ಕುತುಬ್ ಮಿನಾರ್ ಪ್ರದೇಶದ ಮಸೀದಿಯನ್ನು ೨೭ ಹಿಂದೂ ಮತ್ತು ಜೈನ ದೇವಾಲಯಗಳನ್ನು ನೆಲಸಮಗೊಳಿಸಿ ನಿರ್ಮಾಣ ಮಾಡಿರುವುದರಿಂದ ಅದನ್ನು ತೆರವುಗೊಳಿಸಬೇಕು ! – ದೆಹಲಿ ನ್ಯಾಯಾಲಯದಲ್ಲಿ ಅರ್ಜಿ

  • ಕುತುಬ್ ಮಿನಾರ್ ಪ್ರದೇಶದ ಮಸೀದಿಯನ್ನು ೨೭ ಹಿಂದೂ ಮತ್ತು ಜೈನ ದೇವಾಲಯಗಳನ್ನು ನೆಲಸಮಗೊಳಿಸಿ ನಿರ್ಮಾಣ ಮಾಡಿರುವುದರಿಂದ ಅದನ್ನು ತೆರವುಗೊಳಿಸಬೇಕು ! – ದೆಹಲಿ ನ್ಯಾಯಾಲಯದಲ್ಲಿ ಅರ್ಜಿ

  • ಮೊದಲ ಜೈನ ತೀರ್ಥಂಕರ್ ರಿಷಭ್ ದೇವ್ ಮತ್ತು ಭಗವಾನ ವಿಷ್ಣುವಿನ ಹೆಸರಿನಲ್ಲಿ ಪೂ. (ನ್ಯಾಯವಾದಿ) ಹರಿಶಂಕರ್ ಜೈನ್ ಇವರು ಅರ್ಜಿ ಸಲ್ಲಿಸಿದರು

  • ದೇವಾಲಯಗಳ ಅವಶೇಷಗಳನ್ನು ಬಳಸಿ ಮಸೀದಿಗಳನ್ನು ನಿರ್ಮಿಸಿದ್ದರಿಂದ ಮುಸ್ಲಿಮರು ನಮಾಜ್ ಪಠಣ ಮಾಡುವುದಿಲ್ಲ !

  • ಕುತುಬ್ ಮಿನಾರ್‌ ಅಂದರೆ ವರಾಹಮಿಹಿರನು ನಿರ್ಮಿಸಿದ ಧ್ರುವಸ್ತಂಭ !

  • ಸರಕಾರವು ದೇವಾಲಯಗಳ ಪುನರ್ನಿರ್ಮಾಣ ಮಾಡುವಂತೆ ಬೇಡಿಕೆ

ಯಾವುದನ್ನು ಸರಕಾರ ಮಾಡಬೇಕು, ಅದನ್ನು ಹಿಂದೂಗಳು ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ಹೋರಾಡಬೇಕಾಗುತ್ತದೆ, ಇದು ಅಪೇಕ್ಷಿತವಿಲ್ಲ !

ನವ ದೆಹಲಿ – ದೆಹಲಿಯ ಕುತುಬ್ ಮಿನಾರ್ ಪ್ರದೇಶದಲ್ಲಿರುವ ಕುವತ್ ಉಲ್ ಇಸ್ಲಾಂ ಮಸೀದಿಯನ್ನು ೨೭ ಹಿಂದೂ ಮತ್ತು ಜೈನ ದೇವಾಲಯಗಳು ನೆಲಸಮಗೊಳಿಸಿ ನಿರ್ಮಿಸಲಾಗಿದೆ. ಈ ನಿಟ್ಟಿನಲ್ಲಿ ಸಾಕ್ಷ್ಯವೂ ಲಭ್ಯವಿದೆ. ಈ ಕಾರಣದಿಂದಾಗಿ ಇಲ್ಲಿ ದೇವಾಲಯಗಳನ್ನು ಪುನರ್ನಿರ್ಮಿಸಬೇಕು ಮತ್ತು ೨೫ ದೇವತೆಗಳ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಸಾಕೆತ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮೊದಲು ಜೈನ ತೀರ್ಥಂಕರ್ ರಿಷಭ ದೇವ ಮತ್ತು ಭಗವಾನ ವಿಷ್ಣುವಿನ ಹೆಸರಿನಲ್ಲಿ ಪೂ. (ನ್ಯಾಯವಾದಿ) ಹರಿಶಂಕರ್ ಜೈನ್ ಈ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಡಿಸೆಂಬರ್ ೮ ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಈ ಸಮಯದಲ್ಲಿ ನ್ಯಾಯಾಧೀಶರು, ‘ಅರ್ಜಿಯು ತುಂಬಾ ದೊಡ್ಡದಾಗಿದೆ. ಆದ್ದರಿಂದ, ಅದರಲ್ಲಿ ನೀಡಲಾದ ಪುರಾವೆಗಳನ್ನು ಆಳವಾಗಿ ಅಧ್ಯಯನ ಮಾಡುವುದು ಆವಶ್ಯಕವಾಗಿದೆ. ಮುಂದಿನ ವಿಚಾರಣೆ ಡಿಸೆಂಬರ್ ೨೪ ರಂದು ನಡೆಯಲಿದೆ’ ಎಂದು ಹೇಳಿದರು.

 


ಪೂ. (ನ್ಯಾಯವಾದಿ) ಹರಿಶಂಕರ್ ಜೈನ್ ತಮ್ಮ ವಾದದಲ್ಲಿ ಮಂಡಿಸಿದ ಅಂಶಗಳು ಮತ್ತು ಅರ್ಜಿಯಲ್ಲಿನ ಸೂತ್ರಗಳು

ಪೂ. (ನ್ಯಾಯವಾದಿ) ಹರಿಶಂಕರ್ ಜೈನ್

೧. ಹಿಂದೂಗಳಿಗೆ ಇಸ್ಲಾಂನ ಶಕ್ತಿಯನ್ನು ತೋರಿಸಲು ದೇವಾಲಯಗಳನ್ನು ನೆಲಸಮ ಮಾಡಿ ಮಸೀದಿಗಳ ನಿರ್ಮಾಣ

ಮುಹಮ್ಮದ್ ಘೋರಿಯ ಗುಲಾಮನಾದ ಕುತುಬುದ್ದೀನ್ ದೆಹಲಿಯಲ್ಲಿ ಕಾಲಿಟ್ಟ ನಂತರ, ಮೊಟ್ಟಮೊದಲು ಈ ೨೭ ದೇವಾಲಯಗಳನ್ನು ನೆಲಸಮ ಮಾಡಲು ಆದೇಶಿಸಿದನು. ದೇವಾಲಯಗಳನ್ನು ತಕ್ಷಣ ನೆಲಸಮಗೊಳಿಸಲಾಯಿತು ಮತ್ತು ಆ ಅವಶೇಷಗಳ ಸಹಾಯದಿಂದ ಮಸೀದಿಯನ್ನು ನಿರ್ಮಿಸಲಾಯಿತು. ನಂತರ ಇದಕ್ಕೆ ‘ಕವ್ವತ್-ಉಲ್-ಇಸ್ಲಾಂ’ (ಇಸ್ಲಾಂನ ಶಕ್ತಿ) ಎಂದು ನಾಮಕರಣ ಮಾಡಲಾಯಿತು. ಈ ಮಸೀದಿಯನ್ನು ನಿರ್ಮಿಸುವ ಉದ್ದೇಶವು ಪ್ರಾರ್ಥನೆಗಿಂತ ಸ್ಥಳೀಯ ಹಿಂದೂಗಳ ಮತ್ತು ಜೈನರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಹಾಗೂ ಇಸ್ಲಾಂನ ಶಕ್ತಿಯನ್ನು ಅವರ ಮುಂದೆ ಪ್ರದರ್ಶಿಸುವುದಾಗಿತ್ತು.

೨. ಮಸೀದಿಯಲ್ಲಿ ಹಿಂದೂ ದೇವಾಲಯಗಳ ಅವಶೇಷಗಳು ಮತ್ತು ವಿಗ್ರಹಗಳು ಇದ್ದರಿಂದ ನಮಾಜ ಪಠಣ ಇಲ್ಲ !
ಕುತುಬುದ್ದೀನ್ ೧೧೯೨ ರಲ್ಲಿ ಈ ಮಸೀದಿಯನ್ನು ನಿರ್ಮಿಸಿದ; ಆದರೆ ಮುಸ್ಲಿಮರು ಅಲ್ಲಿ ಎಂದಿಗೂ ನಮಾಜ ಪಠಣ ಮಾಡಲಿಲ್ಲ. ಇದಕ್ಕೆ ಕಾರಣ, ದೇವಾಲಯದ ಕಂಬಗಳು, ಗೋಡೆಯ ಒಂದು ಭಾಗ ಮತ್ತು ಛಾವಣಿಯ ಭಾಗವನ್ನು ಮಸೀದಿಯ ನಿರ್ಮಾಣಕ್ಕೆ ಬಳಸಲಾಗಿದ್ದು, ಅದರ ಮೇಲೆ ಹಿಂದೂ ದೇವತೆಗಳ ಮೂರ್ತಿಗಳಿವೆ. ಇಂದಿಗೂ ಈ ಮಸೀದಿಯಲ್ಲಿ ದೇವಾಲಯದ ಈ ಭಾಗಗಳನ್ನು ಕಾಣಬಹುದು.

೩. ಕುತುಬ್ ಮಿನಾರ್ ಅಲ್ಲ, ಅದು ಧ್ರುವ ಅಥವಾ ಮೇರು ಸ್ತಂಭ !

ಇಂದು ಈ ಸ್ಥಳವನ್ನು ಮಹರೌಲಿ ಎಂದು ಕರೆಯಲಾಗುತ್ತದೆ. ಇದರ ಮೂಲ ಹೆಸರು ‘ಮಿಹರಾವಲಿ’ ಯಾಗಿದೆ. ಈ ಸ್ಥಳವನ್ನು ೪ ನೇ ಶತಮಾನದಲ್ಲಿ ರಾಜ ವಿಕ್ರಮಾದಿತ್ಯನ ನವರತ್ನಗಳಲ್ಲಿ ಒಬ್ಬರಾದ ಗಣಿತಜ್ಞ ವರಾಹಮಿಹಿರ ಸ್ಥಾಪಿಸಿದ್ದರು. ಅವರು ಗ್ರಹಗಳ ಚಲನೆಯನ್ನು ಅಧ್ಯಯನ ಮಾಡಿ ಈ ಬೃಹತ್ ಸ್ತಂಭವನ್ನು ನಿರ್ಮಿಸಿದರು, ಇದನ್ನು ಇಂದು ‘ಕುತುಬ್ ಮಿನಾರ್’ ಎಂದು ಕರೆಯಲಾಗುತ್ತದೆ. ಇದನ್ನು ‘ಧ್ರುವ ಸ್ತಂಭ’ ಅಥವಾ ‘ಮೇರು ಸ್ತಂಭ’ ಎಂದು ಕರೆಯಲಾಗುತ್ತಿತ್ತು; ಆದರೆ ಮುಸ್ಲಿಂ ಆಕ್ರಮಣಕಾರರು ಇದಕ್ಕೆ ಕುತುಬ್ ಮಿನಾರ್ ಎಂದು ಹೆಸರಿಸಿದರು.

೪. ಪುರಾತತ್ವ ಇಲಾಖೆಯಲ್ಲಿದೆ ಇದರ ಪುರಾವೆಗಳು !

ಈ ಪ್ರದೇಶದಲ್ಲಿ ೨೭ ನಕ್ಷತ್ರಗಳ ಸಂಕೇತಿಸುವ ೨೭ ದೇವಾಲಯಗಳಿದ್ದವು. ಜೈನ ತೀರ್ಥಂಕರರ ಜೊತೆಗೆ ಭಗವಾನ ವಿಷ್ಣು, ಶಿವ ಮತ್ತು ಗಣೇಶನ ದೇವಾಲಯಗಳು ಇದ್ದವು. ಅವುಗಳನ್ನು ನೆಲಸಮಗೊಳಿಸಿದ ನಂತರ ಮಸೀದಿಯನ್ನು ನಿರ್ಮಿಸಲಾಗಿದೆ. ಪುರಾತತ್ವ ಇಲಾಖೆಯ ಸಮೀಕ್ಷೆಯೂ ‘ಹಿಂದೂ ಮತ್ತು ಜೈನ ದೇವಾಲಯಗಳನ್ನು ನೆಲಸಮ ಮಾಡಲಾಗಿದೆ ಮತ್ತು ಇಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ’ ಎಂದು ಹೇಳಿದೆ.

೫. ಸರಕಾರಕ್ಕೆ ಇತಿಹಾಸ ತಿಳಿದಿದ್ದರೂ ನಿಷ್ಕ್ರಿಯವಾಗಿದೆ !

ಈ ಮಸೀದಿಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ, ಸರಕಾರವು ಹಿಂದೂ ಮತ್ತು ಜೈನರಿಗೆ ತಮ್ಮ ಪರ ವಾದ ಮಂಡಿಸಲು ಅವಕಾಶ ನೀಡಲಿಲ್ಲ. ಮತ್ತೊಂದೆಡೆ ಮುಸ್ಲಿಮರು ಅದನ್ನು ಬಳಸಲಿಲ್ಲ. ಇದು ವಕ್ಫ್ ಬೋರ್ಡ್‌ನ ಜಮೀನು ಅಲ್ಲ. ಯಾರೂ ಅದನ್ನು ತಮ್ಮದೆಂದು ಹೇಳಿಕೊಳ್ಳುವುದಿಲ್ಲ. ಈ ಸ್ಥಳವು ಪ್ರಸ್ತುತ ಸರಕಾರದ ನಿಯಂತ್ರಣದಲ್ಲಿದೆ. ಸರಕಾರವು ದೇವಾಲಯಗಳನ್ನು ಪುನರ್ನಿರ್ಮಿಸಿ ಅದಕ್ಕಾಗಿ ಒಂದು ಟ್ರಸ್ಟ್ ಸ್ಥಾಪಿಸಬೇಕು.