ಚಲನಚಿತ್ರಗಳ ‘ಐಟಂ ಡ್ಯಾನ್ಸ್’, ಅಶ್ಲೀಲ ಚಲನಚಿತ್ರಗಳು ಅತ್ಯಾಚಾರದ ಮಾನಸಿಕತೆ ಸೃಷ್ಟಿಸುತ್ತವೆ ! – ರಾಷ್ಟ್ರೀಯ ಜನತಾದಳದ ನಾಯಕ ಶಿವಾನಂದ್ ತಿವಾರಿ

ಡುಮಕಾ (ಜಾರ್ಖಂಡ್) ನಲ್ಲಿ ಗಂಡನ ಎದುರೇ ವಿವಾಹಿತ ಮಹಿಳೆಯ ಮೇಲೆ ೧೭ ಜನರಿಂದ ಸಾಮೂಹಿಕ ಅತ್ಯಾಚಾರವಾದ ಪ್ರಕರಣ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸದ ಕಾರಣ ಇಂತಹ ಘಟನೆಗಳು ಸಂಭವಿಸುತ್ತವೆ. ಜೊತೆಗೆ ಸಮಾಜದಲ್ಲಿ ನೈತಿಕತೆಯನ್ನು ಸೃಷ್ಟಿಸಲು ಜನರಿಗೆ ಸಾಧನೆಯನ್ನು ಕಲಿಸದ ಪರಿಣಾಮವಾಗಿದೆ. ಸಾಧನೆಯನ್ನು ಕಲಿಸಿದ್ದರೆ, ಈ ರೀತಿಯಲ್ಲಿ ಆಗುತ್ತಿರಲಿಲ್ಲ !

ರಾಷ್ಟ್ರೀಯ ಜನತಾದಳದ ನಾಯಕ ಶಿವಾನಂದ್ ತಿವಾರಿ

ರಾಂಚಿ (ಜಾರ್ಖಂಡ್) – ಬುಡಕಟ್ಟು ಪ್ರದೇಶದಲ್ಲಿ ಹುಡುಗಿಯ ಅಥವಾ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಬುಡಕಟ್ಟು ಸಂಸ್ಕೃತಿಯಲ್ಲಿ ಅತ್ಯಾಚಾರಕ್ಕೆ ಸ್ಥಾನವಿಲ್ಲ; ಆದರೆ ಆಧುನಿಕ ಸಮಾಜದ ಹೆಸರಿನಲ್ಲಿ ಪರಿಚಯಿಸಲ್ಪಟ್ಟ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಭೋಗದ ಸಾಧನವಾಗಿ ಚಿತ್ರಿಸಲಾಗಿದೆ. ಚಲನಚಿತ್ರಗಳ ಐಟಮ್ ಡಾನ್ಸ್, ಜಾಹೀರಾತುಗಳು, ಸಂಚಾರವಣಿಯಲ್ಲಿ ಬಿತ್ತರಿಸಲ್ಪಡುವ ಅಶ್ಲೀಲ ಚಿತ್ರಗಳು ಅತ್ಯಾಚಾರದ ಮಾನಸಿಕತೆ ಸೃಷ್ಟಿಸುತ್ತಿವೆ ಎಂದು ರಾಷ್ಟ್ರೀಯ ಜನತಾದಳದ ನಾಯಕ ಶಿವಾನಂದ ತಿವಾರಿ ಹೇಳಿದ್ದಾರೆ. ರಾಜ್ಯದ ಡುಮಕಾದಲ್ಲಿ ವಿವಾಹಿತ ಮಹಿಳೆಯನ್ನು ಅಪಹರಿಸಿ ೧೭ ಜನರು ಅವಳ ಪತಿಯ ಮುಂದೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಪೀಡಿತೆಯು ಐದು ಮಕ್ಕಳ ತಾಯಿಯಾಗಿದ್ದಾಳೆ. ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ತಿವಾರಿ ಈ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ತಿವಾರಿ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಬುಡಕಟ್ಟು ಪ್ರದೇಶಗಳಿಗೆ ತಲುಪುವುದು ಎಂದರೆ ತಳಮಟ್ಟವನ್ನು ತಲುಪುವುದು ಎಂದರ್ಥವಾಗಿದೆ. ಎಲ್ಲಿಯವರೆಗೆ ಅತ್ಯಾಚಾರದ ಮನಸ್ಥಿತಿಯನ್ನು ಸೃಷ್ಟಿಸುವ ವಿಷಯ ಇದೆಯೋ, ಅಲ್ಲಿಯವರೆಗೆ ಇದನ್ನು ಹೇಗೆ ನಿಯಂತ್ರಿಸುವುದು ? ‘ನಿರ್ಭಯಾ’ ನಂತಹ ಘಟನೆಗಳ ನಂತರ ಕಾನೂನುಗಳನ್ನು ಜಾರಿಗೆ ತರಲಾಯಿತು; ಆದರೆ ಶಿಕ್ಷೆಯನ್ನು ಹೆಚ್ಚಿಸುವುದರಿಂದ ಈ ವಿಷಯಗಳು ನಿಲ್ಲುತ್ತವೆ ಎಂಬ ಕಲ್ಪನೆ ತಪ್ಪೆಂದು ನಾವು ಆ ಸಮಯದಲ್ಲಿ ಹೇಳಿದ್ದೇವೆ. ಅತ್ಯಾಚಾರವನ್ನು ಪ್ರಚೋದಿಸುವ ಸಂಗತಿಗಳು ಇರುವವರೆಗೂ ಅದು ನಿಲ್ಲುವುದಿಲ್ಲ, ಮತ್ತು ಅದನ್ನೇ ನಾನು ಇಂದಿಗೂ ಹೇಳುತ್ತಿದ್ದೇನೆ ಎಂದು ಹೇಳಿದರು.