ನವ ದೆಹಲಿ – ನಾಳೆ ಜನವರಿ ೧೬ ರಿಂದ ದೇಶದಲ್ಲಿ ಕೊರೊನಾ ಪ್ರತಿಬಂಧಕ ಲಸಿಕೀಕರಣ ಪ್ರಾರಂಭವಾಗಲಿದೆ. ಕೇಂದ್ರೀಯ ಆರೋಗ್ಯ ಸಚಿವಾಲಯವು ನೀಡಿದ ಮಾಹಿತಿಗನುಸಾರ ಮೊದಲ ದಿನ ಅಂದಾಜು ೩ ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುವುದು. ಆಸ್ಪತ್ರೆಯ ಇತರ ವೈದ್ಯಕೀಯ ಸೇವೆಗಳಿಗೆ ತೊಂದರೆಯಾಗಬಾರದು ಎಂದು ಜನವರಿಯಲ್ಲಿ ಒಟ್ಟು ೧೦ ದಿನ ಮಾತ್ರ ಲಸಿಕೀಕರಣ ಮಾಡಲಾಗುವುದು, ಆ ೧೦ ದಿನಗಳು ಯಾವುವು ಎಂಬುದರ ನಿರ್ಣಯವನ್ನು ರಾಜ್ಯಗಳು ತೆಗೆದುಕೊಳ್ಳಬೇಕಾಗಿದೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯಕ್ಕನುಸಾರ ಸತತ ಲಸಿಕೀಕರಣದಿಂದ ನೌಕರರು ಆಯಾಸಗೊಳ್ಳಬಹುದು. ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರೋಗ್ಯ ನೌಕರರ ಸಂಖ್ಯೆಯು ಕಡಿಮೆ ಇರುವುದರಿಂದ ಸತತ ೧೫ ದಿನ ಲಸಿಕೀಕರಣದ ಆವಶ್ಯಕತೆ ಉಂಟಾಗಲಾರದು. ಹಾಗಾಗಿ ೧೦ ದಿನವೇ ಲಸಿಕೆ ನೀಡುವ ಅಭಿಯಾನದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
(ಸೌಜನ್ಯ : The Economic Times)
೧. ಪ್ರತಿಯೊಂದು ಕೇಂದ್ರದಲ್ಲಿ ಒಂದು ದಿನ ೧೦೦ ಜನರಿಗೆ ಲಸಿಕೆ ನೀಡಲಾಗುವುದು. ೧೦ ದಿನಗಳೊಳಗೆ ದೇಶದಲ್ಲಿ ಅಂದಾಜು ೨ ಸಾವಿರ ೯೩೪ ಲಸಿಕಾ ಕೇಂದ್ರಗಳಿರುವುವು ಅನಂತರ ಅದನ್ನು ೫ ಸಾವಿರಕ್ಕೇರಿಸಲಾಗುವುದು. ಅನಂತರ ಪ್ರತಿದಿನ ೫ ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು
೨. ಸೋಂಕು ರೋಗ (ಅಂಟುರೋಗ), ನೆಗಡಿ, ಕೆಮ್ಮು, ಜ್ವರ ಇರುವವರಿಗೆ ಲಸಿಕೆ ನೀಡಲು ನಿರ್ಬಂಧವಿದೆ. ಯಾರಲ್ಲಿ ಆಂಡ್ರಾಯ್ಡ್ ಫೋನ್ ಇಲ್ಲವೋ ಅವರು ತಮ್ಮ ಕುಟುಂಬದವರು, ಮಿತ್ರರ ಫೋನ್ ಅನ್ನು ಉಪಯೋಗಿಸಬಹುದು. ಏಕೆಂದರೆ ಎರಡು ಡೊಸ್ ಲಸಿಕೆಯಾದ ನಂತರ ಇದೇ ಸಂಚಾರೀ ದೂರವಾಣಿ ಸಂಖ್ಯೆಗೆ ಒಂದು ‘ಕ್ಯೂಆರ್ ಕೋಡ್’ ಬರಲಿದೆ. ಇದರಿಂದ ಲಸಿಕೆ ಚುಚ್ಚಿದ ನಂತರ ಸಿಗುವ ಪ್ರಮಾಣಪತ್ರವನ್ನು ಡೌನ್ ಲೋಡ್’ ಮಾಡಬಹುದು.