ಮಾದಕ ಪದಾರ್ಥದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಟಿ ಸಂಜನಾ ಗುಲರಾಣಿಯವರ ಬಲವಂತವಾಗಿ ಮತಾಂತರ
ಮಾದಕ ಪದಾರ್ಥದ ಪ್ರಕರಣದಲ್ಲಿ ೩ ತಿಂಗಳು ಸೆರೆಮನೆಯಲ್ಲಿದ್ದು ಅನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ಸಂಜನಾ ಗುಲ್ರಾನಿ ಇವರ ಇಚ್ಛೆಯ ವಿರುದ್ಧ ಓರ್ವ ಮೌಲ್ವಿಯು ಇಸ್ಲಾಂಗೆ ಮತಾಂತರ ಮಾಡಿದ್ದಾರೆ, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎನ್.ಪಿ. ಇವರು ಕಾಟನಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.