ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಪೊಲೀಸರು, ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರು ಮುಸ್ಲಿಮರಾಗಿರಬೇಕು !

ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮುಸ್ಲಿಂ ಪೊಲೀಸರು, ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲು ಕೇಂದ್ರದ ಅಲ್ಪಸಂಖ್ಯಾತ ಸಚಿವಾಲಯ ಸರಕಾರಕ್ಕೆ ಶಿಫಾರಸು ಮಾಡಿರುವ ಬಗ್ಗೆ ವಾರ್ತೆ ಪ್ರಸಾರವಾಗಿದೆ.

ಪಂಜಾಬ್‌ನಲ್ಲಿ ಸಂಘದ ಸ್ವಯಂಸೇವಕನನ್ನು ಹತ್ಯೆ ಮಾಡಿದ ಖಲಿಸ್ತಾನಿಗಳ ಬ್ರಿಟನ್‌ನಲ್ಲಿ ಬಂಧನ ಮತ್ತು ಜಾಮೀನಿನ ಮೇಲೆ ಬಿಡುಗಡೆ

ಬ್ರಿಟನ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಪೊಲೀಸರು ಖಲಿಸ್ತಾನ್ ಬೆಂಬಲಿಗರನ್ನು ಬಂಧಿಸಿದ್ದಾರೆ. ಅವರ ಮೇಲೆ ೨೦೦೯ ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕ ರುಲ್ದಾ ಸಿಂಗ್ ಅವರನ್ನು ಕೊಲೆ ಮಾಡಿದ ಆರೋಪವಿದೆ. ಬಂಧಿತರಾದ ಗುರಶರಣಬೀರ್ ಸಿಂಗ್ ವಹಿವಾಲಾ, ಅಮೃತಬೀರ್ ಸಿಂಗ್ ವಹಿವಾಲಾ ಮತ್ತು ಪ್ಯಾರಾ ಸಿಂಗ್ ಗಿಲ್ ಎಲ್ಲರೂ ಬ್ರಿಟನ್ ಪ್ರಜೆಗಳಾಗಿದ್ದಾರೆ.

ಸಾಮೂಹಿಕ ಅತ್ಯಾಚಾರದ ದೂರು ನೀಡಲು ಹೋದ ಸಂತ್ರಸ್ತೆಯ ಮೇಲೆ ಮತ್ತೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ !

ಸ್ಥಳೀಯ ಜಲಾಲಾಬಾದ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರದ ದೂರು ನೀಡಲು ತೆರಳಿದ್ದ ಮದನಪುರ ಪ್ರದೇಶದ ೩೫ ವರ್ಷದ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯು ಮತ್ತೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

ಒಡಿಶಾದ ಪ್ರಾಚೀನ ದಕ್ಷೇಶ್ವರ ದೇವಸ್ಥಾನದ ೨೨ ಅಮೂಲ್ಯ ವಿಗ್ರಹಗಳ ಕಳ್ಳತನ

ಒಡಿಶಾದ ಖುರಧಾ ಜಿಲ್ಲೆಯ ಬಾನಪುರದಲ್ಲಿರುವ ಪ್ರಾಚೀನ ಮತ್ತು ಐತಿಹಾಸಿಕ ದಕ್ಷೇಶ್ವರ ದೇವಸ್ಥಾನದಲ್ಲಿ ಆದ ಕಳ್ಳತನದಲ್ಲಿ ಕಳ್ಳರು ೨೨ ಪ್ರಾಚೀನ ವಿಗ್ರಹಗಳನ್ನು ಕದ್ದೊಯ್ದಿದ್ದಾರೆ. ಕನಕ ದುರ್ಗಾ, ಗೋಪಿನಾಥ ದೇವ, ಕಲಿಯುಗೇಶ್ವರ ದೇವ, ಚಂದ್ರಶೇಖರ ದೇವ ಇತ್ಯಾದಿ ದೇವತೆಗಳು ಸೇರಿರುವ ಅಷ್ಟಧಾತುವಿನ ಈ ಎಲ್ಲಾ ವಿಗ್ರಹಗಳು ಕೋಟ್ಯಂತರ ರೂಪಾಯಿ ಮೌಲ್ಯದ ವಿಗ್ರಹಗಳಾಗಿವೆ.

ಬಂಗಾಲದ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳಿಗೆ ಮತದಾನದಿಂದ ತಡೆಯಲಾಗುತ್ತದೆ ! – ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಮುಂದಿನ ವರ್ಷ ಬಂಗಾಲದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಕಲಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಪುನೀತ್ ಕೌರ್ ಢಾಂಡಾ ಇವರು ಅರ್ಜಿ ಸಲ್ಲಿಸಿದ್ದಾರೆ.

ಮಹಿಳಾ ಪೊಲೀಸ್ ಪೇದೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಪೊಲೀಸ್ ಪೇದೆಯ ಬಂಧನ

ರಾಜೀವ ಕುಮಾರ ಎಂಬ ಪೊಲೀಸ ಪೇದೆಯು ಓರ್ವ ಮಹಿಳಾ ಪೊಲೀಸ್ ಪೇದೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು, ಪೊಲೀಸರು ರಾಜೀವ ಕುಮಾರನನ್ನು ಬಂಧಿಸಿದ್ದಾರೆ. ಪೀಡಿತೆಯ ಗಂಡ ಕೂಡ ಪೊಲೀಸ ಆಗಿದ್ದರಿಂದ ಅವರು ದೂರು ನೀಡಿದ ನಂತರ ರಾಜೀವ ಕುಮಾರನನ್ನು ಬಂಧಿಸಲಾಯಿತು.

ಖಡ್ಗದಿಂದ ಕೇಕ್ ಕತ್ತಿರಿಸಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಮೂವರ ಬಂಧನ

ಡಿಸೆಂಬರ ೨೧ ರಂದು ರಾಹುಲ ಕಾಂಬಳೆ, ರಾಹುಲ ಪವಾರ, ಫಕೀರಚಂದ ಪಾಥರವಟ ಹಾಗೂ ಅವರ ೧೫ ಸಹಚರರು ಕೊಳಗೇರಿ ಪ್ರದೇಶದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಮಯದಲ್ಲಿ ಅವರು ಖಡ್ಗದಿಂದ ಕೇಕ್ ಕತ್ತರಿಸಿದರು ಹಾಗೂ ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿ ಜನರಲ್ಲಿ ಅವರ ಬಗೆಗಿನ ದಿಗಿಲು ನಿರ್ಮಾಣ ಮಾಡಲು ಪ್ರಯತ್ನಿಸಿದರು.

ಉತ್ತರ ಪ್ರದೇಶ ಸರಕಾರ ರಾಜ್ಯದಲ್ಲಿ ೧೨೦ ಹೊಸ ಗೋಶಾಲೆಗಳನ್ನು ಸ್ಥಾಪಿಸಲಿದೆ

ಉತ್ತರ ಪ್ರದೇಶ ಸರಕಾರವು ರಾಜ್ಯ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿಯವರಿಗೆ ರಾಜ್ಯದಲ್ಲಿ ಹೊಸ ಗೋಶಾಲೆಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳಿಂದ ಹೊಸ ಪ್ರಸ್ತಾವನೆ ಪಡೆಯುವಂತೆ ಆದೇಶ ನೀಡಿದೆ. ಒಟ್ಟು ೧೨೦ ಗೋಶಾಲೆಗಳನ್ನು ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿದ್ದು ಇದಕ್ಕಾಗಿ ೧೪೭ ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ

ಸಾಪ್ತಾಹಿಕ ‘ಸನಾತನ ಪ್ರಭಾತ ವಾಚಕರಿಗಾಗಿ ಪುನಃ ಆರಂಭ !

ಕೊರೋನಾದ ಸಂಕಟದ ಹಿನ್ನಲೆಯಲ್ಲಿ ದೇಶದಾದ್ಯಂತ ಘೋಷಿಸಲಾದ ‘ಜನತಾ ಕರ್ಫ್ಯೂ ಹಾಗೂ ಸಂಚಾರ ನಿಷೇಧದಿಂದಾಗಿ ಮುದ್ರಣ ಹಾಗೂ ವಿತರಣೆಗಾಗಿ ಬರುತ್ತಿದ್ದ ಅಡಚಣೆಗಳನ್ನು ಗಮನದಲ್ಲಿಟ್ಟು ಮಾರ್ಚ್ ತಿಂಗಳಿಂದ ವಾಚಕರ ತನಕ ಸಾಪ್ತಾಹಿಕ ಸನಾತನ ಪ್ರಭಾತದ ಮುದ್ರಿತ ಸಂಚಿಕೆಯನ್ನು ತಲುಪಿಸಲು ಆಗಲಿಲ್ಲ. ಈ ಅವಧಿಯಲ್ಲಿ ವಾಚಕರಿಗಾದ ತೊಂದರೆ ಬಗ್ಗೆ ವಿಷಾದಿಸುತ್ತೇವೆ.

ತಮಿಳುನಾಡಿನ ಪುರಾತನ ದೇವಾಲಯವನ್ನು ಧ್ವಂಸ ಮಾಡಿ ಕಳ್ಳತನ

ಇಲ್ಲಿನ ತಿರುವಿದಾಯಿಮರುತುರ ಪ್ರದೇಶದ ೩೫೦ ವರ್ಷಗಳಷ್ಟು ಹಳೆಯದಾದ ಆನಂದವಲ್ಲಿ ಸಮೇತ ಭಾಸ್ಕರೆಸ್ವರಾರ ದೇವಸ್ಥಾನವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿ ದೇವಾಲಯದ ದೇವಿಯ ವಿಗ್ರಹದಿಂದ ಮಂಗಳಸೂತ್ರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿರುವ ಘಟನೆ ನಡೆದಿದೆ.