ಭಾರತ ರಾಜಕೀಯ ದೃಷ್ಟಿಯಿಂದ ಸ್ವತಂತ್ರವಾಗಿದೆ, ಧಾರ್ಮಿಕ ದೃಷ್ಟಿಯಿಂದಲ್ಲ ! – ಡಾ. ಎನ್. ರಮೇಶ ಹಾಸನ, ಸಹಕಾರ ಸಂಜೀವನಿ ಹಾಸ್ಪಿಟಲ್, ಹಾಸನ, ಕರ್ನಾಟಕ

ಡಾ. ಎನ್. ರಮೇಶ ಹಾಸನ, ಸಹಕಾರ ಸಂಜೀವನಿ ಹಾಸ್ಪಿಟಲ್, ಹಾಸನ, ಕರ್ನಾಟಕ

ಕೇವಲ ರಾಜಕೀಯ ದೃಷ್ಟಿಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ, ಧಾರ್ಮಿಕ ದೃಷ್ಟಿಯಿಂದ ನಾವು ಇಂದಿಗೂ ಸ್ವತಂತ್ರರಾಗಿಲ್ಲ. ಇಂದಿಗೂ ದೇಶದಲ್ಲಿ ಹಿಂದೂಗಳ ತಲೆಕೆಡಿಸಿ ಅವರ ದಾರಿತಪ್ಪಿಸಲಾಗುತ್ತಿದೆ. ಇಸ್ಲಾಮಿಕ್ ನಿಯಮಗಳನ್ನು ಗೌರವಿಸಲಾಗುತ್ತಿದೆ. ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಬೇಲೂರಿನ ಶ್ರೀ ಚೆನ್ನಕೇಶವ ದೇವಸ್ಥಾನದ ರಥೋತ್ಸವದಲ್ಲಿ ಹಿಂದೆಲ್ಲ ಕುರಾನ್ ಓದಲಾಗುತ್ತಿತ್ತು. ಹಿಂದೂ ದೇವಸ್ಥಾನಗಳಲ್ಲಿನ ಈ ‘ಸಾಫ್ಟ್ ಟೆರರಿಝಮ್’ನ ವಿರುದ್ಧ ನಾವು ಆಂದೋಲನನ ನಡೆಸಿದೆವು ಮತ್ತು ಹಿಂದೂ ದೇವಸ್ಥಾನದ ಈ ಕೆಟ್ಟ ರೂಢಿಯನ್ನು ನಿಲ್ಲಿಸಿದೆವು. (ಹೊಯ್ಸಳ) ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ೩ ಸಾವಿರ ದೇವಸ್ಥಾನಗಳನ್ನು ಕಟ್ಟಿತು. ಹಿಂದೂ ಧರ್ಮದ ರಕ್ಷಣೆಗಾಗಿ ಹಿಂದೂ ಸಂಘಟನೆಗಳು ಸಂಘಟಿತರಾಗಬೇಕು. ಹಿಂದೂಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಹಿಂದೂ ಧರ್ಮದ ಪ್ರಸಾರ ಮಾಡಬೇಕು.

(ಸೌಜನ್ಯ – Hindu Janajagruti Samiti)