ಪಾಕಿಸ್ತಾನ ಭಯೋತ್ಪಾದನೆಯನ್ನು ಹರಡುವ ಅತಿದೊಡ್ಡ ಅಪರಾಧಿ – ವಿಶ್ವ ಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಛೀಮಾರಿ

* ಇಂತಹ ಛೀಮಾರಿಗಳಿಂದ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಮತ್ತು ಅಂತರ ರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ವಿರುದ್ಧ ವಿಶೇಷವಾಗಿ ಏನನ್ನೂ ಮಾಡುವುದಿಲ್ಲ, ಎಂಬುದನ್ನು ಕಳೆದ ಮೂರು ದಶಕದಿಂದ ಭಾರತವು ಗಮನಿಸುತ್ತಾ ಬಂದಿದೆ. ಆದ್ದರಿಂದ ಪಾಕಿಸ್ತಾನವನ್ನು ಯುದ್ಧದ ಮೂಲಕ ನಾಶ ಮಾಡುವುದು, ಇದೊಂದೇ ಭಯೋತ್ಪಾದನೆಯನ್ನು ನಾಶ ಮಾಡುವ ಮಾರ್ಗವಾಗಿದೆ, ಭಾರತವು ಇದನ್ನು ಅರಿತುಕೊಂಡು ಯಾವಾಗ ಅದಕ್ಕನುಸಾರ ಕ್ರಮಕೈಗೊಳ್ಳುವುದು ?- ಸಂಪಾದಕರು 

ಭಾರತದ ಪ್ರತಿನಿಧಿ ಡಾ. ಕಾಜಲ್ ಭಟ್

ನ್ಯೂಯಾರ್ಕ್ (ಅಮೇರಿಕ) – ಪಾಕಿಸ್ತಾನವು ಮತ್ತೊಮ್ಮೆ ವಿಶ್ವಸಂಸ್ಥೆಯ ವೇದಿಕೆಯನ್ನು ಸುಳ್ಳನ್ನು ಹರಡಿಸಲು ದುರುಪಯೋಗಿಸಿಕೊಂಡಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಹರಡುವ ಅತಿ ದೊಡ್ಡ ಅಪರಾಧಿಯಾಗಿದೆ; ಆದರೆ ಅದು ಭಯೋತ್ಪಾದನೆಯಿಂದ ಬಳಲುತ್ತಿರುವ ನಾಟಕ ಮಾಡುತ್ತಿರುತ್ತದೆ, ಎಂದು ಭಾರತವು ವಿಶ್ವ ಸಂಸ್ಥೆಯ ಮಹಾಸಭೆಯ 76 ನೇ ಸತ್ರದ 6 ನೇ ಸಮಿತಿಯಲ್ಲಿ ಪಾಕಿಸ್ತಾನವನ್ನು ಟೀಕಿಸಿತು. ಭಾರತದ ಪ್ರತಿನಿಧಿ ಡಾ. ಕಾಜಲ್ ಭಟ್ ಇವರು ಎಲ್ಲಾ ಸದಸ್ಯ ದೇಶಗಳು ಭಯೋತ್ಪಾದನೆಯ ವಿರುದ್ಧ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ ಎಂದೂ ಈ ಸಮಯದಲ್ಲಿ ಹೇಳಿದರು.