ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎನ್.ಪಿ. ಇವರಿಂದ ದೂರು
ಬೆಂಗಳೂರು – ಮಾದಕ ಪದಾರ್ಥದ ಪ್ರಕರಣದಲ್ಲಿ ೩ ತಿಂಗಳು ಸೆರೆಮನೆಯಲ್ಲಿದ್ದು ಅನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ಸಂಜನಾ ಗುಲ್ರಾನಿ ಇವರ ಇಚ್ಛೆಯ ವಿರುದ್ಧ ಓರ್ವ ಮೌಲ್ವಿಯು ಇಸ್ಲಾಂಗೆ ಮತಾಂತರ ಮಾಡಿದ್ದಾರೆ, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎನ್.ಪಿ. ಇವರು ಕಾಟನಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
೧. ನ್ಯಾಯವಾದಿ ಅಮೃತೇಶ ಇವರು ನೀಡಿದ ದೂರಿನಲ್ಲಿ, ಸಂಜನಾ ಇವರನ್ನು ೯ ಅಕ್ಟೋಬರ್ ೨೦೧೮ ರಂದು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಿಸಲಾಗಿದೆ. ಅಲ್ಲದೇ ಅವರಿಗೆ ‘ಮಹಿರಾ’ ಎಂದು ಮರುನಾಮಕರಣ ಸಹ ಮಾಡಲಾಗಿದೆ. ಅದಕ್ಕೆ ದಾಖಲೆಯಾಗಿ ಮರುನಾಮಕರಣ ಮಾಡಿದ ಪ್ರಮಾಣಪತ್ರವನ್ನು ಸಹ ನೀಡಲಾಗಿದೆ; ಆದರೆ ಈ ಮತಾಂತರ ನಟಿಯ ಇಚ್ಛೆಗೆ ವಿರುದ್ಧ ಮಾಡಲಾಗಿದೆ ಎಂದು ಎಫ್.ಐ.ಆರ್. ನಲ್ಲಿ ದಾಖಲಿಸಲಾಗಿದೆ.
೨. ಈ ಬಗ್ಗೆ ಕಾಟನಪೇಟೆ ಪೊಲೀಸರು ಕಾನೂನು ಸಲಹೆಯನ್ನು ಪಡೆದು ಮುಂದಿನ ಕ್ರಮ ಜರುಗಿಸಲು ನಿರ್ಧರಿಸಿದ್ದಾರೆ.
೩. ಸಂಜನಾರವರು ಕಾರ್ಡಿಯಾಲಾಜಿಸ್ಟ ಆಗಿರುವ ಡಾ. ಅಜೀಜ್ ಎನ್ನುವವರೊಂದಿಗೆ ವಿವಾಹ ಆಗಿರುವ ಛಾಯಾಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆ ಸಮಯದಲ್ಲಿ ಸಂಜನಾ ಇವರನ್ನು ದಾರುಲ ಉಲಮ ಶಾವಲಿ ಲುಲ್ಲಾ ಎಂಬವರು ಮತಾಂತರ ಮಾಡಿ ಆಕೆಯ ಹೆಸರನ್ನೂ ಬದಲಾಯಿಸಿರುವ ಸಾಕ್ಷಿಗಳೂ ಪತ್ತೆಯಾಗಿವೆ ಎಂದು ಹೇಳಲಾಗಿತ್ತು.