ಚಿನ್ನವನ್ನು ಮರಳಿ ಪಡೆಯಲು ಗ್ರಾಮಸ್ಥರಿಂದ ಆಂದೋಲನ
|
ಕಾಂಚೀಪುರಂ (ತಮಿಳುನಾಡು) – ಕಾಂಚೀಪುರಂನ ಉತಿರಾಮೆರೂರಿನಲ್ಲಿರುವ ಪುರಾತನ ಶಿವ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿರುವಾಗ ಗ್ರಾಮಸ್ಥರಿಗೆ ದೇವಾಲಯದ ಗರ್ಭಗೃಹದ ಮೆಟ್ಟಿಲುಗಳ ಕೆಳಗೆ ೫೬೫ ಗ್ರಾಂ ಚಿನ್ನ ಸಿಕ್ಕಿದೆ. ಸರಕಾರಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ತಿಳಿದಾಗ ಅವರು ಸ್ಥಳಕ್ಕೆ ಧಾವಿಸಿ ಚಿನ್ನದ ಮೇಲೆ ಸರಕಾರದ ಹಕ್ಕಿದೆ ಎಂದು ಹೇಳಿದರು; ಆದರೆ ಗ್ರಾಮಸ್ಥರು ಅದಕ್ಕೆ ವಿರೋಧಿಸಿದರು. ‘ಇದು ದೇವಾಲಯದ ಆಸ್ತಿಯಾಗಿದ್ದು ಜೀರ್ಣೋದ್ಧಾರದ ನಂತರ ಅದನ್ನು ಮತ್ತೆ ಗರ್ಭಗೃಹದಲ್ಲಿ ಇಡಲಾಗುವುದು’, ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಸಮಯದಲ್ಲಿ ಗಲಾಟೆ ಆರಂಭವಾಯಿತು. ಆದ್ದರಿಂದ ಅಧಿಕಾರಿಗಳು ಪೊಲೀಸರನ್ನು ಕರೆದು ಬಲವಂತವಾಗಿ ಚಿನ್ನವನ್ನು ಸರಕಾರಿ ಖಜಾನೆಯಲ್ಲಿ ಜಮಾ ಮಾಡಿದರು. ಉದ್ರಿಕ್ತಗೊಂಡ ಗ್ರಾಮಸ್ಥರು ಚಿನ್ನವನ್ನು ಮರಳಿ ಪಡೆಯಲು ಆಂದೋಲನವನ್ನು ಪ್ರಾರಂಭಿಸಿದ್ದಾರೆ.
Villagers stumbled upon "ancient gold" during the renovation of a temple in Tamil Nadu and it was seized by authorities and deposited with the government treasuryhttps://t.co/7oEeVfyR1C
— WION (@WIONews) December 14, 2020
೧. ಸರಕಾರಿ ಅಧಿಕಾರಿಗಳ ಈ ಕ್ರಮದಿಂದ ಜನರಲ್ಲಿ ಅಸಮಾಧಾನವಿದೆ. ‘ಇಂತಹ ಘಟನೆಗಳು ಕೇವಲ ಹಿಂದೂಗಳ ಧಾರ್ಮಿಕ ಸ್ಥಳಗಳ ಬಗ್ಗೆ ಮಾತ್ರ ನಡೆಯುತ್ತವೆ, ಸರಕಾರ ಇತರ ಧರ್ಮಗಳ ವಿಚಾರದಲ್ಲಿ ಇಂತಹ ಕೃತಿ ಮಾಡುವುದಿಲ್ಲ. ದೇವಾಲಯದ ಮೆಟ್ಟಿಲುಗಳ ಕೆಳಗೆ ಚಿನ್ನ ಸಿಗುವುದು ಶುಭವೆಂದು ಪರಿಗಣಿಸಲಾಗಿದೆ. ಇದು ಹಳೆಯ ಸಂಪ್ರದಾಯ; ಆದರೆ ಸರಕಾರಿ ಅಧಿಕಾರಿಗಳು ಈ ಸಂಪ್ರದಾಯವನ್ನು ಮುರಿದರು’, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
೨. ಗ್ರಾಮಸ್ಥರು ಚಿನ್ನ ಮುಟ್ಟುಗೋಲು ಹಾಕಿಕೊಳ್ಳುವುದರ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಕಂದಾಯ ಅಧಿಕಾರಿಯಾಗಿರುವ ವಿದ್ಯಾ ಇವರು, ಹಿರಿಯ ಅಧಿಕಾರಿಗಳು ಚಿನ್ನವನ್ನು ಹಿಂದಿರುಗಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ ಎಂದು ಹೇಳಿದರು.
೩. ಉತಿರಾಮೇರೂರ ಪ್ರದೇಶದಲ್ಲಿ ಅನೇಕ ಪ್ರಾಚೀನ ದೇವಾಲಯಗಳಿವೆ. ಆದ್ದರಿಂದ ಇದನ್ನು ದೇವಾಲಯಗಳ ನಗರ ಎಂದೂ ಕರೆಯುತ್ತಾರೆ. ಇಲ್ಲಿನ ದೇವಾಲಯಗಳನ್ನು ಚೋಳ ರಾಜರ ಅವಧಿಯಲ್ಲಿ ನಿರ್ಮಿಸಲಾಗಿತ್ತು.