ಕೇರಳದಲ್ಲಿ ಹಲಾಲ ಮಾಂಸಕ್ಕೆ ಕ್ರೈಸ್ತರಿಂದ ವಿರೋಧ

ಕ್ರೈಸ್ತರಿಗೆ ಹಿಂದೂ ಸಂಘಟನೆಯಿಂದ ಬೆಂಬಲ

ತಿರುವನಂತಪುರಮ್(ಕೇರಳ) – ಕ್ರಿಸ್ಮಸ್ ಕಾಲದಲ್ಲಿ ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕೇರಳದ ಕ್ರೈಸ್ತರು ನಿರ್ಧರಿಸಿದ್ದಾರೆ. ‘ಯೇಸುವಿನ ಹುಟ್ಟಿದ ದಿನ ಹಲಾಲ್ ಮಾಂಸ ಏಕೆ ಸೇವಿಸಬೇಕು ?’ ಎಂದು ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ. ಕ್ರೈಸ್ತರ ಸಂಘಟನೆಯಾದ ‘ಚರ್ಚಸ್ ಆಕ್ಸಲರಿ ಆಫ್ ಸೋಶಲ ಆಕ್ಷನ್’ ಇದು ಕ್ರೈಸ್ತರಿಗೆ, ‘ಹಲಾಲ್ ಮಾಂಸವನ್ನು ಸೇವಿಸಬಾರದು” ಎಂದು ಕರೆ ನೀಡಿದೆ. ಇದಕ್ಕೆ ಹಿಂದೂಗಳ ಸಂಘಟನೆಗಳೂ ಬೆಂಬಲ ನೀಡಿವೆ. ಹಿಂದೂ ಸಂಘಟನೆಗಳ ಹೇಳಿಕೆಯ ಪ್ರಕಾರ, ರಾಜ್ಯದಲ್ಲಿ ಹಿಂದೂಗಳಿಗೂ ಹಲಾಲ ಮಾಂಸವನ್ನು ಮಾರಾಟ ಮಾಡಲು ಒತ್ತಾಯಿಸಲಾಗುತ್ತಿದೆ.

ಇಂಡಿಯನ್ ಯುನಿಯನ್ ಮುಸ್ಲೀಮ್ ಲೀಗ್ ಈ ನಿರ್ಧಾರದ ಬಗ್ಗೆ, ‘ಇದು ಮುಸಲ್ಮಾನರ ಮಾಂಸದ ಅಂಗಡಿಗಳ ಮೇಲೆ ಬಹಿಷ್ಕಾರ ಹಾಕಲು ಮಾಡಿದಂತಹ ಪ್ರಯತ್ನವಾಗಿದೆ’ ಎಂದು ಹೇಳಿದೆ.

ಹಲಾಲ ಮಾಂಸ ಎಂದರೇನು ?

‘ಝಟಕಾ ಸರ್ಟಿಫಿಕೇಶನ್ ಅಥಾರಟಿ’ಯ ಅಧ್ಯಕ್ಷ ರವಿ ರಂಜನ ಸಿಂಹ ಇವರು, ಹಿಂದು, ಸಿಕ್ಖ್ ಇತ್ಯಾದಿ ಭಾರತೀಯ ಧರ್ಮಗಳಲ್ಲಿ ‘ಝಟಕಾ’ ಪದ್ದತಿಯಿಂದ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಇದರಲ್ಲಿ ಪ್ರಾಣಿಯ ಕುತ್ತಿಗೆಯನ್ನು ಒಂದೇ ಏಟಿನಲ್ಲಿ ಕತ್ತರಿಸಲಾಗುತ್ತದೆ. ಇದರಿಂದ ಪ್ರಾಣಿಗೆ ಕಡಿಮೆ ಪ್ರಮಾಣದಲ್ಲಿ ತೊಂದರೆಯಾಗುತ್ತದೆ. ತದ್ವಿರುದ್ದ ‘ಹಲಾಲ’ ಪದ್ದತಿಯಲ್ಲಿ ಪ್ರಾಣಿಗಳ ಕತ್ತಿನ ನರವನ್ನು ಸೀಳಿ ಅದನ್ನು ಹಾಗೇ ಬಿಡಲಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ರಕ್ತ ಸುರಿಯುತ್ತದೆ ಹಾಗೂ ಒದ್ದಾಡುತ್ತಾ ಸಾಯುತ್ತದೆ. ಈ ಪ್ರಾಣಿಯನ್ನು ಬಲಿ ನೀಡುವಾಗ ಅದರ ಮುಖವನ್ನು ಮಕ್ಕಾದ ದಿಕ್ಕಿನತ್ತ ಮಾಡಲಾಗುತ್ತದೆ, ಜೊತೆಗೆ ಈ ಕೆಲಸವನ್ನು ಮುಸಲ್ಮಾನೇತರರಿಗೆ ನೀಡುವುದಿಲ್ಲ. ಇಂದು ‘ಮ್ಯಾಕ್‌ಡೊನಾಲ್ಡ್’ ಹಾಗೂ ‘ಲುಸಿಯಸ್’ ನಂತಹ ಸಂಸ್ಥೆಗಳು ಕೇವಲ ಹಲಾಲ ಮಾಂಸವನ್ನು ಮಾರಾಟ ಮಾಡುತ್ತದೆ ಎಂದು ಹೇಳಿದ್ದಾರೆ.