್ನು ಮಾಡಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಲು ಹೋದ ಹಿಂದೂ ಮಕ್ಕಲ್ ಕಚ್ಚಿಯ ಅರ್ಜುನ ಸಂಪತ್ ಅವರನ್ನು ದ್ರಮುಕ ಹಾಗೂ ವಿ.ಸಿ.ಕೆ. ಕಾರ್ಯಕರ್ತರಿಂದ ಮುತ್ತಿಗೆ !

ಹಿಂದೂ ಮಕ್ಕಲ್ ಕಚ್ಛಿಯ ಅಧ್ಯಕ್ಷ ಅರ್ಜುನ ಸಂಪತ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಪುಣ್ಯತಿಥಿಯ ನಿಮಿತ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಥಳೀಯ ರಾಜ ಅಣ್ಣಾಮಲೈ ಪುರಂನಲ್ಲಿರುವ ಸ್ಮಾರಕಕ್ಕೆ ಹೋಗಿದ್ದರು. ಆ ಸಮಯದಲ್ಲಿ ದ್ರಮುಕ ಹಾಗೂ ವಿದುಥಲಾಯಿ ಚಿರುಥೈಗಲ ಕತ್ಛಿ (ವಿ.ಸಿ.ಕೆ.) ಈ ಪಕ್ಷದ ಕಾರ್ಯಕರ್ತರು ಅವರನ್ನು ಒಳ ಪ್ರವೇಶಿಸದಂತೆ ತಡೆದರು.

ದೆಹಲಿಯ ಒಂದು ಕಾಲುವೆಯಲ್ಲ್ಲಿ ದೊಡ್ಡ ಪ್ರಮಾಣದಲ್ಲಿ ಹಸುಗಳ ಕಳೇಬರ ಪತ್ತೆ

ಸ್ಥಳೀಯ ದ್ವಾರಕಾ ಸೆಕ್ಟರ್ – ೨೩ ರ ಪೋಚನಪುರ ಗ್ರಾಮದ ಒಂದು ಕಾಲುವೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಸುಗಳ ಕಳೇಬರಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿಸಿದ್ದಕ್ಕಾಗಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ನಟ ಸೈಫ್ ಅಲಿ ಖಾನ್‌ನ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

ನಟ ಸೈಫ್ ಅಲಿ ಖಾನ್ ‘ಆದಿಪುರುಷ’ ಚಲನಚಿತ್ರದ ರಾವಣನ ಪಾತ್ರದ ಬಗ್ಗೆ ನೀಡಿದ ಅಕ್ಷೆಪಾರ್ಹ ಹೇಳಿಕೆಯ ವಿರುದ್ಧ ಇಲ್ಲಿ ದೂರು ದಾಖಲಿಸಲಾಗಿದೆ. ವಿಶ್ವ ಹಿಂದೂ ಮಹಾಸಂಘದ ದೆಹಲಿ ಪ್ರದೇಶಾಧ್ಯಕ್ಷರಾದ ರಾಜೇಶ ತೋಮರ ಇವರು ನೀಡಿದ ದೂರಿನ ಮೇರೆಗೆ ಅಪರಾದ ದಾಖಲಾಗಿದೆ.