ಭಾರತೀಯ ಜೀವನಪದ್ಧತಿ ವಿದೇಶಿ ಶಕ್ತಿಗಳ ಎದುರು ತಲೆಬಾಗುವುದಿಲ್ಲ ಎನ್ನುವುದನ್ನು ವಿಜಯನಗರ ಸಾಮ್ರಾಜ್ಯವು ಜಗತ್ತಿಗೆ ತೋರಿಸಿಕೊಟ್ಟಿದೆ- ಶ್ರೀ. ಕೃಷ್ಣ ದೇವರಾಯ ಅರವೀಡು ರಾಜವಂಶ, ಆನೆಗುಂದಿ ನರಪತಿ ಸಂಸ್ಥಾನಮ್, ಕರ್ನಾಟಕ

ವಿಜಯನಗರ ಸಾಮ್ರಾಜ್ಯವು ಆಕ್ರಮಣಕಾರಿಗಳ ವಿರುದ್ಧ ಹೋರಾಟ ನಡೆಸಿತು. ಈ ಸಾಮ್ರಾಜ್ಯವು ಹಿಂದೂಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ರಕ್ಷಿಸುವುದರ ಜೊತೆಗೆ ಹಿಂದೂಗಳಿಗಾಗಿ ಹೊಸ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಿತು. ಈ ಸಾಮ್ರಾಜ್ಯವು ಹಿಂದೂಗಳಿಗೆ ಆಶಾ ಕಿರಣವಾಗಿತ್ತು.

ಭಾರತ ರಾಜಕೀಯ ದೃಷ್ಟಿಯಿಂದ ಸ್ವತಂತ್ರವಾಗಿದೆ, ಧಾರ್ಮಿಕ ದೃಷ್ಟಿಯಿಂದಲ್ಲ ! – ಡಾ. ಎನ್. ರಮೇಶ ಹಾಸನ, ಸಹಕಾರ ಸಂಜೀವನಿ ಹಾಸ್ಪಿಟಲ್, ಹಾಸನ, ಕರ್ನಾಟಕ

ಕೇವಲ ರಾಜಕೀಯ ದೃಷ್ಟಿಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ, ಧಾರ್ಮಿಕ ದೃಷ್ಟಿಯಿಂದ ನಾವು ಇಂದಿಗೂ ಸ್ವತಂತ್ರರಾಗಿಲ್ಲ. ಇಂದಿಗೂ ದೇಶದಲ್ಲಿ ಹಿಂದೂಗಳ ತಲೆಕೆಡಿಸಿ ಅವರ ದಾರಿತಪ್ಪಿಸಲಾಗುತ್ತಿದೆ. ಇಸ್ಲಾಮಿಕ್ ನಿಯಮಗಳನ್ನು ಗೌರವಿಸಲಾಗುತ್ತಿದೆ.- ಡಾ. ಎನ್. ರಮೇಶ ಹಾಸನ

ಪ್ರತಿಯೊಂದು ದೇವಸ್ಥಾನಗಳು ಸರಕಾರೀಕರಣದಿಂದ ಮುಕ್ತಗೊಳ್ಳುವವರೆಗೆ ಹೋರಾಟವನ್ನು ಮುಂದುವರಿಸೋಣ – ಸುನೀಲ ಘನವಟ, ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ

ಗೋವಾದಲ್ಲಿ `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇಯ ದಿನದಂದು `ದೇವಸ್ಥಾನಗಳ ಸಂಘಟನೆ: ಪ್ರಯತ್ನ ಮತ್ತು ಯಶಸ್ಸು’ ಈ ವಿಷಯದ ಕುರಿತು ಸಂವಾದವನ್ನು ಆಯೋಜಿಸಲಾಗಿತ್ತು.

ದೇವಾಲಯಗಳು ಧರ್ಮಶಿಕ್ಷಣ ಕೇಂದ್ರಗಳಾಗಬೇಕು ! – ಸದ್ಗುರು ನೀಲೇಶ ಸಿಂಗಬಾಳ, ಧರ್ಮಪ್ರಚಾರಕ ಸಂತ, ಹಿಂದೂ ಜನಜಾಗೃತಿ ಸಮಿತಿ

ಹಿಂದೂಗಳಿಗೆ ಧರ್ಮಶಿಕ್ಷಣದ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಗೊಳ್ಳುತ್ತಿದ್ದಾರೆ. ಅಲ್ಲದೇ ಅವರ ಹೆಣ್ಣು ಮಕ್ಕಳು ‘ಲವ್ ಜಿಹಾದ್’ಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಅವರಿಗೆ ಧರ್ಮಶಿಕ್ಷಣ ಸಿಗುವುದು ಅತ್ಯಾವಶ್ಯಕವಾಗಿದೆ ಮತ್ತು ಇದನ್ನು ದೇವಾಲಯಗಳ ಮೂಲಕ ಉತ್ತಮವಾಗಿ ಮಾಡಬಹುದು.

ಕಲಂ ೩೭೦ ರದ್ದುಪಡಿಸಿದರೂ ಕೂಡ ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷಿತ ಇಲ್ಲ ! – ಶ್ರೀ. ರಾಹುಲ ಕೌಲ, ಅಧ್ಯಕ್ಷರು, ಯೂಥ್ ಫಾರ ಪನೂನ್ ಕಾಶ್ಮೀರ್, ಪುಣೆ

ಯಾವ ಕಾಶ್ಮೀರದಿಂದ ಭಾರತಕ್ಕೆ ಭರತಮುನಿಯನ್ನು ನೀಡಿತು, ಆ ಕಾಶ್ಮೀರ ಇಂದು ಹಿಂದೂ ಮುಕ್ತವಾಗಿದೆ. ಇದು ಕಾಶ್ಮೀರಿ ಹಿಂದೂಗಳ ನರಸಂಹಾರ ನಿರಾಕರಿಸಿರುವ ಪರಿಣಾಮವಾಗಿದೆ.- ರಾಹುಲ ಕೌಲ

ಕಾಶಿ ವಿಶ್ವೇಶ್ವರನ ಮುಕ್ತಿಯಾದಾಗ, ದೇಶವು ಅಖಂಡ ಹಿಂದೂ ರಾಷ್ಟ್ರ ಆಗುವುದು ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ ಮತ್ತು ವಕ್ತಾರರು, ಹಿಂದೂ ಫ್ರಂಟ್ ಫಾರ್ ಜಸ್ಟಿಸ್

ಕಾಶಿ ವಿಶ್ವೇಶ್ವರನ ಮುಕ್ತಿಯಾದಾಗ ದೇಶವು ಅಖಂಡ ಹಿಂದೂ ರಾಷ್ಟ್ರವಾಗುತ್ತದೆ. ಕಾಶಿ ವಿಶ್ವೇಶ್ವರನ ಮುಕ್ತಿಯ ದೊಡ್ಡ ಧ್ಯೇಯವಿಟ್ಟುಕೊಂಡು ನಾವು ಮಾರ್ಗಕ್ರಮಣ ಮಾಡುತ್ತಿದ್ದೇವೆ. ಇದಕ್ಕಾಗಿ ಎಲ್ಲ ಹಿಂದೂಗಳು ಸಂಘಟಿತರಾಗಿ ಈ ಸಂಪೂರ್ಣ ಪರಿಸರದ ಸಮೀಕ್ಷೆಗೆ ಆಗ್ರಹಿಸಬೇಕು ಎಂದು ನ್ಯಾಯವಾದಿ ವಿಷ್ಣು ಶಂಕರ ಜೈನ್ ಹೇಳಿದರು

ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕಾಗಬಹುದು ! – ಕೊಣ್ಣಿಯೂರ ಪಿ.ಪಿ.ಎಮ್. ನಾಯರ್’ ಆಚಾರ್ಯರು, ‘ಕೇರಳೀಯ ಕ್ಷೇತ್ರ ಪರಿಪಾಲನಾ ಸಮಿತಿ’ ಮುಂಬಯಿ

ಪ್ರತಿಯೊಬ್ಬ ವ್ಯಕ್ತಿಯು ಪ್ರಭು ಶ್ರೀರಾಮನಂತೆ ವರ್ತಿಸುವನೋ, ಆಗ ರಾಮರಾಜ್ಯ ಬರಲಿದೆ. ರಾಮರಾಜ್ಯಕ್ಕಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಆವಶ್ಯಕತೆಯಿದೆ. ಚುನಾವಣೆಯ ಸಮಯದಲ್ಲಿ ನಾಯಕರು ಮತಕ್ಕಾಗಿ ನಮ್ಮ ಬಳಿ ಕೈಯೊಡ್ಡುತ್ತಾರೆ; ಆದರೆ ಭಗವಂತನು ನಮ್ಮ ಮುಖ್ಯ ನಾಯಕನಾಗಿದ್ದಾನೆ.

‘ಹಿಂದು ರಾಷ್ಟ್ರದಿಂದ ಹಿಂದು ವಿಶ್ವದವರೆಗೆ’ ಈ ‘ಫೋಟೊ ಪಾಯಿಂಟ್’ನಲ್ಲಿ ಹಿಂದುತ್ವನಿಷ್ಠರು ತೆಗೆದ ಛಾಯಾಚಿತ್ರಗಳು !

ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಸ್ಥಳದಲ್ಲಿ ‘ಹಿಂದು ರಾಷ್ಟ್ರದಿಂದ ಹಿಂದು ವಿಶ್ವದವರೆಗೆ’ ಈ ಪರಿಕಲ್ಪನೆಯನ್ನು ಆಧರಿಸಿದ ‘ಫೋಟೊ ಪಾಯಿಂಟ್’ (ಛಾಯಾಗ್ರಹಣಕ್ಕಾಗಿ ವಿಶೇಷ ಕೊಠಡಿ)ಅನ್ನು ಏರ್ಪಡಿಸಲಾಗಿತ್ತು.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ದೇವಸ್ಥಾನದ ಧರ್ಮದರ್ಶಿಗಳ ಆಗ್ರಹ !

ಗೋವಾದಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಪೋರ್ಚುಗೀಸರು ಅನೇಕ ದೇವಸ್ಥಾನಗಳನ್ನು ನಾಶ ಮಾಡಿದರು. ವಿದೇಶಿ ಆಕ್ರಮಣಕಾರರಿಂದ ನಾಶವಾದ ಈ ಎಲ್ಲಾ ದೇವಾಲಯಗಳ ಜೀರ್ಣೋದ್ಧಾರ ಮಾಡಿ ಭಾರತೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಗೋವಾ ಸರಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು.

‘ಸೆಕ್ಯೂರಿಸಂ ‘ಹೆಸರಿನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹಿಂದೂ ವಿರೋಧಿ ಕಾರ್ಯ ಚಟುವಟಿಕೆ ! – ಮಹೇಶ ಡೆಗಲಾ, ಸಂಸ್ಥಾಪಕ ಅಧ್ಯಕ್ಷರು, ಹಿಂದೂ ಉಪಾಧ್ಯಾಯ ಸಮಿತಿ ಆಂಧ್ರಪ್ರದೇಶ

ರಾಜ ಕೃಷ್ಣದೇವರಾಯ ಇವರು ಯುದ್ಧ ಮಾಡದೇ ಇದ್ದಿದ್ದರೆ, ಸಂಪೂರ್ಣ ದಕ್ಷಿಣ ಭಾರತ ಬಾಬರನ ವಶವಾಗುತ್ತಿತ್ತು. ಪ್ರಸ್ತುತ ಮಾತ್ರ ಆಂಧ್ರಪ್ರದೇಶ ಮತ್ತು ತೆಲಂಗಾಣದ ವ್ಯವಸ್ಥೆ ಕಮ್ಯುನಿಸ್ಟರ ಹಿಡಿತಕ್ಕೊಳಗಾಗಿದೆ. ಎರಡು ರಾಜ್ಯಗಳ ಎಲ್ಲಾ ಶಿಕ್ಷಣ ವ್ಯವಸ್ಥೆಯಲ್ಲಿ ನಕ್ಸಲವಾದಿ ಮಾನಸಿಕತೆಯ ಜನರಿದ್ದಾರೆ.