ಈಗಲಾದರೂ ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಜನರಿಗೆ ಅನಿಸುತ್ತದೆ !
ಕೋಲಕಾತಾ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಅವರ ಬೆಂಗಾವಲು ವಾಹನಗಳ ಮೇಲೆಯೂ ದೊಡ್ಡದೊಡ್ಡ ಕಲ್ಲುಗಳು ಮತ್ತು ಸಿಮೆಂಟ್‌ನ ಇಟ್ಟಿಗೆಗಳನ್ನು ಎಸೆಯಲಾಯಿತು. ವಾಹನಗಳಿಗೆ ಹಾನಿಯುಂಟಾಗಿದೆ. ರಾಜ್ಯದ ಬಿಜೆಪಿ ಉಸ್ತುವಾರಿ ಕೈಲಾಸ್ ವಿಜಯವರ್ಗಿಯ ಅವರ ವಾಹನಕ್ಕೂ ಕಲ್ಲು ಎಸೆಯಲಾಯಿತು. ಅವರ ಕಾರಿನ ಗಾಜು ಚೂರುಚೂರಾಯಿತು. ಈ ಘಟನೆ ಇಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ. ನಡ್ಡಾ ಬಂಗಾಲದ ಪ್ರವಾಸದಲ್ಲಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಸಂಸದ ಅಭಿಷೇಕ ಬ್ಯಾನರ್ಜಿ ಅವರ ಲೋಕಸಭಾ ಕ್ಷೇತ್ರದ ಡಾಯಮಂಡ ಬಂದರಿಗೆ ತೆರಳುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ.
(ಸೌಜನ್ಯ : IndiaTV News)
೧. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಅಧ್ಯಕ್ಷ ನಡ್ಡಾ ಬೆಂಗಾವಲಿನ ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ ಘೋಷ್ ಆರೋಪಿಸಿದ್ದಾರೆ. ಈ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ದೊಡ್ಡ ಕಲ್ಲುಗಳನ್ನು ಎಸೆದರು. ಭದ್ರತಾ ಪಡೆಗಳು ನಡ್ಡಾ ಅವರ ವಾಹನವನ್ನು ಸುರಕ್ಷಿತವಾಗಿ ಹೊರಗೆಳೆದವು.
೨. ಈ ಹಿಂದೆ, ನಡ್ಡಾ ಭೇಟಿಗೆ ಕೆಲವು ಗಂಟೆಗಳ ಮೊದಲು ಬಿಜೆಪಿ ನಗರ ಅಧ್ಯಕ್ಷ ಸುರಜಿತ ಹಲಧಾರ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ನಡ್ಡಾ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಧ್ವಜಗಳು ಮತ್ತು ಭಿತ್ತಿಪತ್ರಗಳನ್ನು ಹಾಕುತ್ತಿದ್ದರು. ಆ ಸಮಯದಲ್ಲಿ ತೃಣಮೂಲ ಕಾರ್ಯಕರ್ತರು ದಾಳಿ ನಡೆಸಿದರು. ಹಲಧಾರ ಇವರು, ‘ನಮ್ಮ ಮೇಲೆ ಹಲ್ಲೆ ಮಾಡಲಾಯಿತು. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಇದರಲ್ಲಿ ನಮ್ಮ ೧೦-೧೨ ಕಾರ್ಯಕರ್ತರು ಗಾಯಗೊಂಡಿದ್ದಾರೆ’ ಎಂದು ಹೇಳಿದರು.
೩. ಆರೋಪಗಳು ಸುಳ್ಳು ನಾವು ಅದನ್ನು ಎಂದಿಗೂ ಮಾಡುವುದಿಲ್ಲ. ಅಭಿಷೇಕ ಬ್ಯಾನರ್ಜಿ ಅವರ ಭಿತ್ತಿಪತ್ರಗಳನ್ನು ಬಿಜೆಪಿ ಕಾರ್ಯಕರ್ತರೇ ಹರಿದುಹಾಕಿದ್ದಾರೆ. ಘೋಷ್ ಮತ್ತು ವಿಜಯವರ್ಗಿಯ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಕೇವಲ ಸುಳ್ಳು ಹೇಳುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.