‘ಸೆಕ್ಯೂರಿಸಂ ‘ಹೆಸರಿನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹಿಂದೂ ವಿರೋಧಿ ಕಾರ್ಯ ಚಟುವಟಿಕೆ ! – ಮಹೇಶ ಡೆಗಲಾ, ಸಂಸ್ಥಾಪಕ ಅಧ್ಯಕ್ಷರು, ಹಿಂದೂ ಉಪಾಧ್ಯಾಯ ಸಮಿತಿ ಆಂಧ್ರಪ್ರದೇಶ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಎರಡನೆಯ ದಿನ ‘ ಮಂದಿರ ಮುಕ್ತಿ ಅಭಿಯಾನ ‘ ಈ ಸತ್ರದಲ್ಲಿ ಗಣ್ಯರಿಂದಾದ ಭಾಷಣಗಳು

ಮಹೇಶ ಡೆಗಲಾ, ಸಂಸ್ಥಾಪಕ ಅಧ್ಯಕ್ಷರು, ಹಿಂದೂ ಉಪಾಧ್ಯಾಯ ಸಮಿತಿ ಆಂಧ್ರಪ್ರದೇಶ

ರಾಜ ಕೃಷ್ಣದೇವರಾಯ ಇವರು ಯುದ್ಧ ಮಾಡದೇ ಇದ್ದಿದ್ದರೆ, ಸಂಪೂರ್ಣ ದಕ್ಷಿಣ ಭಾರತ ಬಾಬರನ ವಶವಾಗುತ್ತಿತ್ತು. ಪ್ರಸ್ತುತ ಮಾತ್ರ ಆಂಧ್ರಪ್ರದೇಶ ಮತ್ತು ತೆಲಂಗಾಣದ ವ್ಯವಸ್ಥೆ ಕಮ್ಯುನಿಸ್ಟರ ಹಿಡಿತಕ್ಕೊಳಗಾಗಿದೆ. ಎರಡು ರಾಜ್ಯಗಳ ಎಲ್ಲಾ ಶಿಕ್ಷಣ ವ್ಯವಸ್ಥೆಯಲ್ಲಿ ನಕ್ಸಲವಾದಿ ಮಾನಸಿಕತೆಯ ಜನರಿದ್ದಾರೆ. ಪುಸ್ತಕದ ಮುದ್ರಣದ ಕೆಲಸದಲ್ಲಿಯೂ ಕಮ್ಯುನಿಸ್ಟ್ ವಿಚಾರಧಾರೆಯ ಜನರಿದ್ದಾರೆ. ಆಂಧ್ರಪ್ರದೇಶದಲ್ಲಿ ೬ ನೇಯ ತರಗತಿಯ ಪಠ್ಯಪುಸ್ತಕದಲ್ಲಿ ಭಾರತದ ನಕ್ಷೆಯಲ್ಲಿ ಜಮ್ಮು ಕಾಶ್ಮೀರವನ್ನೇ ತೋರಿಸಿಲ್ಲ. ಇಲ್ಲಿನ ಎಲ್ಲಾ ಶಿಕ್ಷಣ ವ್ಯವಸ್ಥೆಗೆ ಗೆದ್ದಲು ಹಿಡಿದಿದೆ. ಹಿಂದೂ ವಿರೋಧಿ ಶಕ್ತಿಗಳಿಂದ ಇಲ್ಲಿಯವರೆಗೆ ಅಫ್ಘಾನಿಸ್ತಾನದಿಂದ ಹಿಡಿದು ಭಾರತದ ವರೆಗೆ ೮ ಕೋಟಿ ಹಿಂದೂಗಳ ಹತ್ಯೆ ಮಾಡಲಾಗಿದೆ ಇದರ ಮಾಹಿತಿ ಮಾತ್ರ ಎಲ್ಲಿಯೂ ದೊರೆಯುವುದಿಲ್ಲ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ರಂಜಾನನ ಸಮಯದಲ್ಲಿ ಶಾಲೆ ಮತ್ತು ಸರಕಾರಿ ಕಾರ್ಯಾಲಯಗಳಿಗೆ ಒಂದು ತಿಂಗಳ ಕಾಲ ನಿಯಮಿತ ಪ್ರಾರ್ಥನೆಗಾಗಿ ಒಂದು ಗಂಟೆ ಬಿಡುವು ನೀಡಲಾಗುತ್ತದೆ; ಆದರೆ ಹಿಂದೂಗಳ ಹಬ್ಬಹರಿದಿನಗಳ ಸಮಯದಲ್ಲಿ ಹಿಂದೂ ಅಧಿಕಾರಿಗಳಿಗೆ ನೌಕರಿಯ ಸಮಯದಲ್ಲಿ ಬಿಡುವು ನೀಡಲಾಗುತ್ತಿಲ್ಲ. ‘ಹಿಂದೂಗಳಿಗೂ ಶಾಲೆ ಮತ್ತು ಸರಕಾರೀ ಕಚೇರಿಗಳಲ್ಲಿ ಪ್ರಾರ್ಥನೆಗಾಗಿ ಬಿಡುವು ನೀಡಬೇಕೆಂದು ಕಳೆದ ೩ ವರ್ಷಗಳಿಂದ ಹಿಂದೂ ಉಪಾಧ್ಯಾಯ ಸಮಿತಿಯಿಂದ ಸರಕಾರದ ಜೊತೆಗೆ ನಿರಂತರ ಪತ್ರ ವ್ಯವಹಾರ ನಡೆಸಲಾಗುತ್ತಿದೆ ; ಆದರೆ ಇಲ್ಲಿಯವರೆಗೆ ಸರಕಾರದಿಂದ ನಮಗೆ ಉತ್ತರ ಸಿಕ್ಕಿಲ್ಲ. ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯಗಳಲ್ಲಿ ‘ಉರ್ದು ಭಾಷೆಯು ಎರಡನೆಯ ಸ್ಥಾನಕ್ಕೆ ತಲುಪಿದೆ. ಇಲ್ಲಿ ಹಿಂದೂಗಳ ಹತ್ಯೆ ನಡೆದರು ಯಾರಿಗೂ ಏನು ಅನಿಸುವುದಿಲ್ಲ. ಸೆಕ್ಯೂರಿಸಂ ಹೆಸರಿನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹಿಂದೂ ವಿರೋಧಿ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಎರಡು ರಾಜ್ಯದಲ್ಲಿನ ಹಿಂದೂ ವಿರೋಧಿ ಕಾರ್ಯ ಚಟುವಟಿಕೆಗಳನ್ನು ನೋಡುತ್ತಿದ್ದರೆ ಹಿಂದೂಗಳು ತಕ್ಷಣ ಜಾಗೃತರಾಗುವ ಅವಶ್ಯಕವಾಗಿದೆ. ಹಿಂದೂ ಉಪಾಧ್ಯಾಯ ಸಮಿತಿಯ ೧೦ ಸಾವಿರ ಕಾರ್ಯಕರ್ತರು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಧರ್ಮ ಕಾರ್ಯಕ್ಕಾಗಿ ಕಾರ್ಯನಿರತರಾಗಿದ್ದಾರೆ.

(ಸೌಜನ್ಯ – Hindu Janajagruti Samiti)