ಪ್ರತಿಯೊಂದು ದೇವಸ್ಥಾನಗಳು ಸರಕಾರೀಕರಣದಿಂದ ಮುಕ್ತಗೊಳ್ಳುವವರೆಗೆ ಹೋರಾಟವನ್ನು ಮುಂದುವರಿಸೋಣ – ಸುನೀಲ ಘನವಟ, ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ `ದೇವಸ್ಥಾನಗಳ ಸಂಘಟನೆ : ಪ್ರಯತ್ನ ಮತ್ತು ಯಶಸ್ಸು’ ಈ ವಿಷಯದ ಕುರಿತು ಸಂವಾದ

ಸುನೀಲ ಘನವಟ, ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ

ರಾಮನಾಥ ಮಂದಿರ – ತುಳಜಾಪುರ ದೇವಸ್ಥಾನದ ವಸ್ತ್ರಸಂಹಿತೆ ಪ್ರಕರಣದ ಬಳಿಕ ಮಹಾರಾಷ್ಟ್ರದಲ್ಲಿ 131 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ(ಡ್ರೆಸ್ ಕೋಡ್) ಜಾರಿಗೊಳಿಸಲಾಗಿದೆ ಮತ್ತು ಈಗ ಈ ವಸ್ತ್ರಸಂಹಿತೆ ಎಲ್ಲ ದೇವಸ್ಥಾನಗಳಲ್ಲಿ ಜಾರಿಗೊಳಿಸಬೇಕಾಗಿದೆ. ಅಷ್ಟೇ ಅಲ್ಲ, ದೇಶದ ಪ್ರತಿಯೊಂದು ದೇವಸ್ಥಾನವನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕಾಗಿದೆ. ದೇವಸ್ಥಾನಗಳ ಮಹಾಸಂಘವು ರಾಜ್ಯದಲ್ಲಿರುವ ದೇವಸ್ಥಾನಗಳ ಒಂದು ಮುಖ್ಯ ಸಂಘಟನೆಯಾಗಿದೆ. ಇದರಿಂದ ಸರಕಾರ ದೇವಸ್ಥಾನಗಳ ಪದ್ಧತಿ ಮತ್ತು ಪರಂಪರೆಯ ಸಂದರ್ಭದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವ ಮೊದಲು ಮಹಾರಾಷ್ಟ್ರ ದೇವಸ್ಥಾನ ಮಹಾಸಂಘದ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ದೇವಸ್ಥಾನಗಳ ಸಂಸ್ಕೃತಿ ಮುಂದುವರಿಸಲು ಕೇವಲ ಮಹಾರಾಷ್ಟ್ರದಲ್ಲಿರುವ ದೇವಾಲಯಗಳಷ್ಟೇ ಅಲ್ಲ, ಸಂಪೂರ್ಣ ದೇಶಗಳಲ್ಲಿನ ದೇವಸ್ಥಾನಗಳ ಮಹಾಸಂಘವನ್ನು ಸ್ಥಾಪಿಸಿ ಎಲ್ಲ ನಾಲ್ಕೂವರೆಲಕ್ಷ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸೋಣ. ಈಗ ಕೇವಲ ಭಾರತದಲ್ಲಿಯಷ್ಟೇ ಅಲ್ಲ , ಸಂಪೂರ್ಣ ವಿಶ್ವದ ಹಿಂದೂ ದೇವಸ್ಥಾನಗಳ ಪರಂಪರೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ವಿಚಾರ ಮಾಡಬೇಕಾಗಿದೆಯೆಂದು ಮಹಾರಾಷ್ಟ್ರ ದೇವಸ್ಥಾನ ಮಹಾಸಂಘದ ಸಮನ್ವಯಕರಾಗಿರುವ ಸುನೀಲ ಘನವಟ ಇವರು ಪ್ರತಿಪಾದಿಸಿದರು.

ಗೋವಾದಲ್ಲಿ `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇಯ ದಿನದಂದು `ದೇವಸ್ಥಾನಗಳ ಸಂಘಟನೆ: ಪ್ರಯತ್ನ ಮತ್ತು ಯಶಸ್ಸು’ ಈ ವಿಷಯದ ಕುರಿತು ಸಂವಾದವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಳಗಾವ ಜಿಲ್ಲೆಯ ಸಮನ್ವಯಕರಾದ ಶ್ರೀ. ಪ್ರಶಾಂತ ಜುವೇಕರ ಇವರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ದೆಹಲಿಯ ವಕ್ತಾರರಾಗಿರುವ ಕು. ಕೃತಿಕಾ ಖತ್ರಿಯವರು ಸೂತ್ರ ಸಂಚಾಲನೆ ಮಾಡಿದರು.

ಶ್ರೀ. ಘನವಟ ಇವರು ಮಾತನ್ನು ಮುಂದುವರೆಸುತ್ತಾ,

1. 1995 ರಲ್ಲಿ ವಕ್ಫ ಬೋರ್ಡ ಸ್ಥಾಪನೆಗೊಂಡಿತು. ಅದರ ನೌಕರರನ್ನು `ಪಬ್ಲಿಕ್ ಸರ್ವಂಟ್’ನ ದರ್ಜೆ ನೀಡಲಾಯಿತು. ಅದೇ ರೀತಿ ಸರಕಾರ ಹಿಂದೂಗಳ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳಿಗಾಗಿಯೂ `ಹಿಂದೂ ಬೋರ್ಡ’ ಸ್ಥಾಪಿಸಬೇಕು ಮತ್ತು ಅವರಿಗೂ ವಿಶೇಷ ಸೌಲಭ್ಯಗಳನ್ನು ನೀಡಬೇಕು, ಆಗಲೇ ಸಂವಿಧಾನದಲ್ಲಿ ಹೇಳಿರುವಂತೆ ಸಮಾನತೆ ಈ ತತ್ವಗಳ ಪಾಲನೆಯಾಗುವುದು.

2. ದೇವಸ್ಥಾನಗಳ ಹಣವನ್ನು ದೇವಸ್ಥಾನಗಳಿಗಾಗಿ ಅಥವಾ ಹಿಂದೂ ಧರ್ಮಕ್ಕಾಗಿಯೇ ಉಪಯೋಗಿಸಬೇಕು. ಭಾರತದಲ್ಲಿರುವ ಜಾತ್ಯತೀತ ಸರಕಾರಗಳು ಕೇವಲ ಹಿಂದೂಗಳ ದೇವಸ್ಥಾನಗಳನ್ನು ಕಬಳಿಸಿ ಅಲ್ಲಿರುವ ಹಣವನ್ನು ತೆಗೆದುಕೊಳ್ಳುವ ಅಥವಾ ದೇವಸ್ಥಾನಗಳಲ್ಲಿರುವ ಪ್ರಾಚೀನ ಪರಂಪರೆಯನ್ನು ಬದಲಾಯಿಸುವ ಪ್ರಯತ್ನವನ್ನು ಮಾಡುತ್ತಾರೆ; ಆದರೆ ಅವರಿಗೆ ಮಸೀದಿ ಅಥವಾ ಚರ್ಚಗಳನ್ನು ಸರಕಾರದ ನಿಯಂತ್ರಣಕ್ಕೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಎಲ್ಲರೂ ಒಗ್ಗಟ್ಟಿನಿಂದ ನಮ್ಮ ಎಲ್ಲ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕಾಗಿದೆ.

ಮಂದಿರ ಮಹಾಸಂಘದ ಪರಿಣಾಮಕಾರಿ ಕಾರ್ಯ

ಜಳಗಾಂವನಲ್ಲಿ ಫೆಬ್ರುವರಿ 5, 2023 ರಂದು `ಮಹಾರಾಷ್ಟ್ರ ಮಂದಿರ ಮಹಾಸಂಘ’ವನ್ನು ಸ್ಥಾಪಿಸಲಾಯಿತು. ತದನಂತರ ಮಹಾಸಂಘದ ಕಾರ್ಯವು ಹಂತ ಹಂತವಾಗಿ ಹೆಚ್ಚಳವಾಗುತ್ತಿದ್ದು, ಕೇವಲ 4 ತಿಂಗಳುಗಳಲ್ಲಿ ಅದು ಸಂಪೂರ್ಣ ರಾಜ್ಯವನ್ನು ತಲುಪಿದೆ. ಇತ್ತೀಚೆಗೆ ಮಹಾಸಂಘದ `ಆನ್ ಲೈನ್’ ಸಭೆ ನಡೆಯಿತು. ಹಾಗೆಯೇ ಪ್ರತಿ 2 ತಿಂಗಳಲ್ಲಿ ಒಮ್ಮೆ ಮಹಾಸಂಘದ ಪ್ರತ್ಯಕ್ಷ ಸಭೆಯನ್ನು ಏರ್ಪಡಿಸಲಿದೆ. ಹಾಗೆಯೇ ವಾರ್ಷಿಕವಾಗಿ 2 ದಿನಗಳ ರಾಜ್ಯಮಟ್ಟದ ಅಧಿವೇಶನವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶ್ರೀ. ಘನವಟ ಇವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.