ಬಂಗಾಲದಲ್ಲಿ ಭಾರತ ಮಾತೆಯ ಪೂಜೆಯ ಆಯೋಜನೆಯ ಭಿತ್ತಿಪತ್ರವನ್ನು ಹಾಕಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ

ತೃಣಮೂಲ ಕಾಂಗ್ರೆಸ್ ನಿಂದ ಹಲ್ಲೆ ಎಂದು ಬಿಜೆಪಿ ಆರೋಪ

‘ಬಂಗಾಲವೆಂದರೆ ಬಿಜೆಪಿ ಕಾರ್ಯಕರ್ತರಿಗೆ ಹೊಡೆಸಿಕೊಳ್ಳುವ ಸ್ಥಳ’ ಎಂದು ಯಾರಾದರೂ ಹೇಳಿದರೆ ಆಶ್ಚರ್ಯಪಡಬೇಕಾಗಿಲ್ಲ ! ಬಿಜೆಪಿ ಸರಕಾರ ಕೇಂದ್ರದಲ್ಲಿದ್ದಾಗ ಇಲ್ಲಿಯವರೆಗೆ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಗೂಂಡಾಗಿರಿಯನ್ನು ತಡೆಯುವ ಪ್ರಯತ್ನ ಮಾಡಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕೋಲಕಾತಾ (ಬಂಗಾಲ) – ಬಂಗಾಲದ ರಾಜರಹಾಟ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ವಾಹನಗಳನ್ನು ಧ್ವಂಸ ಮಾಡಲಾಯಿತು. ತೃಣಮೂಲ ಕಾಂಗ್ರೆಸ್ ಮುಖಂಡ ತಪನ್ ಚಟರ್ಜಿ ಅವರ ಆದೇಶದ ಮೇರೆಗೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ವತಿಯಿಂದ ಇಲ್ಲಿ ಭಾರತ ಮಾತೆಯ ಪೂಜೆಯ ಆಯೋಜನೆ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತರು ಇಲ್ಲಿನ ಡಿರೆಜಿಯೊ ಮೆಮೋರಿಯಲ್ ಕಾಲೇಜು ಬಳಿ ಇದರ ಭಿತ್ತಿಪತ್ರಗಳನ್ನು ಹಾಕುತ್ತಿರುವಾಗ ಈ ದಾಳಿ ನಡೆದಿದೆ.

೧. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಗೋರುಫಾಡಿ ಕಚೇರಿ ಬಳಿ ನಾಡ ಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಮುಖಂಡ ಅರ್ಜುನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

೨. ಘಟನೆಗೆ ಒಂದು ದಿನ ಮೊದಲು ಬಿಜೆಪಿ ಅಸನಸೊಲ್‌ನಲ್ಲಿ ದ್ವಿಚಕ್ರ ವಾಹನ ಮೆರವಣಿಗೆಯನ್ನು ಮಾಡಿದ್ದರು. ಅದರ ಮೇಲೆ ಗುಂಡು ಹಾರಾಟ ಹಾಗೂ ಕಲ್ಲೆಸೆತ ಮಾಡಲಾಗಿತ್ತು. ಈ ಸಮಯದಲ್ಲಿ ನಾಡಬಾಂಬ್ ಸಹ ಎಸೆಯಲಾಯಿತು. ಇದರಲ್ಲಿ ಐದರಿಂದ ಏಳು ಜನರು ಗಾಯಗೊಂಡಿದ್ದಾರೆ. ಪೊಲೀಸರಿಗೆ ಸಹಾಯ ಕೇಳಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಆರೋಪಿಸಿದೆ.