‘ಭಗವಾನ್ ಶ್ರೀರಾಮ ಸಮಾಜವಾದಿ ಪಕ್ಷದವರಾಗಿದ್ದು, ನಾವೂ ಕೂಡಾ ರಾಮನ ಭಕ್ತರಾಗಿದ್ದೇವೆ !’(ಅಂತೆ) – ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ

  • ಯಾದವ ಕುಟುಂಬವು ರಾಮನ ಭಕ್ತರಾಗಿದ್ದರೆ, ಅಖಿಲೇಶ ಯಾದವ ಅವರ ತಂದೆ ಮುಲಾಯಮ್ ಸಿಂಗ್ ಯಾದವ ಅವರು ಮುಖ್ಯಮಂತ್ರಿಯಾಗಿದ್ದಾಗ, ಕಾರಸೇವಕರ ಮೇಲೆ ಗುಂಡು ಹಾರಿಸಿ ಅವರ ಮೃತದೇಹಗಳನ್ನು ಕಲ್ಲುಗಳಿಂದ ಕಟ್ಟಿ ಶರಯೂ ನದಿಯಲ್ಲಿ ಮುಳುಗಿಸುವಂತೆ ಆದೇಶಿಸುತ್ತಿರಲಿಲ್ಲ ! ಈಗ ಹಿಂದೂಗಳು ಜಾಗೃತಗೊಂಡಿದ್ದಾರೆ, ಅದಕ್ಕೆ ಯಾದವ ಕುಟುಂಬದವರಿಗೆ ‘ರಾಮನ’ ನೆನಪಾಗುತ್ತಿದೆ, ಇದನ್ನು ಅರ್ಥ ಮಾಡಿಕೊಳ್ಳದಷ್ಟು ಹಿಂದೂಗಳು ದಡ್ಡರಲ್ಲ !
  • ಯಾದವ ಕುಟುಂಬವು ರಾಮ ಮತ್ತು ಕೃಷ್ಣನ ಭಕ್ತರಾಗಿದ್ದರೆ, ಶ್ರೀ ರಾಮಜನ್ಮಭೂಮಿ ಮತ್ತು ಶ್ರೀಕೃಷ್ಣ ಜನ್ಮಭೂಮಿಯನ್ನು ಮತಾಂಧರ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸಿ ಅಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸುತ್ತಿದ್ದರು; ಆದರೆ ಅವರು ಹಾಗೆ ಏನೂ ಮಾಡಿಲ್ಲ. ಇದರಿಂದ ಅವರು ಎಷ್ಟು ಕಪಟರು ಎಂಬುದು ಸ್ಪಷ್ಟವಾಗುತ್ತದೆ !

ಅಯೋಧ್ಯೆ – ಭಗವಾನ ಶ್ರೀರಾಮ ಮತ್ತು ಶ್ರೀಕೃಷ್ಣನ ಮೇಲೆ ಯಾರಿಗೂ ಹಕ್ಕಿಲ್ಲ. ಭಗವಾನ್ ಶ್ರೀರಾಮ ಕೂಡ ಸಮಾಜವಾದಿ ಪಕ್ಷಕ್ಕೆ ಸೇರಿದವರು. ನಾವೂ ರಾಮ ಮತ್ತು ಕೃಷ್ಣ ಭಕ್ತರಾಗಿದ್ದೇವೆ. ಭಗವಾನ ರಾಮನಿಗೆ ಪೂಜೆ ಸಲ್ಲಿಸಲು ಶೀಘ್ರದಲ್ಲೇ ತಮ್ಮ ಕುಟುಂಬ ಸದಸ್ಯರೊಂದಿಗೆ ಅಯೋಧ್ಯೆಗೆ ಹೋಗುವುದಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಹೇಳಿದ್ದಾರೆ. ಅವರು ಸದ್ಯ ರಾಜ್ಯದ ಪ್ರವಾಸದಲ್ಲಿದ್ದಾರೆ. ಈ ಸಮಯದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಅಖಿಲೇಶ ಯಾದವ ಅವರು ಅಯೋಧ್ಯೆಯ ಅಭಿವೃದ್ಧಿಗಾಗಿ ತಮ್ಮ ಸರಕಾರದ ಅವಧಿಯಲ್ಲಿ ಮಾಡಿದ ವಿವಿಧ ಕಾರ್ಯಗಳ ಪಟ್ಟಿಯನ್ನು ಓದಿದರು. ‘ಅಯೋಧ್ಯೆಯಲ್ಲಿ ವಿವಿಧ ನದಿತೀರಗಳು, ಜೊತೆಗೆ ಭಜನಾಸ್ಥಳಗಳನ್ನು ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಯಿತು.

(ಸೌಜನ್ಯ : Republic World)

ಅಯೋಧ್ಯೆಯ ಜನ್ಮಭೂಮಿ ಸ್ಥಳ, ಪರಿಕ್ರಮದ ಮಾರ್ಗದುದ್ದಕ್ಕೂ ಪಾರಿಜಾತ, ಪಪ್ಪಾಯಿ, ಆಲದ ಮರಗಳಂತಹ ಮರಗಳನ್ನು ನೆಡಲಾಗಿದೆ’, ಎಂದು ಹೇಳಿದರು.