ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ ಮಲೇರಿಯಾದ ಮೊದಲ ಲಸಿಕೆಗೆ ಒಪ್ಪಿಗೆ

ವಾಷಿಂಗ್ಟನ್ (ಅಮೇರಿಕಾ) – ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಮೊದಲ ಮಲೇರಿಯಾ ತಡೆಗಟ್ಟುವಿಕೆಯ ಲಸಿಕೆ ‘ಆರ್.ಟಿ.ಯಸ್, ಯಸ್/ಎಎಸ್ 01′ ಗೆ ಅನುಮತಿ ನೀಡಿದೆ. ಮಲೇರಿಯಾದಿಂದ ಎಲ್ಲಕ್ಕಿಂತ ಹೆಚ್ಚು ಹಾನಿಯಾಗಿರುವಂತಹ ಆಫ್ರಿಕಾದ ದೇಶಗಳಿಗೆ ಈ ಲಸಿಕೆಯನ್ನು ಮೊದಲು ನೀಡಲಾಗುವುದು. ಅದರ ನಂತರ ಬೇರೆ ದೇಶಗಳಲ್ಲಿ ಈ ಲಸಿಕೆಯ ಉಪಯೋಗಿಸಬೇಕೋ ಬೇಡವೋ ಎಂದು ಆಯಾ ದೇಶಗಳು ಸ್ವತಃ ನಿರ್ಧರಿಸಬೇಕು.

5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಲೇರಿಯಾ ಆಗುವ ಸಾಧ್ಯತೆ ಹೆಚ್ಚು ಪ್ರಮಾಣದಲ್ಲಿರುತ್ತದೆ. ಪ್ರತಿ 2 ನಿಮಿಷಕ್ಕೆ ಮಲೇರಿಯಾದಿಂದ ಒಂದು ಮಗುವಿನ ಮೃತ್ಯು ಆಗುತ್ತದೆ. 2019 ರಲ್ಲಿ ಜಗತಿನಾದ್ಯಂತ ಮಲೇರಿಯಾದಿಂದ 4 ಲಕ್ಷ 9 ಸಾವಿರ ಜನರು ತೀರಿಕೊಂಡಿದ್ದರು. ಈ ಪೈಕಿ ಶೇ. 64 ರಷ್ಟು ಅಂದರೆ 2 ಲಕ್ಷ 74 ಸಾವಿರ ಮಕ್ಕಳು ಇದ್ದರು. ಅವರ ವಯಸ್ಸು 5 ವರ್ಷ ಕ್ಕಿಂತಲೂ ಕಡಿಮೆ ಇತ್ತು.