ನಾಯ್ಡು ಅವರ ಹೇಳಿಕೆಯನ್ನು ವಿರೋಧಿಸಿ ೧೩ ಜಿಲ್ಲೆಗಳ ತೆಲುಗು ದೇಶಮ್‌ನ ನಾಯಕರ ರಾಜೀನಾಮೆ
|
ವಿಜಯವಾಡಾ (ಆಂಧ್ರ ಪ್ರದೇಶ) – ‘ಕ್ರಿಶ್ಚಿಯನ್ ಮಿಷನರಿಗಳು ರಾಜ್ಯದ ದೊಡ್ಡ ದೇವಾಲಯಗಳ ಬಳಿ ಮತಾಂತರವನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ತೆಲುಗು ದೇಶಮ್ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇದರಿಂದ ತೆಲುಗು ದೇಶಂ ಪಕ್ಷದ ೧೩ ಜಿಲ್ಲೆಗಳ ಕ್ರಿಶ್ಚಿಯನ್ ನಾಯಕರು ವಿಜಯವಾಡಾದಲ್ಲಿ ಒಟ್ಟಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದರು. ನಾಯ್ಡು ಅವರ ಹೇಳಿಕೆಯನ್ನು ಅವರು ಟೀಕಿಸಿದರು. ಈ ಹಿಂದೆ ಕ್ರಿಶ್ಚಿಯನ್ ಸಂಘಟನೆಗಳು ನಾಯ್ಡು ಅವರ ಹೇಳಿಕೆಯನ್ನು ವಿರೋಧಿಸಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದವು.
Why many Christian leaders in #AndhraPradesh are miffed with #Chandrababu Naiduhttps://t.co/riMP8CIbJ5
— The News Minute (@thenewsminute) January 13, 2021
೧. ‘ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದು ತುಂಬಾ ದುಃಖಕರವಾಗಿದೆ. ನಾಯ್ಡು ಹೇಳಿಕೆಯಿಂದಾಗಿ, ನಮ್ಮ ಸಮಾಜದ ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ’ ಎಂದು ತೆಲುಗು ದೇಶಂ ಪಕ್ಷದ ಮುಖಂಡ ಫಿಲಿಪ್ ಟೋಚರ್ ಹೇಳಿದ್ದಾರೆ.
೨. ವಿಜಯವಾಡಾದ ದಲಿತ ಕ್ರಿಶ್ಚಿಯನ್ ನಾಯಕಿ ಪೆರಿಕಾ ವರಪ್ರಸಾದ್ ರಾವ್ ಅವರು, ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಾಯ್ಡು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
೩. ೨೦೧೯ ರ ಚುನಾವಣೆಯಲ್ಲಿ ತೆಲುಗು ದೇಶಮ್ ಪಕ್ಷವನ್ನು ಬೆಂಬಲಿಸಿದ ಕ್ರಿಶ್ಚಿಯನ್ ಮುಖಂಡ ಜಾನ್ ಬೆನಿ ಲಿಂಗಮ್‌ಯವರು ಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರವೊಂದನ್ನು ಬರೆದಿದ್ದು, ಚಂದ್ರಬಾಬು ನಾಯ್ಡು ಅವರು ತಮ್ಮ ಜನರಿಗೆ ಹೇಳಿ ದೇವಾಲಯಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಮತ್ತು ಕ್ರೈಸ್ತರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.