ಲವ್ ಜಿಹಾದ್‌ನಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಮಸೀದಿಗಳು ಮತ್ತು ಮದರಸಾಗಳಿಗೆ ಸಿಗುವ ಸರಕಾರಿ ಅನುದಾನ ರದ್ದುಪಡಿಸಲಾಗುವುದು

ಮಧ್ಯಪ್ರದೇಶ ಸರಕಾರದ ಪ್ರಸ್ತಾಪಿಸಲಾದ ಜಿಹಾದ್ ವಿರೋಧಿ ಕಾನೂನು

ಇಂತಹ ಕಾನೂನು ಭಾರತದಾದ್ಯಂತ ಜಾರಿಗೆ ಬರಬೇಕು ಎಂದು ಹಿಂದೂಗಳ ಅನಿಸಿಕೆ !

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶ ಸರಕಾರವು ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೊಳಿಸುತ್ತಿದೆ. ಈ ಮಸೂದೆಯನ್ನು ‘ಧರ್ಮ ಸ್ವಾತಂತ್ರ್ಯ’ ಎಂದು ಕರೆಯಲಾಗುವುದು. ಧಾರ್ಮಿಕ ಸಂಘಟನೆಗಳು ಲವ್ ಜಿಹಾದ್ ಮತ್ತು ಮತಾಂತರಗೊಳಿಸುವ ಕಾರ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದರೆ ಹಾಗೂ ಇಂತಹ ಸಂಘಟನೆಗಳಿಗೆ ಸರಕಾರದಿಂದ ಸೌಲಭ್ಯಗಳು ಸಿಗುತ್ತಿದ್ದರೆ, ಅವುಗಳನ್ನು ಅನುದಾನದ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಚರ್ಚ್, ಮಸೀದಿ ಅಥವಾ ಮದರಸಾಗಳು ಭಾಗಿಯಾಗಿದ್ದರೆ, ಸರಕಾರವು ಅವರಿಗೆ ನೀಡಿದ ಆರ್ಥಿಕ ನೆರವು, ಭೂಮಿ ಇತ್ಯಾದಿಗಳನ್ನು ಹಿಂಪಡೆಯುತ್ತದೆ. ಮಸೂದೆಯನ್ನು ಡಿಸೆಂಬರ್ ಅಂತ್ಯದೊಳಗೆ ಅಂಗೀಕರಿಸಲಾಗುವುದು.

ಈ ಕಾನೂನಿನ ಪ್ರಕಾರ ಅಪರಾಧ ಸಾಬೀತಾದರೆ ಆರೋಪಿಗೆ ೧೦ ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ೧ ಲಕ್ಷ ರೂಪಾಯಿಗಳವರೆಗೆ ದಂಡ ಆಗಬಹುದು. ಅಲ್ಲದೆ, ವಿವಾಹಕ್ಕಾಗಿ ಮಾತ್ರ ಮತಾಂತರ ಮಾಡಿದರೆ, ಈ ಮದುವೆಯನ್ನು ರದ್ದುಗೊಳಿಸಲಾಗುತ್ತದೆ.