ಬಂಗಾಲದಲ್ಲಿ ಗಲಭೆ ಭುಗಿಲೆಬ್ಬಿಸುವ ಭಾಜಪದಂತಹ ಅಪಾಯಕಾರಿ ವಿಷಾಣು ಹರಡುತ್ತಿದೆ! – ತೃಣಮೂಲ ಕಾಂಗ್ರೆಸ್ ಶಾಸಕಿ ನುಸರತ್ ಜಹಾಂ ಇವರ ಟೀಕೆ

ತೃಣಮೂಲ ಕಾಂಗ್ರೆಸ್ ನ ರಾಜ್ಯದಲ್ಲಿ ಪ್ರತಿದಿನ ಹಿಂದೂಗಳ ಮೇಲೆ ಮತಾಂಧರಿಂದ ಅತ್ಯಾಚಾರವಾಗುತ್ತಿದೆ, ಬಾಂಬ್ ಸ್ಫೋಟಗಳನ್ನು ನಡೆಸಲಾಗುತ್ತದೆ, ಗೋಹತ್ಯೆ ಮಾಡಲಾಗುತ್ತದೆ, ಬಾಂಗ್ಲಾದೇಶೀಯರಿಂದ ನುಸುಳುವಿಕೆಯಾಗುತ್ತಿದೆ, ಇದನ್ನು ನೋಡುವಾಗ ತೃಣಮೂಲ ಕಾಂಗ್ರೆಸ್ ಯಾವ ವಿಧದ ವಿಷಾಣುವಾಗಿದೆ ಇದನ್ನು ಸಹ ನುಸರತ್ ಜಹಾಂ ಇವರು ಹೇಳಬಹುದೇ ?

ಕೊಲಕಾತಾ (ಬಂಗಾಲ) – ನೀವು ಕಣ್ಣುಗಳನ್ನು ತೆರೆದಿಡಿ. ಭಾಜಪದಂತಹ ಅಪಾಯಕಾರಿ ವಿಷಾಣು ಹರಡುತ್ತಿದೆ. ಪಕ್ಷಗಳಲ್ಲಿ ಭೇದಭಾವ ಮತ್ತು ವ್ಯಕ್ತಿವ್ಯಕ್ತಿಗಳ ನಡುವೆ ದಂಗೆಗಳಾಗುತ್ತಿವೆ. ಭಾಜಪವು ಏನಾದರೂ ಅಧಿಕಾರಕ್ಕೆ ಬಂದಲ್ಲಿ ಮುಸಲ್ಮಾನರ ಉಲ್ಟಾ ಪರಿಗಣನೆ ಆರಂಭವಾಗಲಿದೆ ಎಂದು ತೃಣಮೂಲ ತೃಣಮೂಲ ಕಾಂಗ್ರೆಸ್‌ನ ಶಾಸಕಿ ಹಾಗೂ ನಟಿ ನುಸರತ್ ಜಹಾಂ ಇವರು ಇಲ್ಲಿನ ಉತ್ತರ ೨೪ ಪರಗಣಾದ ಮುಸಲ್ಮಾನ ಬಹುಸಂಖ್ಯಾತ ದೆಗಂಗಾ ಪ್ರದೇಶದಲ್ಲಿ ಪ್ರಚಾರ ಮಾಡುವಾಗ ಹೇಳಿಕೆ ನೀಡಿದರು. (ನುಸರತ್ ಜಹಾಂ ಇವರು ಹಿಂದೂ ಯುವಕನೊಂದಿಗೆ ವಿವಾಹವನ್ನು ಮಾಡಿಕೊಂಡಿದ್ದಾರೆ ಮತ್ತು ಅವರು ಹಿಂದೂ ಪದ್ಧತಿಯನ್ನು ಆಚರಿಸಲು ಪ್ರಯತ್ನಿಸುತ್ತಿರುವುದು ಸಹಾ ಕಂಡುಬರುತ್ತದೆ. ಹೀಗಿರುವಾಗ ಇಂತಹ ಹೇಳಿಕೆಯನ್ನು ನೀಡಿ ನುಸರತ್ ಜಹಾಂ ಇವರು ತಮ್ಮ ನಿಜವಾದ ಮಾನಸಿಕತೆಯನ್ನು ತೋರಿಸಿಕೊಟ್ಟಿದ್ದಾರೆ ! – ಸಂಪಾದಕರು)

(ಸೌಜನ್ಯ : Times Now)