ಕಾಶಿ ವಿಶ್ವೇಶ್ವರನ ಮುಕ್ತಿಯಾದಾಗ, ದೇಶವು ಅಖಂಡ ಹಿಂದೂ ರಾಷ್ಟ್ರ ಆಗುವುದು ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ ಮತ್ತು ವಕ್ತಾರರು, ಹಿಂದೂ ಫ್ರಂಟ್ ಫಾರ್ ಜಸ್ಟಿಸ್

ನ್ಯಾಯವಾದಿ ವಿಷ್ಣು ಶಂಕರ ಜೈನ್

ಹಿಂದೂಗಳಿಗೆ ಪೂಜನೀಯವಾಗಿರುವ ೧೨ ಜ್ಯೋತಿರ್ಲಿಂಗಗಳಲ್ಲಿ ಕಾಶಿ ವಿಶ್ವೇಶ್ವರ ಲಿಂಗವು ಸಹ ಒಂದು ಸ್ವಯಂಭೂ ಜ್ಯೋತಿರ್ಲಿಂಗವಾಗಿದೆ. ಈ ಖಟ್ಲೆಯಲ್ಲಿ ನಮ್ಮ ವಿಜಯ ನಿಶ್ಚಿತವಿದೆ. ಕಾಶಿ ವಿಶ್ವೇಶ್ವರರು ತನ್ನ ಮೂಲಸ್ಥಾನದಲ್ಲಿ ವಿರಾಜಮಾನರಾದಾಗ ಎಲ್ಲ ಹಿಂದೂಗಳಿಗೆ ಆಧ್ಯಾತ್ಮಿಕ ಉನ್ನತಿಯ ಒಂದು ದೊಡ್ಡ ಸ್ಥಳವು ಪ್ರಾಪ್ತವಾಗುವುದು. ದೇವಸ್ಥಾನದ ಪರಿಸರದಲ್ಲಿ ಕಂಡು ಬಂದ ಶಿವಲಿಂಗದ ವೈಜ್ಞಾನಿಕ ಪರಿಶೀಲನೆಗೆ ೧೨ ಮೇ ೨೦೨೩ ರಂದು ಪ್ರಯಾಗರಾಜ (ಅಲಾಹಾಬಾದ) ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ಇದನ್ನು ವಿರೋಧಿಸಿ ಅಂಜುಮನ್ ಇಂತೆಜಾಮಿಯಾದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಗಿದೆ. ಸರ್ವೊಚ್ಚ ನ್ಯಾಯಾಲಯವು ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿದೆ. ಜುಲೈ ೬ ರಂದು ವಾರಾಣಸಿ ಜಿಲ್ಲೆಯ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆಯಲಿದೆ. ಪುರಾತತ್ವ ಇಲಾಖೆಯಿಂದ ಸಮೀಕ್ಷೆಯಾದಾಗ ‘ಈ ಮಸೀದಿಯನ್ನು ಔರಂಗಜೇಬನು ಹೇಗೆ ಕಟ್ಟಿದನು ?’, ಎಂಬ ಸತ್ಯವು ಹೊರಬರಲಿದೆ. ‘ಈ ಸತ್ಯವು ಹೊರಬರಬಾರದು’ ಎಂದು ಅಂಜುಮನ್ ಇಂತೆಜಾಮಿಯಾ ಇದನ್ನು ವಿರೋಧಿಸುತ್ತಿದೆ. ನಾವು ‘ಕಾರ್ಬನ್ ಡೆಟಿಂಗ್’ ಪರೀಕ್ಷಣೆಗೆ ಬೇಡಿಕೆ ಇಡುತ್ತಿದ್ದೇವೆ ಎಂಬ ವದಂತಿಯನ್ನು ಹಬ್ಬಿಸಲಾಯಿತು. ಶಿವಲಿಂಗವನ್ನು ಯಾವುದೇ ರಾಸಾಯನಿಕ ಪರಿಶೀಲನೆಗೆ ಒಳಪಡಿಸಲಾಗುವುದಿಲ್ಲ; ಆದರೆ ವೈಜ್ಞಾನಿಕವಾಗಿ ಪರಿಶೀಲನೆ ಮಾಡಲಾಗುವುದು. ಇದರಲ್ಲಿ ಶಿವಲಿಂಗಕ್ಕೆ ಯಾವುದೇ ಹಾನಿಯಾಗಲಾರದು. ಈ ಪರಿಶೀಲನೆಯಿಂದ ‘ಈ ಶಿವಲಿಂಗವು ಸ್ವಯಂಭೂ ಆಗಿದೆಯೇ’, ಹಾಗೆಯೇ ‘ಎಷ್ಟು ಹಳೆಯದಾಗಿದೆ’, ಎಂದು ತಿಳಿಯಬಹುದು. ಕಾಶಿ ವಿಶ್ವೇಶ್ವರನ ಮುಕ್ತಿಯಾದಾಗ ದೇಶವು ಅಖಂಡ ಹಿಂದೂ ರಾಷ್ಟ್ರವಾಗುತ್ತದೆ. ಕಾಶಿ ವಿಶ್ವೇಶ್ವರನ ಮುಕ್ತಿಯ ದೊಡ್ಡ ಧ್ಯೇಯವಿಟ್ಟುಕೊಂಡು ನಾವು ಮಾರ್ಗಕ್ರಮಣ ಮಾಡುತ್ತಿದ್ದೇವೆ. ಇದಕ್ಕಾಗಿ ಎಲ್ಲ ಹಿಂದೂಗಳು ಸಂಘಟಿತರಾಗಿ ಈ ಸಂಪೂರ್ಣ ಪರಿಸರದ ಸಮೀಕ್ಷೆಗೆ ಆಗ್ರಹಿಸಬೇಕು.

(ಸೌಜನ್ಯ – Hindu Janajagruti Samiti)

ಅವರು ಮುಂದೆ ಮಾತನಾಡುತ್ತಾ ಹೀಗೆಂದರು,

೧. ಮಥುರಾದ ಶ್ರೀಕೃಷ್ಣಜನ್ಮಸ್ಥಳವನ್ನು ಮುಕ್ತ ಮಾಡಲು ಕಳೆದ ೧೦ ವರ್ಷಗಳಿಂದ ನಾವು ಜಿಲ್ಲಾ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಪ್ರಯತ್ನಿಸುತ್ತಿದ್ದೇವೆ. ಪ್ರಯಾಗರಾಜ ನ್ಯಾಯಾಲಯವು ಈ ಅರ್ಜಿಯನ್ನು ದಾಖಲಿಸಿಕೊಂಡಿದ್ದು ಶ್ರೀಕೃಷ್ಣಜನ್ಮಭೂಮಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ಮಾಹಿತಿಯನ್ನು ನ್ಯಾಯಾಲಯವು ಕೇಳಿದೆ. ಇದರಿಂದ ವಿವಿಧ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಹೋರಾಟಕ್ಕಾಗಿ ನಮ್ಮ ಸಮಯ ವ್ಯರ್ಥವಾಗಬೇಕೆಂಬ ಅವರ ಸಂಚು ವಿಫಲವಾಗಿದೆ.

೨. ಮಾರುತಿರಾಯನ ಜನ್ಮಸ್ಥಳ ಕಿಷ್ಕಿಂಧೆಯಲ್ಲಿರುವ ಮಾರುತಿರಾಯನ ಸ್ವಯಂಭೂ ಮೂರ್ತಿ ಇರುವ ದೇವಸ್ಥಾನವನ್ನು ಸಹ ಇದೇ ರೀತಿ ಕರ್ನಾಟಕ ಸರಕಾರವು ಸ್ವಾಧೀನಪಡಿಸಿಕೊಂಡಿದೆ. ಈ ದೇವಸ್ಥಾನವನ್ನು ಸರಕಾರೀಕರಣದಿಂದ ಮುಕ್ತಗೊಳಿಸಲು ನಾವು ಕಳೆದ ೫ ವರ್ಷಗಳಿಂದ ಕಾನೂನುರೀತ್ಯಾ ಹೋರಾಟವನ್ನು ನಡೆಸುತ್ತಿದ್ದೇವೆ

೩. ಎಲ್ಲಿಯ ತನಕ ನನ್ನ ತಂದೆ ಪೂ. (ನ್ಯಾಯವಾದಿ) ಹರಿ ಶಂಕರ ಜೈನ್ ಇವರು ಮತ್ತು ನಾನು ಬದುಕಿರುತ್ತೇವೆಯೋ ಅಲ್ಲಿಯ ತನಕ ಈ ಎಲ್ಲ ದೇವಸ್ಥಾನಗಳ ಮುಕ್ತಿಗಾಗಿ ನಾವು ಹೋರಾಡುತ್ತಲೇ ಇರುವೆವು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಬಲದಿಂದಲೇ ಸಂಪೂರ್ಣ ದೇಶದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ! – ನ್ಯಾಯವಾದಿ ವಿಷ್ಣು ಶಂಕರ ಜೈನ್

೨೦೧೪ ರಲ್ಲಿ ನಾನು ಮೊದಲ ಬಾರಿಗೆ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಪರ್ಕಕ್ಕೆ ಬಂದೆ. ಅನಂತರ ದೇವಸ್ಥಾನಗಳ ಮುಕ್ತಿಯ ಈ ಹೋರಾಟಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಂದಾಗಿ ಆಧ್ಯಾತ್ಮಿಕ ಅಧಿಷ್ಠಾನ ಲಭಿಸಿತು.