ಮೊದಲು ನೀವು ನೀಡಿದ ಭರವಸೆಯನ್ನು ಪೂರ್ಣಗೊಳಿಸಿ ! – ವಿಶ್ವಸಂಸ್ಥೆಯಿಂದ ತಾಲಿಬಾನ್ ಸರಕಾರಕ್ಕೆ ತಾಕೀತು

ತಾಲಿಬಾನ್ ಸರಕಾರದ ನಿಯೋಗವು ಮೊದಲ ಬಾರಿಗೆ ಅಮೇರಿಕಾದ ಸರಕಾರದೊಂದಿಗೆ ನೇರ ಮಾತುಕತೆ ನಡೆಸಿದ ನಂತರ ಗುಟೆರಸ್ ಇವರು ವಿಶ್ವ ಸಂಸ್ಥೆಯ ನಿಲುವನ್ನು ಮಂಡಿಸಿದರು.

ಪಾಕಿಸ್ತಾನ ಭಯೋತ್ಪಾದನೆಯನ್ನು ಹರಡುವ ಅತಿದೊಡ್ಡ ಅಪರಾಧಿ – ವಿಶ್ವ ಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಛೀಮಾರಿ

ಇಂತಹ ಛೀಮಾರಿಗಳಿಂದ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಮತ್ತು ಅಂತರ ರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ವಿರುದ್ಧ ವಿಶೇಷವಾಗಿ ಏನನ್ನೂ ಮಾಡುವುದಿಲ್ಲ, ಎಂಬುದನ್ನು ಕಳೆದ ಮೂರು ದಶಕದಿಂದ ಭಾರತವು ಗಮನಿಸುತ್ತಾ ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ ಮಲೇರಿಯಾದ ಮೊದಲ ಲಸಿಕೆಗೆ ಒಪ್ಪಿಗೆ

ಮಲೇರಿಯಾದಿಂದ ಎಲ್ಲಕ್ಕಿಂತ ಹೆಚ್ಚು ಹಾನಿಯಾಗಿರುವಂತಹ ಆಫ್ರಿಕಾದ ದೇಶಗಳಿಗೆ ಈ ಲಸಿಕೆಯನ್ನು ಮೊದಲು ನೀಡಲಾಗುವುದು.

2050 ನೇ ಇಸವಿಯ ವರೆಗೆ 500 ಕೋಟಿ ಜನರು ಭೀಕರ ನೀರಿನ ಕೊರತೆಗೆ ತುತ್ತಾಗಲಿದ್ದಾರೆ ! – ವಿಶ್ವ ಸಂಸ್ಥೆಯ ಎಚ್ಚರಿಕೆ

ವಿಜ್ಞಾನವು ಕಳೆದ 100 ರಿಂದ 150 ವರ್ಷಗಳಲ್ಲಿ ಪೃಥ್ವಿಯನ್ನು ಅತ್ಯಂತ ದಯನೀಯ ಸ್ಥಿತಿಗೆ ತಂದಿದೆ, ಈ ಬಗ್ಗೆ ವಿಜ್ಞಾನವಾದಿಗಳಿಗೆ ನಾಚಿಕೆಯಾಗಬೇಕು !

ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಶಾಂತಿಯ ಬಗ್ಗೆ ಮಾತನಾಡುತ್ತದೆ; ಆದರೆ ಅದರ ಪ್ರಧಾನಿ ಒಸಾಮಾ ಬಿನ್ ಲಾಡೆನ್‌ಅನ್ನು ಗೌರವಿಸುತ್ತಾರೆ ! – ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಭಾರತ

ಪಾಕಿಸ್ತಾನವು ವಿಶ್ವ ಸಂಸ್ಥೆಯಲ್ಲಿ ಶಾಂತಿ ಮತ್ತು ಭದ್ರತೆಯ ಬಗ್ಗೆ ಮಾತನಾಡುತ್ತದೆ; ಆದರೆ ಅವರ ಪ್ರಧಾನಿ ಇಮ್ರಾನ್ ಖಾನ್, ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನನ್ನು ‘ಹುತಾತ್ಮ’ ಎಂದು ಹೇಳಿ ಗೌರವಿಸುತ್ತಾರೆ, ಎಂದು ಹೇಳುತ್ತಾ ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಚಾಟಿ ಬೀಸಿದೆ.

ಪಾಕಿಸ್ತಾನದಲ್ಲಿ ೧೨ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ

ಅಮೇರಿಕಾದ ‘ಕಾಂಗ್ರೆಶನಲ ರಿಸರ್ಚ್ ಸರ್ವಿಸಸ (ಸೀ.ಆರ್.ಸೀ.) ಸಂಸ್ಥೆಯ ವರದಿಗೆ ಅನುಸಾರ ಜಗತ್ತಿನಾದ್ಯಂತ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಪೈಕಿ ೧೨ ಸಂಘಟನೆಗಳು ಪಾಕಿಸ್ತಾನದಲ್ಲಿದೆ.

ಟೋರಂಟೊ (ಕೆನಡಾ) ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಹತ್ತಿರ ಬಾಂಬ್ ಪತ್ತೆ

ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಹತ್ತಿರ ಬಾಂಬ ಪತ್ತೆಯಾಗಿದೆ. ಪೊಲೀಸರು ಬಾಂಬ್ ಇಟ್ಟ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸರು ಈ ಬಾಂಬ ಸಿಡಿಯುವ ಮೊದಲು ನಿಷ್ಕ್ರೀಯಗೊಳಿಸಿದ್ದಾರೆ.

ಭಾರತದಲ್ಲಿ ಅನ್ಯ ಪಂಥದವರಿಗೆ ಹೋಲಿಸಿದರೆ ಮುಸಲ್ಮಾನರ ಜನನ ಪ್ರಮಾಣ ಹೆಚ್ಚು ! – ಪ್ಯೂ ರಿಸರ್ಚ್‌ನ ವರದಿ

ಭಾರತೀಯ ಮುಸಲ್ಮಾನರ ಜನನ ಪ್ರಮಾಣವು ಅನ್ಯ ಮತದವರಿಗೆ ಹೋಲಿಸಿದರೆ ಬಹಳ ಜಾಸ್ತಿಯಿದೆ. ಮುಸಲ್ಮಾನರಲ್ಲಿ ವರ್ಷ ೧೯೯೨ರಲ್ಲಿ ಪ್ರತಿಯೊಬ್ಬ ಮಹಿಳಾ ಜನನ ಪ್ರಮಾಣವು ೪.೪ರಷ್ಟಿತ್ತು, ಹಾಗೂ ಅದು ವರ್ಷ ೨೦೧೫ರಲ್ಲಿ ಕಡಿಮೆಯಾಗಿ ೨.೬ ಆಗಿದೆ.

ಕಾಬುಲನಲ್ಲಿ ಡ್ರೋನ್‍ನಿಂದ ನಡೆಸಿದ ದಾಳಿಯಲ್ಲಿ 10 ಅಮಾಯಕರು ಹತರಾದುದಕ್ಕೆ ಕ್ಷಮೆಯಾಚಿಸಿದ ಅಮೇರಿಕಾ

ಹತರಾಗಿರುವ ಜನರು ಭಯೋತ್ಪಾದಕರಲ್ಲ, ಅಮಾಯಕ ನಾಗರಿಕರಿದ್ದರು, ಅದು ಈಗ ಬೆಳಕಿಗೆ ಬಂದ ನಂತರ ಅಮೇರಿಕಾವು ಇದನ್ನು ಒಪ್ಪಿ ಕ್ಷಮೆ ಯಾಚಿಸಿದೆ.

ಕೆನಡಾದ ಮಿಸಿಸಾಗಾದಲ್ಲಿ ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿದರೆಂದು ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಿದ ಅಪರಿಚಿತ ಹುಡುಗರು

ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಇಬ್ಬರು ಅಪ್ರಾಪ್ತ ಹುಡುಗರು ಈ ಹಿಂದೂವಿನ, ಹಾಗೂ ಅವರ ಪತ್ನಿ ಮತ್ತು 2 ಮಕ್ಕಳ ಮೇಲೆ ಹಲ್ಲೆ ನಡೆಸಿದರು.