ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿಯನ್ನು ಕೇಳಿದಾಗ ಯಾವುದೇ ಪುರಾವೆಗಳಿಲ್ಲ ಎಂದು ಎನ್.ಸಿ.ಇ.ಆರ್.ಟಿ. ಯ ಸ್ವೀಕೃತಿ
|
ನವದೆಹಲಿ – ಕೇಂದ್ರ ಸರಕಾರಕ್ಕೆ ಒಳಪಡುವ ಎನ್.ಸಿ.ಇ.ಆರ್.ಟಿ.ಯ (‘ನ್ಯಾಶನಲ್ ಕೌಂಸಿಲ್ ಆಫ್ ಎಜ್ಯುಕೇಶನಲ್ ರಿಸರ್ಚ್ ಆಂಡ್ ಟ್ರೇನಿಂಗ್’ನ) ೧೨ ನೇ ತರಗತಿಯ ‘ಥೀಮ್ಸ್ ಆಫ್ ಇಂಡಿಯನ್ ಹಿಸ್ಟ್ರೀ ಪಾರ್ಟ್-ಟು’ ಈ ಇತಿಹಾಸದ ಪುಸ್ತಕದ ಪುಟ ಸಂಖ್ಯ ೨೩೪ರಲ್ಲಿ ಯುದ್ಧದ ಸಮಯದಲ್ಲಿ ಮೊಘಲ್ ಸೈನ್ಯದಿಂದ ನೆಲಸಮಗೊಂಡ ದೇವಾಲಯಗಳ ದುರಸ್ತಿಗೆ ಶಹಜಹಾನ್ ಮತ್ತು ಔರಂಗಜೇಬ್ ಹಣಕಾಸಿನ ನೆರವು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.
गंगा-जमुनी तहजीब की झूठी मिसाल !
‘औरंगजेब-शाहजहां ने अनुदार देकर बनवाए मंदिर’ – @ncert के पाठ्यपुस्तकों में बिना किसी प्रमाण के पढाया जा रहा यह इतिहास – RTI में हुआ खुलासा
एक व्यक्ति ने RTI में पूछे गए प्रश्नों पर NCERT का जवाब था – “जानकारी विभाग की फाइलों में उपलब्ध नहीं है।” pic.twitter.com/Usuky9iDNV
— HinduJagrutiOrg (@HinduJagrutiOrg) January 14, 2021
ಆದರೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಈ ಸಂಬಂಧಪಟ್ಟ ಪುರಾವೆಗಳು ಮತ್ತು ಸಂಬಂಧಪಟ್ಟ ದೇವಾಲಯಗಳ ಮಾಹಿತಿಯ ಬಗ್ಗೆ ಕೇಳಿದಾಗ ಎನ್.ಸಿ.ಇ.ಆರ್.ಟಿ.ಯು ಈ ವಿಷಯಗಳ ಬಗ್ಗೆ ದಾಖಲಾತಿಗಳಿಲ್ಲ ಎಂದು ಉತ್ತರಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಡಾ. ಇಂದೂ ವಿಶ್ವನಾಥನ್ ಈ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ.
೧೮ ನವೆಂಬರ ೨೦೨೦ ರಂದು ಇಂತಹ ಉತ್ತರವಿರುವ ಎನ್.ಸಿ.ಇ.ಆರ್.ಟಿ.ಯ ಪತ್ರವನ್ನು ಅರ್ಜಿದಾರ ಶಿವಾಂಕ್ ವರ್ಮಾ ಅವರಿಗೆ ಕಳುಹಿಸಲಾಗಿದೆ.
ಪತ್ರದಲ್ಲಿ ‘ಹೆಡ್ ಆಫ್ ಡಿಪಾರ್ಟಮೆಂಟ್ ಆಂಡ್ ಪಬ್ಲಿಕ ಇನ್ಫಾರ್ಮೇಶನ್ ಆಫಿಸರ್’ ಪ್ರಾ. ಗೌರಿ ಶ್ರೀವಾಸ್ತವ ಇವರ ಸಹಿ ಇದೆ.