ದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿದೆ ! – ಎನ್.ಐ.ಎ.

ದೇಶದಲ್ಲಿ ೨೬/೧೧ ನಂತಹ ದೊಡ್ಡ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಲಾಗುತ್ತಿದೆ, ಎಂಬ ಮಾಹಿತಿಯನ್ನು ನೀಡುವ ದೂರವಾಣಿ ಕರೆ ಬಂದಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.)ವು ಹೇಳಿದೆ. ಹಾಗಾಗಿ ಈ ಪ್ರಕರಣದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ದೂರವಾಣಿ ಕರೆಯು ಬಂಗಾಳದ ರಣಘಾಟ್‍ನಿಂದ ಬಂದಿರುವುದು ಬೆಳಕಿಗೆ ಬಂದಿದೆ.

ಹಾಪುಡ (ಉತ್ತರ ಪ್ರದೇಶ) ದಲ್ಲಿ ಅತ್ಯಾಚಾರದಿಂದ ಗರ್ಭಿಣಿಯಾದ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಪಂಚಾಯತಿಯಿಂದ ಆದೇಶ

ಮದುವೆಯ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಲಾಗಿತ್ತು. ಅವಳು ೫ ತಿಂಗಳ ಗರ್ಭಿಣಿಯಾಗಿದ್ದಾಳೆ. ಪಂಚಾಯಿತಿಯಿಂದ ಅವಳಿಗೆ ಗ್ರಾಮವನ್ನು ತೊರೆಯುವ ಆದೇಶ ನೀಡಲಾಗಿದೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.

ಟ್ವಿಟರ್ ಭಾರತದೊಂದಿಗೆ ಸಂಪೂರ್ಣವಾಗಿ ಕಟಿಬದ್ಧವಾಗಿದೆ ಮತ್ತು ಇರಲಿದೆ !

ಟ್ವಿಟರ್ ಭಾರತದೊಂದಿಗೆ ಸಂಪೂರ್ಣ ಕಟಿಬದ್ಧವಾಗಿದೆ ಮತ್ತು ಇರಲಿದೆ. ಹೊಸ ನಿಯಮಗಳು ಮತ್ತು ಸೂಚನೆಗಳನ್ನು ಅನುಸರಿಸಲು ನಾವು ಸರ್ವತೋಮುಖವಾಗಿ ಪ್ರಯತ್ನಿಸುತ್ತೇವೆ. ಆ ದಿಕ್ಕಿನಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ನಾವು ಕಾನೂನುರೀತ್ಯಾ ವರದಿಯನ್ನು ಸಹ ನೀಡಿದ್ದೇವೆ. ಭಾರತ ಸರಕಾರದೊಂದಿಗೆ ನಮ್ಮ ಸಂವಾದವನ್ನು ಮುಂದುವರಿಸುತ್ತೇವೆ ಎಂದು ಮೃದುಧೋರಣೆಯ ನಿಲುವನ್ನು ಟ್ವಿಟರ್ ಕೇಂದ್ರ ಸರಕಾರವು ನೀಡಿದ್ದ ಎಚ್ಚರಿಕೆಗೆ ಪ್ರತಿಯಾಗಿ ತೆಗೆದುಕೊಂಡಿದೆ.

ಬಾಂಕಾ (ಬಿಹಾರ)ದಲ್ಲಿ ಮದರಸಾದಲ್ಲಿ ಸ್ಫೋಟದಿಂದ ಕಟ್ಟಡ ಧ್ವಂಸ !

ರಾಜ್ಯದ ಬಾಂಕಾದಲ್ಲಿ ಒಂದು ಮದರಸಾದಲ್ಲಿ ಸಂಭವಿಸಿದ ಸ್ಫೋಟದಿಂದ ಇಡೀ ಕಟ್ಟಡ ಕುಸಿದಿದೆ. ಈ ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ. `ಇದು ಗ್ಯಾಸ್ ಸಿಲಿಂಡರ್ ಸ್ಫೋಟವೋ ಅಥವಾ ಬಾಂಬ್ ಸ್ಫೋಟ ?, ಎಂದು ನಾವು ತನಿಖೆ ನಡೆಸುತ್ತಿದ್ದೇವೆ’, ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತ್‍ನಲ್ಲಿ ‘ಗೋ ಸಂಶೋಧನಾ ಕೇಂದ್ರ’ದ ಸ್ಥಾಪನೆ !

‘ಗುಜರಾತ ಟೆಕ್ನೊಲೊಜಿಕಲ ಯುನಿವರ್ಸಿಟಿ’ (‘ಜಿ.ಟಿ.ಯು.’ವು) `ಗೋ ಸಂಶೋಧನಾ ಕೇಂದ್ರ’ವನ್ನು ಪ್ರಾರಂಭಿಸಿದೆ. ಹಸುವಿನ ಹಾಲು, ಗೋಮೂತ್ರ ಮತ್ತು ಸಗಣಿ ಸಾಂಪ್ರದಾಯಿಕ ಬಳಕೆಯನ್ನು ಉತ್ತೇಜಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಕಾಮಧೇನು ಆಯೋಗದಡಿಯಲ್ಲಿ ಸ್ಥಾಪಿಸಲಾದ ‘ಕಾಮಧೇನು ಸಂಸ್ಥೆ’ ಈ ಕೇಂದ್ರದ ಮುಂದಾಳತ್ವವನ್ನು ವಹಿಸಿಕೊಂಡಿದೆ.

ಪಾಕಿಸ್ತಾನಿ ಸೈನ್ಯವು ‘ಹಮಾಸ್’ನ ಭಯೋತ್ಪಾದಕರಿಗೆ ತರಬೇತಿಯನ್ನು ನೀಡುತ್ತದೆ ! – ಪಾಕಿಸ್ತಾನದ ಹಿರಿಯ ನಾಯಕನಿಂದ ರಹಸ್ಯಸ್ಪೋಟ

ಗಾಜಾ ಪ್ರದೇಶದಲ್ಲಿ ಪ್ಯಾಲೇಸ್ಟಿನಿಯನ್ `ಹಮಾಸ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಉಗ್ರರಿಗೆ ಪಾಕಿಸ್ತಾನಿ ಸೈನ್ಯವೇ ತರಬೇತಿಯನ್ನು ನೀಡುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಮುಖಂಡ ರಾಜಾ ಜಫರ್ ಉಲ್ ಹಕ್ ಹೇಳಿದ್ದಾರೆ. ಪಾಕಿಸ್ತಾನಿ ಸೈನ್ಯವು ದೀರ್ಘಕಾಲದಿಂದ ಹಮಾಸ್ ಉಗ್ರರಿಗೆ ತರಬೇತಿಯನ್ನು ನೀಡುತ್ತಿದೆ ಮತ್ತು ಅದಕ್ಕಾಗಿ `ಸ್ಪೆಶಲ್ ಕಮಾಂಡೋ ಯುನಿಟ್’ನ ಒಂದು ಪಡೆಯು ಕೆಲವು ವರ್ಷಗಳಿಂದ ಅಲ್ಲಿ ನಿಯುಕ್ತಿಗೊಂಡಿದೆ ಎಂದು ಅವರು ಹೇಳಿದರು.

ಲಸಿಕೀಕರಣಗಾಗಿ ಹಜ್ ಯಾತ್ರಿಕರನ್ನು ತನ್ನ ಆದ್ಯತೆಯ ಪಟ್ಟಿಯಲ್ಲಿ ಸೇರಿಸಿದ ಕೇರಳದ ಸಿಪಿಐ (ಎಂ) ನೇತೃತ್ವದ ಸರಕಾರ !

ಕೇರಳ ರಾಜ್ಯದ ಸಿಪಿಐ (ಎಂ) ಸರಕಾರವು ಕೊರೊನಾ ಲಸಿಕೆ ನೀಡಲು ೧೮ ರಿಂದ ೪೪ ವರ್ಷದೊಳಗಿನ ನಾಗರಿಕರಿಗೆ ಆದ್ಯತೆ ನೀಡಿದೆ. ಈ ಪೈಕಿ ೪೩ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಲ್ಲಿ ಹಜ್ ಯಾತ್ರಾರ್ಥಿಗಳನ್ನು ಸಹ ಸೇರಿಸಲಾಗಿದೆ.

ಜೂನ್ ೨೧ ರಿಂದ ಕೇಂದ್ರ ಸರಕಾರವು ದೇಶದಲ್ಲಿ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳಿಗೆ ಉಚಿತ ಲಸಿಕೀಕರಣ ನೀಡಲಿದೆ ! – ಪ್ರಧಾನಿ ನರೇಂದ್ರ ಮೋದಿಯಿಂದ ಘೋಷಣೆ

ಜೂನ್ ೨೧ ರಿಂದ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಕೊರೊನಾ ವಿರುದ್ಧ ಉಚಿತವಾಗಿ ಲಸಿಕೆ ನೀಡಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ೭ ರಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಕಟಿಸಿದರು. ಅಲ್ಲದೆ, ರಾಜ್ಯ ಸರಕಾರಗಳಿಗೆ ನೀಡಲಾಗಿರುವ ಚುಚ್ಚುಮದ್ದಿನ ಶೇ. ೨೫ ರಷ್ಟು ಭಾಗವನ್ನು ಕೇಂದ್ರ ಸರಕಾರವು ತನ್ನಲ್ಲಿ ತೆಗೆದುಕೊಳ್ಳಲಿದೆ

ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಹೇಳಿದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರು !

ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇವರು ತಮ್ಮ ‘ಇನ್‍ಸ್ಟಾಗ್ರಾಮ್’ ಈ ಸಾಮಾಜಿಕ ಮಾಧ್ಯಮದಲ್ಲಿ ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಆತನನ್ನು ‘ಹುತಾತ್ಮ’ ಎಂದು ಕರೆದಿದ್ದಾರೆ.

ಸಿಕಂದರಾ (ಉತ್ತರ ಪ್ರದೇಶ) ಇಲ್ಲಿಯ ದರ್ಗಾಗೆ ಹೋಗುವ ಜನಸಮೂಹದಿಂದ ಪೊಲೀಸರ ಮೇಲೆ ದಾಳಿ

ಇದರಿಂದ ಮತಾಂಧರ ಬಗ್ಗೆ ಪೊಲೀಸರಿಗೆ ಎಷ್ಟು ಭಯ ಇದೆ ಎಂಬುದು ಗಮನಕ್ಕೆ ಬರುತ್ತದೆ ! ಹಿಂದೂಗಳ ಮುಂದೆ ಪೌರುಷವನ್ನು ತೋರಿಸುವ ಪೊಲೀಸರು ಮತಾಂಧರಿಂದ ಹೊಡೆಸಿಕೊಳ್ಳುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !