ಆಂದ್ರ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಿಸಿ ೬೯೯ ‘ಕ್ರೈಸ್ತ ಹಳ್ಳಿಗಳನ್ನು’ ಸ್ಥಾಪಿಸಿದ ಪಾದ್ರಿಯ ಬಂಧನ

ಹಿಂದೂಗಳ ದೇವತೆಗಳ ವಿಗ್ರಹಗಳನ್ನು ಒದೆಯುವ ಅಪರಾಧ

  • ಸರ್ವಧರ್ಮಸಮಭಾವದ ತಿಳುವಳಿಕೆ ನೀಡಿ ಹಿಂದೂಗಳನ್ನು ನಿಷ್ಕ್ರಿಯ ಮಾಡುವವರು ಈಗ ಇಂತಹ ಕೃತ್ಯದ ಬಗ್ಗೆ ಎಕೆ ಮಾತನಾಡುತ್ತಿಲ್ಲ ಅಥವಾ ಇಂತಹ ಕೃತಿ ಮಾಡುವುದು ಜಾತ್ಯತೀತತೆ ಎಂದೆನಿಸುತ್ತದೆಯೇ ?
  • ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿಯ ರಾಜ್ಯದಲ್ಲಿ ಇಂತಹ ಪಾದ್ರಿಗಳು ಹುಟ್ಟುತ್ತಾರೆ, ಇದನ್ನು ಹೊರತುಪಡಿಸಿ ಏನಾಗುತ್ತದೆ ? ಹಿಂದೂಗಳ ಆಡಳಿತವಿರುವ ರಾಜ್ಯಗಳಲ್ಲಿ ಎಂದಾದರೂ ಇತರ ಧರ್ಮಗಳ ಮತಾಂತರ ನಡೆಯುತ್ತದೆಯೇ ? ತದ್ವಿರುದ್ಧ ಯಾರಾದರೂ ಹಿಂದೂ ಧರ್ಮಕ್ಕೆ ಮತ್ತೆ ಪ್ರವೇಶಿಸಿದರೆ, ಅದನ್ನೂ ವಿರೋಧಿಸುತ್ತಾರೆ !
ಪ್ರವೀಣ ಚಕ್ರವರ್ತಿ

ಗುಂಟೂರು (ಆಂಧ್ರಪ್ರದೇಶ) – ಹಿಂದೂ ದೇವತೆಗಳ ವಿಗ್ರಹಗಳನ್ನು ಒದೆಯುತ್ತಿದ್ದ ಪ್ರವೀಣ ಚಕ್ರವರ್ತಿ ಎಂಬ ಪಾದ್ರಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈ ಪಾದ್ರಿ ರಾಜ್ಯದಲ್ಲಿ ೬೯೯ ಗ್ರಾಮಗಳನ್ನು ‘ಕ್ರೈಸ್ತ ವಿಲೇಜ್’ ಎಂಬ ಹೆಸರಿನ ಗ್ರಾಮಗಳಾಗಿ ಪರಿವರ್ತಿಸಿದ್ದಾನೆ. ಆತನ ‘ಸಾಯಲಮ ಬ್ಲಾಯಿಂಡ್ ಸೆಂಟರ’ ಈ ಸಂಘಟನೆಯ ವಿರುದ್ಧ ‘ಲೀಗಲ ರೈಟ್ಸ್ ಪ್ರೊಟೆಕ್ಷನ್ ಫೋರಮ್’ ಈ ಸಂಸ್ಥೆಯು ೨೦೧೯ ರಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿತ್ತು. (ಅವರು ೨೦೧೯ ರಲ್ಲಿ ದೂರು ನೀಡಿದ ನಂತರವೂ ಆತನ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ? ಎಂಬ ಬಗ್ಗೆ ಗೃಹ ಸಚಿವಾಲಯ ಉತ್ತರ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕ) ಪಾದ್ರಿ ಚಕ್ರವರ್ತಿಯ ವಿರುದ್ಧ ಧಾರ್ಮಿಕ ದ್ವೇಷ ಹಬ್ಬಿಸುವುದು, ಧಾರ್ಮಿಕ ಸ್ಥಳಗಳಲ್ಲಿ ಅಪರಾಧಗಳನ್ನು ಮಾಡುವುದು ಇತ್ಯಾದಿ ಕಲಂ ಅಡಿಯಲ್ಲಿ ಅಪರಾಧ ನೋಂದಾಯಿಸಲಾಗಿದೆ.

೧. ‘ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಮ್’ ಈ ಸಂಸ್ಥೆಯು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಪಾದ್ರಿ ‘ಗ್ರಾಮಸ್ಥರನ್ನು ಅವರು ಹೇಗೆ ಮತಾಂತರಗೊಳಿಸುತ್ತಾರೆ’ ಎಂಬುದು ಹೇಳುತ್ತಾರೆ. ಅದರಲ್ಲಿ ಅವರು, ಮೊದಲು ಓರ್ವ ಪಾದ್ರಿಯನ್ನು ಕರೆದು ಬೈಬಲ್‌ಅನ್ನು ಕಲಿಸಲಾಗುತ್ತದೆ ನಂತರ ಹಳ್ಳಿಯ ಯಾರಾದರೂ ಯೇಸುವನ್ನು ತಮ್ಮ ಪ್ರಭು ಎಂದು ಹೇಳಿ ಅವನು ದೇವತೆಗಳ ವಿಗ್ರಹಗಳನ್ನು, ಪೂಜೀಸಲಗುವ ಮರಗಳನ್ನು ಒದೆಯುತ್ತಾನೆ. ನಂತರ ಈ ಗ್ರಾಮವು ‘ಕ್ರೈಸ್ತ ವಿಲೇಜ್’ ಆಗುತ್ತದೆ. ನಾನು ಸ್ವತಃ ದೇವರನ್ನು ಒದ್ದಿದ್ದೇನೆ ಮತ್ತು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾನೆ.

(ಸೌಜನ್ಯ : TV5 news)

೨. ಮತ್ತೊಂದು ವೀಡಿಯೋದಲ್ಲಿ, ಅವರು ಅಮೆರಿಕದ ದಾನಿಯೊಬ್ಬರೊಂದಿಗೆ ಮಾತನಾಡುತ್ತಾ, ನಮ್ಮ ತಂಡದಲ್ಲಿ ೩,೬೪೨ ಪಾದ್ರಿಗಳನ್ನು ಹೊಂದಿದ್ದೇವೆ ಮತ್ತು ನಾವು ಇಲ್ಲಿಯವರೆಗೆ ೬೯೯ ‘ಕ್ರೈಸ್ತ ವಿಲೇಜ್‌ಗಳನ್ನು’ ನಿರ್ಮಿಸಿದ್ದೇವೆ’ ಎಂದು ಹೇಳುತ್ತಾರೆ.

೩. ‘ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಮ್’ ಈ ಪಾದ್ರಿಯ ವಿರುದ್ಧ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣೆ ಆಯೋಗದ’ಲ್ಲಿಯೂ ದೂರು ನೀಡಿದೆ. ಆತನ ಸಂಘಟನೆಯು ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ಮುಕ್ತಗೊಳಿಸುವ ಹೆಸರಿನಲ್ಲಿ ವಿದೇಶದಿಂದ ದೇಣಿಗೆ ಸಂಗ್ರಹಿಸುತ್ತದೆ.