|
ಕಾಂಗ್ರೆಸ್ ಕೇವಲ ದೇಶಭಕ್ತರನ್ನು ಅವಮಾನಿಸುವುದನ್ನು ಕಲಿತಿದೆ ! – ಸಾಧ್ವಿ ಪ್ರಜ್ಞಾ ಸಿಂಗ್ ಪ್ರತ್ಯುತ್ತರ
ಭೋಪಾಲ್ (ಮಧ್ಯಪ್ರದೇಶ) – ‘ಕಾಂಗ್ರೆಸ್ ದೇಶಭಕ್ತರನ್ನು ಅವಮಾನಿಸಲು ಮಾತ್ರ ಕಲಿತಿದೆ. ಅವರ ನಾಯಕರು ‘ಕೇಸರಿ ಭಯೋತ್ಪಾದನೆ’ ಎಂಬ ಪದಗಳನ್ನು ಬಳಸಿದ್ದಾರೆ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ ?’ ಎಂದು ಬಿಜೆಪಿಯ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ತಿರುಗೇಟು ನೀಡಿದರು. ‘ನಾಥುರಾಮ್ ಗೋಡ್ಸೆ ಭಾರತದ ಮೊದಲ ಭಯೋತ್ಪಾದಕ’ ಎಂದು ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ, ಗೋಡ್ಸೆ ದೇಶಭಕ್ತ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದರು. ಇದರ ನಂತರ ಬಿಜೆಪಿಗೆ ಈ ಬಗ್ಗೆ ವಿವರಣೆ ನೀಡಬೇಕಾಗಿತ್ತು.
Congress has always abused the patriots. He has said 'Bhagwa aatank' (Saffron terror), what can be worse than this: BJP MP Pragya Singh Thakur on being asked 'Congress leader Digvijaya Singh called Godse the first terrorist' pic.twitter.com/mB0LlB3qL8
— ANI (@ANI) January 13, 2021