‘ಆಶ್ರಮ’ ವೆಬ್ ಸೀರೀಸ್‌ನಲ್ಲಿ ತೋರಿಸಿರುವಂತೆ ಮತಾಂಧನಿಂದ ಯುವತಿಯ ಹತ್ಯೆ

ಇಲ್ಲಿ ಯುವತಿಯ ಶಿರಚ್ಛೇದ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೇಖ್ ಬಿಲಾಲ್ ಎಂಬವನನ್ನು ಬಂಧಿಸಿದ್ದಾರೆ. ‘ಆಶ್ರಮ’ ಎಂಬ ವೆಬ್ ಸೀರೀಸ್‌ನ್ನು ನೋಡಿದ ನಂತರ ಈ ಯುವತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆಂಧ್ರಪ್ರದೇಶದ ದೇವಾಲಯ ದಾಳಿ ಪ್ರಕರಣದಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ೧೫ ಕಾರ್ಯಕರ್ತರನ್ನು ಬಂಧಿಸಲಾಗಿದೆ

ಕಳೆದ ಒಂದೂವರೆ ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮತ್ತು ವಿಗ್ರಹ ಭಂಜನೆಯ ಕೃತ್ಯಗಳಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ೨೦ ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಈ ಪೈಕಿ ೧೫ ಮಂದಿಯನ್ನು ಬಂಧಿಸಲಾಗಿದ್ದು, ಇತರರು ಪರಾರಿಯಾಗಿದ್ದಾರೆ.

ಆಂದ್ರ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಿಸಿ ೬೯೯ ‘ಕ್ರೈಸ್ತ ಹಳ್ಳಿಗಳನ್ನು’ ಸ್ಥಾಪಿಸಿದ ಪಾದ್ರಿಯ ಬಂಧನ

ಹಿಂದೂ ದೇವತೆಗಳ ವಿಗ್ರಹಗಳನ್ನು ಒದೆಯುತ್ತಿದ್ದ ಪ್ರವೀಣ ಚಕ್ರವರ್ತಿ ಎಂಬ ಪಾದ್ರಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈ ಪಾದ್ರಿ ರಾಜ್ಯದಲ್ಲಿ ೬೯೯ ಗ್ರಾಮಗಳನ್ನು ‘ಕ್ರೈಸ್ತ ವಿಲೇಜ್’ ಎಂಬ ಹೆಸರಿನ ಗ್ರಾಮಗಳಾಗಿ ಪರಿವರ್ತಿಸಿದ್ದಾನೆ.

ಬಂಗಾಲದಲ್ಲಿ ಗಲಭೆ ಭುಗಿಲೆಬ್ಬಿಸುವ ಭಾಜಪದಂತಹ ಅಪಾಯಕಾರಿ ವಿಷಾಣು ಹರಡುತ್ತಿದೆ! – ತೃಣಮೂಲ ಕಾಂಗ್ರೆಸ್ ಶಾಸಕಿ ನುಸರತ್ ಜಹಾಂ ಇವರ ಟೀಕೆ

ನೀವು ಕಣ್ಣುಗಳನ್ನು ತೆರೆದಿಡಿ. ಭಾಜಪದಂತಹ ಅಪಾಯಕಾರಿ ವಿಷಾಣು ಹರಡುತ್ತಿದೆ. ಪಕ್ಷಗಳಲ್ಲಿ ಭೇದಭಾವ ಮತ್ತು ವ್ಯಕ್ತಿವ್ಯಕ್ತಿಗಳ ನಡುವೆ ದಂಗೆಗಳಾಗುತ್ತಿವೆ. ಭಾಜಪವು ಏನಾದರೂ ಅಧಿಕಾರಕ್ಕೆ ಬಂದಲ್ಲಿ ಮುಸಲ್ಮಾನರ ಉಲ್ಟಾ ಪರಿಗಣನೆ ಆರಂಭವಾಗಲಿದೆ

ಇಂದಿನಿಂದ ದೇಶಾದ್ಯಂತ ಕೊರೊನಾ ಪ್ರತಿಬಂಧಕ ಲಸಿಕೀಕರಣ ಪ್ರಾರಂಭ

ನಾಳೆ ಜನವರಿ ೧೬ ರಿಂದ ದೇಶದಲ್ಲಿ ಕೊರೊನಾ ಪ್ರತಿಬಂಧಕ ಲಸಿಕೀಕರಣ ಪ್ರಾರಂಭವಾಗಲಿದೆ. ಕೇಂದ್ರೀಯ ಆರೋಗ್ಯ ಸಚಿವಾಲಯವು ನೀಡಿದ ಮಾಹಿತಿಗನುಸಾರ ಮೊದಲ ದಿನ ಅಂದಾಜು ೩ ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುವುದು.

ಹರಿದ್ವಾರ ಕುಂಭಮೇಳದಲ್ಲಿ ಆರೋಗ್ಯವಿಷಯದ ವ್ಯವಸ್ಥೆಯ ಸಿದ್ಧತೆಯ ಬಗ್ಗೆ ಅಹವಾಲನ್ನು ಕೇಳಿದ ಉತ್ತರಾಖಂಡ ಉಚ್ಚ ನ್ಯಾಯಾಲಯ

ಉತ್ತರಾಖಂಡ ಉಚ್ಚ ನ್ಯಾಯಾಯಲವು ಕೊರೊನಾ ಸಂಕಟದ ಹಿನ್ನೆಲೆಯಲ್ಲಿ ಹರಿದ್ವಾರ ಕುಂಭಮೇಳಕ್ಕಾಗಿ ವೆಂಟಿಲೇಟರ್, ತುರ್ತುನಿಗಾ ಘಟಕ, ಆಸ್ಲತ್ರೆಗಳಲ್ಲಿರುವ ಮಂಚಗಳ ಸಂಖ್ಯೆ, ಇವೇ ಮುಂತಾದ ವಿಷಯಗಳ ಮಾಹಿತಿಯ ವರದಿಯನ್ನು ೨೧ ಫೆಬ್ರವರಿ ಒಳಗೆ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಆದೇಶವನ್ನು ನೀಡಿದೆ ಏಕೆಂದರೆ ಇದರಿಂದ ವಸ್ತುಸ್ಥಿತಿ ಗಮನಕ್ಕೆ ಬರುತ್ತದೆ.

ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಯುವಕನ ಹತ್ಯೆ

ಆರು ತಿಂಗಳ ಹಿಂದೆ ಶಹನಾಜ್‌ಳನ್ನು ಮದುವೆಯಾದ ೨೭ ವರ್ಷದ ಹಿಂದೂ ಯುವಕ ರಾಧೆ ಚೌಹಾನ್ ಎಂಬವನ ಶವ ಇಲ್ಲಿ ಸಾರ್ವಜನಿಕ ಶೌಚಾಲಯದ ಬಳಿ ಪತ್ತೆಯಾಗಿದೆ. ಆತನ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಮಿಷನರಿಗಳು ದೊಡ್ಡ ದೇವಾಲಯಗಳ ಬಳಿ ಮತಾಂತರವನ್ನು ಪ್ರೋತ್ಸಾಹಿಸುತ್ತಾರೆ ! – ಚಂದ್ರಬಾಬು ನಾಯ್ಡು, ಅಧ್ಯಕ್ಷರು, ತೆಲುಗು ದೇಶಮ್ ಪಕ್ಷ

‘ಕ್ರಿಶ್ಚಿಯನ್ ಮಿಷನರಿಗಳು ರಾಜ್ಯದ ದೊಡ್ಡ ದೇವಾಲಯಗಳ ಬಳಿ ಮತಾಂತರವನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ತೆಲುಗು ದೇಶಮ್ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇದರಿಂದ ತೆಲುಗು ದೇಶಂ ಪಕ್ಷದ ೧೩ ಜಿಲ್ಲೆಗಳ ಕ್ರಿಶ್ಚಿಯನ್ ನಾಯಕರು ವಿಜಯವಾಡಾದಲ್ಲಿ ಒಟ್ಟಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದರು.

ಮೊಘಲರು ಹಿಂದೂ ದೇವಾಲಯಗಳನ್ನು ದುರಸ್ತಿ ಮಾಡುತ್ತಿದ್ದರು ಎಂದು ಎನ್.ಸಿ.ಇ.ಆರ್.ಟಿ.ಯ ೧೨ ನೇ ತರಗತಿಯ ಇತಿಹಾಸ ಪುಸ್ತಕದಲ್ಲಿ ಉಲ್ಲೇಖ !

ಕೇಂದ್ರ ಸರಕಾರಕ್ಕೆ ಒಳಪಡುವ ಎನ್.ಸಿ.ಇ.ಆರ್.ಟಿ.ಯ (‘ನ್ಯಾಶನಲ್ ಕೌಂಸಿಲ್ ಆಫ್ ಎಜ್ಯುಕೇಶನಲ್ ರಿಸರ್ಚ್ ಆಂಡ್ ಟ್ರೇನಿಂಗ್’ನ) ೧೨ ನೇ ತರಗತಿಯ ‘ಥೀಮ್ಸ್ ಆಫ್ ಇಂಡಿಯನ್ ಹಿಸ್ಟ್ರೀ ಪಾರ್ಟ್-ಟು’ ಈ ಇತಿಹಾಸದ ಪುಸ್ತಕದ ಪುಟ ಸಂಖ್ಯ ೨೩೪ರಲ್ಲಿ ಯುದ್ಧದ ಸಮಯದಲ್ಲಿ ಮೊಘಲ್ ಸೈನ್ಯದಿಂದ ನೆಲಸಮಗೊಂಡ ದೇವಾಲಯಗಳ ದುರಸ್ತಿಗೆ ಶಹಜಹಾನ್ ಮತ್ತು ಔರಂಗಜೇಬ್ ಹಣಕಾಸಿನ ನೆರವು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.

‘ನಾಥುರಾಮ್ ಗೋಡ್ಸೆ ದೇಶದ ಮೊದಲ ಭಯೋತ್ಪಾದಕ !(ಅಂತೆ) – ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್

‘ಕಾಂಗ್ರೆಸ್ ದೇಶಭಕ್ತರನ್ನು ಅವಮಾನಿಸಲು ಮಾತ್ರ ಕಲಿತಿದೆ. ಅವರ ನಾಯಕರು ‘ಕೇಸರಿ ಭಯೋತ್ಪಾದನೆ’ ಎಂಬ ಪದಗಳನ್ನು ಬಳಸಿದ್ದಾರೆ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ ?’ ಎಂದು ಬಿಜೆಪಿಯ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ತಿರುಗೇಟು ನೀಡಿದರು.