ಇತರ ಧರ್ಮದವರು ದೇವಸ್ಥಾನದಲ್ಲಿ ಪ್ರವೇಶಿಸಿದರೆ ಆಕಾಶ ಬೀಳುತ್ತದೆಯೇ ? – ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಶ್ನೆ

ಹಿಂದೂಗಳ ದೇವಸ್ಥಾನಗಳ ಮೇಲೆ ಇತರ ಧರ್ಮೀಯರನ್ನು ಆಡಳಿತಾಧಿಕಾರಿಯೆಂದು ನೇಮಿಸಿದುದನ್ನು ವಿರೋಧಿಸುವ ಅರ್ಜಿ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಿರಸ್ಕಾರ

ಬೆಂಗಳೂರು – ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥಾನ ಹಾಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಕಛೇರಿಗಳಲ್ಲಿ ಕಲಂ ೭ ರ ಅಡಿಯಲ್ಲಿ ಹಿಂದೂಯೇತರರಿಗೆ ಕೆಲಸ ನೀಡಲು ಅನುಮತಿಯನ್ನು ನೀಡಬಾರದು, ಎಂದು ಆಗ್ರಹಿಸುವ ೨ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ‘ಒಂದು ವೇಳೆ ಇತರ ಧರ್ಮದವರು ದೇವಸ್ಥಾನದೊಳಗೆ ಪ್ರವೇಶಿಸಿದರೆ, ಆಕಾಶ ಬೀಳುವುದೇ ?’, ಎಂದು ನ್ಯಾಯಾಲಯವು ಪ್ರಶ್ನಿಸಿದೆ.

೧. ನ್ಯಾಯಾಲಯವು, ದೇಶದಲ್ಲಿ ಸಂವಿಧಾನವು ಅಸ್ತಿತ್ವದಲ್ಲಿದೆ. ನಾವು ಇಂತಹ ಅರ್ಜಿಗಳ ಮೇಲೆ ವಿಚಾರ ಮಾಡಲು ಸಾಧ್ಯವಿಲ್ಲ. ಇದು ನಮ್ಮನ್ನು ೧೦೦ ವರ್ಷ ಹಿಂದೆ ಕರೆದುಕೊಂಡು ಹೋಗಲಿಚ್ಛಿಸುತ್ತದೆ. ಹಿಂದೂ ಧರ್ಮ ಎಂದಿಗೂ ಸಂಕುಚಿತವಾಗಿರಲಿಲ್ಲ. ಹಿಂದೂ ಧರ್ಮದಲ್ಲಿ ಇಷ್ಟು ಸಂಕುಚಿತ ವಿಚಾರವನ್ನು ಮಾಡುವ ಜನರು ಇರಲಿಲ್ಲ. ದೇಶದ ಯಾವುದೇ ಭಾಗಕ್ಕೆ ಹೋದರೂ, ನಿಮಗೆ ಹಿಂದೂಗಳ ಹಬ್ಬಗಳ ಸಮಯದಲ್ಲಿ ಹಿಂದೂ ಅಲ್ಲದ ಸರಕಾರಿ ಅಧಿಕಾರಿಗಳು ಆಡಳಿತವರ್ಗಕ್ಕೆ ಸಹಾಯ ಮಾಡುತ್ತಿರುವ ಅನೇಕ ಉದಾಹರಣೆಗಳು ಸಿಗುತ್ತದೆ ಎಂದು ಹೇಳಿದೆ.

೨. ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎನ್.ಪಿ. ಇವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಧಾರ್ಮಿಕ ಸಂಸ್ಥೆ ಹಾಗೂ ಮುಜರಾಯಿ ಇಲಾಖೆಯ ಮಂಗಳೂರಿನ ಉಪಾಯುಕ್ತ ಎ.ಬಿ. ಇಬ್ರಾಹಿಮ್ ಇವರ ಹೆಸರನ್ನು ನೋಡಿ ನ್ಯಾಯವಾದಿ ಅಮೃತೇಶ ಇವರು ಈ ಅರ್ಜಿಯನ್ನು ಸಲ್ಲಿಸಿದ್ದರು.
೩. ಇನ್ನೊಂದು ಅರ್ಜಿಯನ್ನು‘ಭಾರತ ಪುನರುತ್ಥಾನ ಟ್ರಸ್ಟ’ನಿಂದ ಸಲ್ಲಿಸಲಾಗಿತ್ತು. ಇದರಲ್ಲಿ ಅವರು ಆಯುಕ್ತರ ಕಾರ್ಯಾಲಯದಲ್ಲಿ ಮಹಮ್ಮದ ಅಲಿಖಾನ್ ಇವರನ್ನು ಅಧೀಕ್ಷಕರನ್ನಾಗಿ ನೇಮಿಸಿದ ಬಗ್ಗೆ ಆಕ್ಷೇಪಿಸಿದ್ದರು.