ಹರಿದ್ವಾರ ಕುಂಭಮೇಳದಲ್ಲಿ ಆರೋಗ್ಯವಿಷಯದ ವ್ಯವಸ್ಥೆಯ ಸಿದ್ಧತೆಯ ಬಗ್ಗೆ ಅಹವಾಲನ್ನು ಕೇಳಿದ ಉತ್ತರಾಖಂಡ ಉಚ್ಚ ನ್ಯಾಯಾಲಯ

ಈ ವರದಿಯನ್ನು ನ್ಯಾಯಾಲಯವು ಕೇಳಿ ತರಿಸಬೇಕಾಗುತ್ತದೆ ಎಂದರೆ ಇದರರ್ಥ ಸರಕಾರ ಮತ್ತು ಆಡಳಿತಗಳು ಇದರ ಬಗ್ಗೆ ನಿಷ್ಕ್ರಿಯವಾಗಿದೆ ಎಂದೆನಿಸುತ್ತದೆ!

ನೈನಿತಾಲ್ (ಉತ್ತರಾಖಂಡ) – ಉತ್ತರಾಖಂಡ ಉಚ್ಚ ನ್ಯಾಯಾಯಲವು ಕೊರೊನಾ ಸಂಕಟದ ಹಿನ್ನೆಲೆಯಲ್ಲಿ ಹರಿದ್ವಾರ ಕುಂಭಮೇಳಕ್ಕಾಗಿ ವೆಂಟಿಲೇಟರ್, ತುರ್ತುನಿಗಾ ಘಟಕ, ಆಸ್ಲತ್ರೆಗಳಲ್ಲಿರುವ ಮಂಚಗಳ ಸಂಖ್ಯೆ, ಇವೇ ಮುಂತಾದ ವಿಷಯಗಳ ಮಾಹಿತಿಯ ವರದಿಯನ್ನು ೨೧ ಫೆಬ್ರವರಿ ಒಳಗೆ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಆದೇಶವನ್ನು ನೀಡಿದೆ; ಏಕೆಂದರೆ ಇದರಿಂದ ವಸ್ತುಸ್ಥಿತಿ ಗಮನಕ್ಕೆ ಬರುತ್ತದೆ. (ಅಂದರೆ ನ್ಯಾಯಾಲಯಕ್ಕೆ ಆಡಳಿತ ಮತ್ತು ಸರಕಾರದ ಬಗ್ಗೆ ವಿಶ್ವಾಸವಿಲ್ಲ ಎಂದು ದೃಢಪಡುತ್ತದೆ!-ಸಂಪಾದಕರು) ಹರಿದ್ವಾರದಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಕುಂಭಮೇಳವು ಜರುಗಲಿದೆ.

ರಾಜ್ಯದಲ್ಲಿರುವ ಆಸ್ಪತ್ರೆಗಳು ಮತ್ತು ಕೊವಿಡ್ ಸೆಂಟರ್‌ಗಳ ದುರವಸ್ಥೆಯಾಗಿದೆ. ಈ ವಿಷಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಅದರ ಕುರಿತಾದ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಈ ಆದೇಶವನ್ನು ನೀಡಿತು.