ಮಸೂದೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ
|
ಬೆಂಗಳೂರು – ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆಯನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಕಾನೂನಿನ ಪ್ರಕಾರ, ಹಸು ಮತ್ತು ಕರುಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿರುತ್ತದೆ. ೧೩ ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ. ಗೋಮಾಂಸ ಮಾರಾಟ ಮತ್ತು ಸಾಗಣೆ ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹಸು ಅನಾರೋಗ್ಯದಿಂದ ಬಳಲುತ್ತಿರುವಾಗ ಮತ್ತು ಇತರ ಹಸುಗಳಿಗೆ ಸೋಂಕು ತಗಲುವಂತಹ ಸ್ತಿತಿಯಿದ್ದರೆ ಮಾತ್ರ ಹಸುಗಳನ್ನು ಕೊಲ್ಲಲು ಅನುಮತಿ ಇದೆ.
(ಸೌಜನ್ಯ : Republic World)
ಗೋಹತ್ಯೆಯ ಪ್ರಕರಣಗಳನ್ನು ಶೀಘ್ರ ನ್ಯಾಯಾಲಯದಲ್ಲಿ ನಡೆಸುವುದರೊಂದಿಗೆ ಹಸುಗಳ ಸುರಕ್ಷತೆಗಾಗಿ ಗೋಶಾಲೆಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮಸೂದೆಯನ್ನು ವಿಧಾನಸಭೆಯಲ್ಲಿ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು. ಈ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರ ಸಭೆ ಕರೆದಿದ್ದಾರೆ.