ಕಾಂಗ್ರೆಸ್‌ನ ಶಾಸಕರು ಉಪಸಭಾಪತಿಯನ್ನು ಸಭಾಪತಿಯ ಕುರ್ಚಿಯಿಂದ ಕೆಳಕ್ಕೆ ಎಳೆದರು
|
ಬೆಂಗಳೂರು – ಗೋಹತ್ಯೆ ನಿಷೇಧದ ಬಗ್ಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರ ಮಧ್ಯೆ ಘರ್ಷಣೆ ನಡೆಯಿತು. ಕಾಂಗ್ರೆಸ್‌ನ ಸದಸ್ಯರು ನೇರವಾಗಿ ಸಭಾಪತಿಯ ಜಾಗಕ್ಕೆ ಧಾವಿಸಿ ಉಪಸಭಾಪತಿಯನ್ನು ಕುರ್ಚಿಯಿಂದ ಎತ್ತಿದರು.
#WATCH Karnataka: Congress MLCs in Karnataka Assembly forcefully remove the chairman of the legislative council pic.twitter.com/XiefiNOgmq
— ANI (@ANI) December 15, 2020
೧. ಸದನದ ಕಾರ್ಯಕಲಾಪ ಪುನರಾರಂಭಿಸಿದ ಕೂಡಲೇ, ವಿಧಾನ ಪರಿಷತ್ತಿನ ಕಾಂಗ್ರೆಸ್ ಶಾಸಕರು ಉಪಸಭಾಪತಿ ಅವರನ್ನು ಬಲವಂತವಾಗಿ ಕುರ್ಚಿಯಿಂದ ತೆಗೆದುಹಾಕಿದರು. ‘ಉಪಸಭಾಪತಿಯು ಸಭಾಪತಿಯ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಅಸಂವಿಧಾನಿಕವಾಗಿದೆ’ ಎಂದು ಶಾಸಕರು ಹೇಳಿದರು. ಕೊನೆಗೆ ಭದ್ರತಾ ಸಿಬ್ಬಂದಿಗಳು ಮಧ್ಯಪ್ರವೇಶಿಸಬೇಕಾಯಿತು.
೨. ಉಪಮುಖ್ಯಮಂತ್ರಿ ಡಾ. ಅಶ್ವಥನಾರಾಯಣ ಮತ್ತು ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದ ನಡೆಯಿತು. ವಿಧಾನ ಪರಿಷತ್ತಿನ ಎಲ್ಲ ಶಾಸಕರಿಗೆ ಗೋಹತ್ಯೆ ನಿಷೇಧದ ವಿರುದ್ಧ ಮತ ಚಲಾಯಿಸಲು ಕಾಂಗ್ರೆಸ್ ವಿಪ್ ನೀಡಿತ್ತು. ಒಪ್ಪಿಗೆಯ ಮೊದಲು ಜನತಾದಳ (ಜಾತ್ಯತೀತ) ಸದಸ್ಯರಿಗೆ ಮಸೂದೆಯನ್ನು ‘ಆಯ್ಕೆ ಸಮಿತಿ’ಗೆ ಕಳುಹಿಸುವುದಿತ್ತು.
೩. ಈ ಘಟನೆಯ ಕುರಿತು ಮಾತನಾಡಿದ ಬಿಜೆಪಿ ಶಾಸಕ ಲೆಹರ್ ಸಿಂಗ್ ಸಿರೊಯಾ ಕೆಲವು ಶಾಸಕರು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ಬಲವಂತವಾಗಿ ಉಪಸಭಾಪತಿಯ ಕುರ್ಚಿಯನ್ನು ಎಳೆದರು. ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಇಂತಹ ಅವಮಾನಕರ ದಿನವನ್ನು ನಾವು ಎಂದೂ ನೋಡಿಲ್ಲ. ‘ಜನರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ’, ಈ ವಿಚಾರದಿಂದಾಗಿ ನಾಚಿಕೆಯಾಗುತ್ತದೆ ಎಂದು ಹೇಳಿದರು.
೪. ಆದರೆ ಕಾಂಗ್ರೆಸ್ ಶಾಸಕ ಪ್ರಕಾಶ ರಾಥೋಡ್ ಬಿಜೆಪಿಯನ್ನು ಟೀಕಿಸಿದರು. ಬಿಜೆಪಿ ಮತ್ತು ಜನತಾದಳ (ಜಾತ್ಯತೀತ) ಶಾಸಕರು ಸದನದ ಆದೇಶವಿಲ್ಲದೆ ಉಪಸಭಾಪತಿಯನ್ನು ಅಕ್ರಮವಾಗಿ ಕೂರಿಸಿದ್ದಾರೆ ಎಂದು ಅವರು ಹೇಳಿದರು. ಹಾಗೆ ಬಿಜೆಪಿ ಸಂವಿಧಾನದ ವಿರುದ್ಧ ಒಂದು ಹೆಜ್ಜೆ ಇಟ್ಟಿತು. ಕಾಂಗ್ರೆಸ್ ಅವರನ್ನು ಕುರ್ಚಿಯಿಂದ ಕೆಳಗಿಳಿಯುವಂತೆ ಹೇಳಿದರು. ಅದರ ನಂತರ ನಾವು ಅವರನ್ನು ಕುರ್ಚಿಯಿಂದ ಕೆಳಗಿಳಿಸಬೇಕಾಯಿತು.