ಪಾಕಿಸ್ತಾನದಲ್ಲಿ ೧೨ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ

ಅಮೇರಿಕಾದ ‘ಕಾಂಗ್ರೆಶನಲ ರಿಸರ್ಚ್ ಸರ್ವೀಸಸನ ವರದಿ !

  • ೫ ಉಗ್ರಗಾಮಿ ಭಯೋತ್ಪಾದಕ ಸಂಘಟನೆಗಳ ಗುರಿ ಭಾರತ ! 
  • ಅಮೇರಿಕಾದ ಸಂಸ್ಥೆಗೆ ಗೊತ್ತಿರುವುದು ಸಂಪೂರ್ಣ ಜಗತ್ತಿಗೆ ಹಾಗೂ ಸಂಯುಕ್ತ ರಾಷ್ಟ್ರಕ್ಕೂ ತಿಳಿದಿದೆ; ಆದರೆ ಅದರ ವಿರುದ್ಧ ಮಾತ್ರ ಯಾರೂ ಕೂಡ ಏನೂ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಇದೆಲ್ಲವನ್ನೂ ನೋಡಿದಾಗ ಭಾರತವು ಗಾಂಧಿಗಿರಿಯನ್ನು ಬಿಟ್ಟು ಆಕ್ರಮಣಕಾರಿ ನೀತಿಯನ್ನು ಅಳವಡಿಸಿಕೊಳ್ಳಬೇಕು !

ವಾಶಿಂಗಟನ (ಅಮೇರಿಕಾ) – ಅಮೇರಿಕಾದ ‘ಕಾಂಗ್ರೆಶನಲ ರಿಸರ್ಚ್ ಸರ್ವಿಸಸ (ಸೀ.ಆರ್.ಸೀ.) ಸಂಸ್ಥೆಯ ವರದಿಗೆ ಅನುಸಾರ ಜಗತ್ತಿನಾದ್ಯಂತ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಪೈಕಿ ೧೨ ಸಂಘಟನೆಗಳು ಪಾಕಿಸ್ತಾನದಲ್ಲಿದೆ. ಈ ೧೨ ಸಂಘಟನೆಗಳ ಪೈಕಿ ೫ ಸಂಘಟನೆಗಳು ಭಾರತವನ್ನು ತಮ್ಮ ಗುರಿಯನ್ನಾಗಿಸಿಕೊಂಡಿವೆ, ಎಂದೂ ಅದರಲ್ಲಿ ಹೇಳಲಾಗಿದೆ. ಇವುಗಳ ಪೈಕಿ ಕೆಲವು ಸಂಘಟನೆಗಳು ವರ್ಷ ೧೯೮೦ ರಿಂದ ಪಾಕಿಸ್ತಾನದಲ್ಲಿ ಸಕ್ರಿಯವಾಗಿದೆ ಎಂದು ಸಹ ಈ ವರದಿಯಲ್ಲಿ ಹೇಳಲಾಗಿದೆ.

 ಈ ವರದಿಯಂತೆ

೧. ಲಷ್ಕರ-ಎ-ತೊಯಬಾ ಸಂಘಟನೆಯು ೧೯೮೦ರಲ್ಲಿ ಪಾಕಿಸ್ತಾನದಲ್ಲಿ ಸ್ಥಾಪನೆಯಾಯಿತು. ೨೦೦೧ರಲ್ಲಿ ಈ ಸಂಘಟನೆಯು ಜಾಗತಿಕ ಭಯೋತ್ಪಾದಕ ಸಂಘಟನೆಯೆಂದು ಗುರುತಿಸಲ್ಪಡ ತೊಡಗಿತು. ೨೦೦೮ರಲ್ಲಿ ಈ ಭಯೋತ್ಪಾದಕ ಸಂಘಟನೆಯು ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸಿತು. ಇದಲ್ಲದೇ ಈ ಸಂಘಟನೆಯು ಇಂತಹ ಅನೇಕ ಭಯೋತ್ಪಾದಕ ಕೃತ್ಯಗಳನ್ನು ಮಾಡಿದೆ.

೨. ಜೆಶ-ಎ-ಮಹಂಮದ ಎಂಬ ಭಯೋತ್ಪಾದಕ ಸಂಘಟನೆಯನ್ನು ೨೦೦೨ರಲ್ಲಿ ಸ್ಥಾಪಿಸಲಾಯಿತು. ಮಸೂದ ಅಝಹರ ಎಂಬುವವನು ಈ ಸಂಘಟನೆಯನ್ನು ಸ್ಥಾಪಿಸಿದನು. ಜೈಶ-ಎ-ಮಹಂಮದ ಭಾರತದಲ್ಲಿ ಅನೇಕ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದೆ.

೩. ಹಿಜಬುಲ ಮುಜಾಹಿದೀನ ಅನ್ನು ೧೯೮೯ರಲ್ಲಿ ಒಂದು ರಾಜಕೀಯ ಪಕ್ಷವೆಂದು ಸ್ಥಾಪಿಸಲಾಯಿತು; ಆದರೆ ಈ ಸಂಘಟನೆಯು ಅನೇಕ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ. ೨೦೧೭ರಲ್ಲಿ ಈ ಭಯೋತ್ಪಾದಕ ಸಂಘಟನೆಯು ‘ಜಾಗತಿಕ ಭಯೋತ್ಪಾದಕ ಸಂಘಟನೆಎಂದು ಪರಿಚಿತವಾಯಿತು.

೪. ಹರಕತ-ಉಲ-ಜಿಹಾದ-ಇಸ್ಲಾಮಿ ಎಂಬ ಸಂಘಟನೆಯನ್ನು ೧೯೮೦ರಲ್ಲಿ ಸ್ಥಾಪಿಸಲಾಯಿತು. ಸೋವ್ಹಿಯತ ಸೈನ್ಯದ ವಿರುದ್ಧವಾಗಿ ಈ ಸಂಘಟನೆಯನ್ನು ಸ್ಥಾಪಿಸಲಾಯಿತು; ಆದರೆ ೨೦೧೦ರೊಳಗೆ ಅದು ‘ಜಾಗತಿಕ ಭಯೋತ್ಪಾದಕ ಸಂಘಟನೆಯಾಯಿತು. ಮಾಹಿತಿಗೆ ಅನುಸಾರವಾಗಿ ೧೯೮೯ರ ನಂತರ ಆ ಸಂಘಟನೆಯು ಭಾರತದಲ್ಲಿ ವಿವಿಧ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ.