ಆಂಧ್ರಪ್ರದೇಶದ ದೇವಾಲಯ ದಾಳಿ ಪ್ರಕರಣದಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ೧೫ ಕಾರ್ಯಕರ್ತರನ್ನು ಬಂಧಿಸಲಾಗಿದೆ

ಹಿಂದೂ ದೇವಾಲಯಗಳ ಮೇಲೆ ದಾಳಿಗಳಿಗೆ ಹಿಂದೂಗಳನ್ನೇ ದೂಷಿಸುತ್ತಿರುವ ಕ್ರೈಸ್ತ ಮುಖ್ಯಮಂತ್ರಿಯಿರುವ ಆಂಧ್ರದ ಪೊಲೀಸರು ! ಈಗ ಘಟನೆಗಳ ತನಿಖೆಯನ್ನು ಸಿಬಿಐ ಮಾಡಬೇಕು. ಅದಕ್ಕಾಗಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು !

ಅಮರಾವತಿ (ಆಂಧ್ರಪ್ರದೇಶ) – ಕಳೆದ ಒಂದೂವರೆ ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮತ್ತು ವಿಗ್ರಹ ಭಂಜನೆಯ ಕೃತ್ಯಗಳಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ೨೦ ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಈ ಪೈಕಿ ೧೫ ಮಂದಿಯನ್ನು ಬಂಧಿಸಲಾಗಿದ್ದು, ಇತರರು ಪರಾರಿಯಾಗಿದ್ದಾರೆ. ಈ ಕಾರ್ಯಕರ್ತರು ದೇವಾಲಯಗಳ ಧ್ವಂಸ ಕೃತ್ಯದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದರು, ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಸವಾಂಗ್ ಹೇಳಿದ್ದಾರೆ. ಈ ಬಗ್ಗೆ ಎರಡೂ ಪಕ್ಷಗಳು ಟೀಕಿಸುತ್ತಾ ‘ಪೊಲೀಸ್ ಮಹಾನಿರ್ದೇಶಕರು ಸರಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿವೆ.

ರಾಜ್ಯದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ವಿಷ್ಣುವರ್ಧನ ರೆಡ್ಡಿ ಇವರು, ಪೊಲೀಸ್ ಮಹಾನಿರ್ದೇಶಕರು ಜನರ ದಾರಿತಪ್ಪಿಸುತ್ತಿದ್ದಾರೆ ಮತ್ತು ಪೊಲೀಸರ ನಿಷ್ಕ್ರಿಯತೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೊಂದು ರಾಜಕೀಯ ನಾಟಕವಾಗಿದೆ. ಇದಕ್ಕೂ ಮೊದಲು ಜನವರಿ ೧೩ ರಂದು ಪೊಲೀಸ್ ಮಹಾನಿರ್ದೇಶಕರು ಪತ್ರಿಕಾಗೋಷ್ಠಿಯಲ್ಲಿ ‘ದೇವಾಲಯಗಳ ಮೇಲಿನ ದಾಳಿಯ ಹಿಂದೆ ಕಳ್ಳರು, ಮೂಢನಂಬಿಕೆ ಇಡುವವರು ಮತ್ತು ಮದ್ಯವ್ಯಸನಿಗಳು ಇದ್ದಾರೆ’ ಹೇಳಿದ್ದಾರೆ. ಸವಾಂಗ ಇವರು ಇದರ ಹಿಂದೆ ಯಾವುದೇ ರಾಜಕೀಯ ವಾದಗಳು ಇವೆ ಎಂದು ಹೇಳಿರಲಿಲ್ಲ, ಇನ್ನೊಂದು ಕಡೆ ಮುಖ್ಯಮಂತ್ರಿ ರೆಡ್ಡಿಯವರು ‘ಅಭಿವೃದ್ಧಿಗೆ ಅಡಚಣೆಯನ್ನುಂಟುಮಾಡುವ ಒಂದು ರಾಜಕೀಯ ಪಿತೂರಿಯಾಗಿದೆ’, ಎಂದು ಹೇಳಿದ್ದರು.