ಆಶ್ರಮ ವೆಬ್ ಸೀರೀಸ್ ಹಿಂದೂ ಸಂತರ, ಆಶ್ರಮ ವ್ಯವಸ್ಥೆಯನ್ನು ಅವಮಾನಿಸಿದೆ ಮತ್ತು ಅದು ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದು ಗಮನಕ್ಕೆ ಬರುತ್ತಿದೆ. ಆದ್ದರಿಂದ ಸರಕಾರವು ಅದನ್ನು ಗಂಭೀರವಾಗಿ ಪರಿಗಣಿಸುತ್ತ ವೆಬ್ ಸೀರೀಸ್‌ಗಳನ್ನು ನಿಷೇಧಿಸಲು ಪ್ರಯತ್ನಿಸಬೇಕು !
ರಾಂಚಿ (ಜಾರ್ಖಂಡ್) – ಇಲ್ಲಿ ಯುವತಿಯ ಶಿರಚ್ಛೇದ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೇಖ್ ಬಿಲಾಲ್ ಎಂಬವನನ್ನು ಬಂಧಿಸಿದ್ದಾರೆ. ‘ಆಶ್ರಮ’ ಎಂಬ ವೆಬ್ ಸೀರೀಸ್‌ನ್ನು ನೋಡಿದ ನಂತರ ಈ ಯುವತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಿಲಾಲ್‌ನ ಹೊಲದಲ್ಲಿ ಬಾಲಕಿಯ ತಲೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ; ಆದರೆ ಶವ ಪತ್ತೆಯಾಗಿಲ್ಲ. ಆಕೆಯ ದೇಹವನ್ನು ನಂತರ ೨ ಕಿ.ಮೀ ದೂರದಲ್ಲಿ ಪತ್ತೆ ಮಾಡಲಾಯಿತು. ಪೊಲೀಸರು ಬಿಲಾಲ್‌ನನ್ನು ಬಂಧಿಸಿದ್ದಾರೆ. ಆಶ್ರಮ್ ವೆಬ್ ಸೀರೀಸ್‌ನಲ್ಲಿ ಈ ರೀತಿಯ ಘಟನೆಯನ್ನು ತೋರಿಸಲಾಗಿದೆ. ಯುವತಿಯನ್ನು ಗುರುತು ಸಿಗಬಾರದು; ಅದಕ್ಕಾಗಿಯೇ ಇದನ್ನು ಮಾಡಲಾಯಿತು. ಕತ್ತು ಹಿಸುಕಿ ಬಾಲಕಿಯನ್ನು ಕೊಂದ ನಂತರ, ಅವಳ ತಲೆ ಮತ್ತು ಮುಖದ ಮೇಲೆ ವಿದ್ರೂಪಗೊಳಿಸಲಾಗಿತ್ತು.