ಅಲ್ಲಾಹನ ಹೆಸರಿನಲ್ಲಿ ಬಾಂಗ್ಲಾದೇಶದ ಮಸೀದಿಗಳಲ್ಲಿ ಮತ್ತು ಮದರಸಾಗಳಲ್ಲಿ ಪ್ರತಿದಿನ ಅತ್ಯಾಚಾರ ನಡೆಯುತ್ತದೆ ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರಿನ್ ಅವರ ಆರೋಪ

ಬಾಂಗ್ಲಾದೇಶದಲ್ಲಿ ಈ ರೀತಿಯಾಗುತ್ತಿದ್ದರೆ, ವಿಶ್ವದ ೧೫೭ ಇಸ್ಲಾಮಿಕ್ ದೇಶಗಳಲ್ಲಿ, ಹಾಗೆಯೇ ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತರು ಇರುವ ಭಾರತದಲ್ಲಿ ಏನಾಗುತ್ತಿದೆ, ಎಂಬುದು ಬಯಲಾಗಬೇಕೆಂದು ಯಾರಿಗಾದರು ಅನಿಸಿದರೆ ಅದರಲ್ಲಿ ಆಶ್ಚರ್ಯವೇನಿದೆ ?

ಲೇಖಕಿ ತಸ್ಲೀಮಾ ನಸ್ರಿನ್

ನವ ದೆಹಲಿ – ಬಾಂಗ್ಲಾದೇಶದ ಮಸೀದಿ ಮತ್ತು ಮದರಸಾಗಳಲ್ಲಿ ಪ್ರತಿದಿನ ಅತ್ಯಾಚಾರ ನಡೆಯುತ್ತಿದೆ. ಅಲ್ಲಾಹನ ಹೆಸರಿನಲ್ಲಿ ಅತ್ಯಾಚಾರ ನಡೆಯುತ್ತಿದೆ. ಮದರಸಾದಲ್ಲಿ ಅತ್ಯಾಚಾರಿ ಶಿಕ್ಷಕ ಮತ್ತು ಮಸೀದಿಯಲ್ಲಿ ಅತ್ಯಾಚಾರಿ ಇಮಾಮ್ ಅವರಿಗೆ ದಿನಕ್ಕೆ ಐದು ಬಾರಿ ನಮಾಜ ಪಠಣ ಮಾಡಿದರೆ, ಅಲ್ಲಾಹನು ಅವರನ್ನು ಕ್ಷಮಿಸುವನು ಮತ್ತು ಅವರು ಈ ಪಾಪದಿಂದ ಮುಕ್ತರಾಗುತ್ತಾರೆ ಎಂದು ಭಾವಿಸುತ್ತಾರೆ ಎಂದು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಲೇಖಕಿ ತಸ್ಲೀಮಾ ನಸ್ರಿನ್ ಟ್ವೀಟ್ ಮಾಡಿದ್ದಾರೆ. ಮತಾಂಧರನ್ನು ಬಹಿರಂಗವಾಗಿ ವಿರೋಧಿಸಿದ್ದಕ್ಕಾಗಿ, ಅದೇ ರೀತಿ ಬಾಗ್ಲಾದೇಶದ ಹಿಂದೂಗಳ ಮೇಲೆ ಆಗುತ್ತಿರುವ ಅತ್ಯಾಚಾರಗಳ ಬಗ್ಗೆ ಬರೆದ ‘ಲಜ್ಜಾ’ ಈ ಕಾದಂಬರಿಯಿಂದಾಗಿ ಅವರನ್ನು ಹತ್ಯೆ ಮಾಡುವ ಫತ್ವಾ ಜಾರಿಗೊಳಿಸಲಾಗಿತ್ತು. ಅದಕ್ಕಾಗಿಯೇ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.