ಜಕಾರ್ತಾ(ಇಂಡೋನೇಶಿಯಾ) – ಇಲ್ಲಿ ಪ್ರಾಚೀನ ಕಾಲದಿಂದಲೂ ‘ಯದ್ರಯಾ ಕಸಾಡಾ’ ಹೆಸರಿನ ಧಾರ್ಮಿಕ ಉತ್ಸವವನ್ನು ಆಯೋಜಿಸಲಾಗುತ್ತದೆ. ಇಂಡೋನೇಶಿಯಾದಲ್ಲಿ ವಾಸಿಸುವ ಆದಿವಾಸಿ ಹಿಂದೂಗಳು ‘ಟೆಂಗರ’ ಎಂಬ ಜಾತಿಯವರಾಗಿದ್ದು ಅವರು ಪೂಜೆ ಮಾಡಲು ಪೂರ್ವ ಜಾವಾದಲ್ಲಿನ ಪ್ರೊಬೊಲಿಂಗಗೊದಲ್ಲಿರುವ ಮೌಂಟ್ ಬ್ರೊಮೊ ಜ್ವಾಲಾಮುಖಿಯ ಬಳಿ ಹೋಗುತ್ತಾರೆ. ಅಲ್ಲಿ ಅವರು ಶ್ರೀ ಗಣೇಶನ ಪೂಜೆಯನ್ನು ಮಾಡುತ್ತಾರೆ. ಈ ಬಾರಿಯೂ ಅವರು ಅಲ್ಲಿಗೆ ಹೋಗಿ ಶ್ರೀ ಗಣೇಶನ ಪೂಜೆಯನ್ನು ಮಾಡಿದರು. ದೇವರನ್ನು ಪ್ರಸನ್ನಗೊಳಿಸಲು ಈ ಜನರು ಜ್ವಾಲಾಮುಖಿಗೆ ಪ್ರಸಾದ ಅರ್ಪಿಸುತ್ತಾರೆ. ಅದರಲ್ಲಿ ಧಾನ್ಯ, ಸೊಪ್ಪು, ಪಶು ಮತ್ತು ಪಕ್ಷಿಯನ್ನು ಅರ್ಪಿಸುತ್ತಾರೆ. ಭೂತವನ್ನು ಶಾಂತಗೊಳಿಸಲು ಮಾಂಸ ಮತ್ತು ಅನ್ನಗಳ ನೈವೇದ್ಯವನ್ನು ತೋರಿಸಬೇಕು, ಈ ರೀತಿಯ ನೈವೇದ್ಯವನ್ನು ತೋರಿಸುವುದರಿಂದ ಜ್ವಾಲಾಮುಖಿ ಸ್ಪೋಟವಾಗುವುದಿಲ್ಲ ಮತ್ತು ಅಲ್ಲಿಯ ಜನರು ಸುರಕ್ಷಿತರಿರುತ್ತಾರೆ ಎಂದು ಅವರ ನಂಬಿಕೆಯಾಗಿದೆ. (ಇಂಡೋನೇಶಿಯಾದಲ್ಲಿ ಅಂನಿಸ.ಯಂತಹ ಸಂಘಟನೆಗಳು ಇಲ್ಲ, ಇಲ್ಲದಿದ್ದರೆ ಈ ಹಿಂದೂಗಳನ್ನು ವಿರೋಧಿಸುತ್ತಾ ಅವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದರು ! – ಸಂಪಾದಕರು)
ಇಲ್ಲಿ ೩೦ ಗ್ರಾಮಗಳಲ್ಲಿ ಟೆಂಗರ ಜಾತಿಯ ಸರಿ ಸುಮಾರು ೧ ಲಕ್ಷ ಜನರು ವಾಸಿಸುತ್ತಾರೆ. ಅವರು ತಮ್ಮನ್ನು ಹಿಂದೂಗಳೆಂದುಕೊಳ್ಳುತ್ತಾರೆ. ಇಂಡೊನೇಶಿಯಾದ ಕೊನೆಯ ಆಡಳಿತ ನಡೆಸಿದ ಭಾರತೀಯ ವಂಶದ ರಾಜ ಮಾಜಾಪಹಿತ ರಾಜಕುಮಾರ ಇವರ ವಂಶದವರೆಂದು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ಇಂದಿಗೂ ಕಾಡಿನಲ್ಲಿ ವಾಸಿಸುತ್ತಿದ್ದು ಮಾಂಸಾಹಾರ ಮತ್ತು ಸಸ್ಯಹಾರ ಎರಡನ್ನೂ ಸೇವಿಸುತ್ತಾರೆ. ಅವರು ಹಿಂದೂ ಧರ್ಮದ ಹೊರತಾಗಿ ಬೌದ್ಧ ಧರ್ಮವನ್ನೂ ನಂಬುತ್ತಾರೆ, ಬ್ರಹ್ಮ, ವಿಷ್ಣು ಮತ್ತು ಮಹೇಶನೊಂದಿಗೆ ಭಗವಾನ ಬುದ್ಧನ ಪೂಜೆಯನ್ನೂ ಮಾಡುತ್ತಾರೆ.