ದೇವಾಲಯಗಳು ಧರ್ಮಶಿಕ್ಷಣ ಕೇಂದ್ರಗಳಾಗಬೇಕು ! – ಸದ್ಗುರು ನೀಲೇಶ ಸಿಂಗಬಾಳ, ಧರ್ಮಪ್ರಚಾರಕ ಸಂತ, ಹಿಂದೂ ಜನಜಾಗೃತಿ ಸಮಿತಿ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ದೇವಾಲಯ ನಿರ್ವಹಣೆ’ ಕುರಿತು ವಿಚಾರ ಸಂಕಿರಣ

ರಾಮನಾಥ ದೇವಸ್ಥಾನ – ಇಂದು ಹಿಂದೂಗಳಿಗೆ ಧರ್ಮಶಿಕ್ಷಣದ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಗೊಳ್ಳುತ್ತಿದ್ದಾರೆ. ಅಲ್ಲದೇ ಅವರ ಹೆಣ್ಣು ಮಕ್ಕಳು ‘ಲವ್ ಜಿಹಾದ್’ಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಅವರಿಗೆ ಧರ್ಮಶಿಕ್ಷಣ ಸಿಗುವುದು ಅತ್ಯಾವಶ್ಯಕವಾಗಿದೆ ಮತ್ತು ಇದನ್ನು ದೇವಾಲಯಗಳ ಮೂಲಕ ಉತ್ತಮವಾಗಿ ಮಾಡಬಹುದು. ಆದ್ದರಿಂದ, ದೇವಸ್ಥಾನಗಳು ಹಿಂದೂಗಳ ಧರ್ಮಶಿಕ್ಷಣದ ಕೇಂದ್ರಗಳಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಇವರು ಪ್ರತಿಪಾದಿಸಿದರು.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇ ದಿನ (17.6.2023 ರಂದು) ಎರಡನೇ ಅಧಿವೇಶನದಲ್ಲಿ, ‘ದೇವಾಲಯಗಳ ನಿರ್ವಹಣೆ’ ಈ ವಿಷಯದ ಕುರಿತು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಸದ್ಗುರು ನೀಲೇಶ ಸಿಂಗಬಾಳ ಇವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಜೈಪುರ (ರಾಜಸ್ಥಾನ)ದ ‘ಜ್ಞಾನಂ ಫೌಂಡೇಶನ್’ನ ಸಂಸ್ಥಾಪಕ ಮತ್ತು ಅಧ್ಯಕ್ಷ ಮಹಂತ ದೀಪಕ ಗೋಸ್ವಾಮಿ, ನಗರದ ಶ್ರೀ ಜಗದಂಬಾ ತುಳಜಾಭವಾನಿದೇವಿ ದೇವಸ್ಥಾನದ ಮುಖ್ಯ ನ್ಯಾಯವಾದಿ ಅಭಿಷೇಕ ಭಗತ, ರಾಯಪುರ (ಛತ್ತೀಸ್‌ಗಢ)ದ ‘ಮಿಷನ್ ಸನಾತನ’ ಸಂಸ್ಥಾಪಕ ಮದನಮೋಹನ ಉಪಾಧ್ಯಾಯ ಇವರು ಭಾಗವಹಿಸಿದ್ದರು. ಈ ಸೆಶನ ಅನ್ನು ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ಸಮನ್ವಯಕ ಶ್ರೀ. ಆನಂದ ಜಖೋಟಿಯಾ ಇವರು ಸೂತ್ರಸಂಚಾಲನೆ ಮಾಡಿದರು.

ಸದ್ಗುರು ನೀಲೇಶ ಸಿಂಗಬಾಳ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “’ದೇವಾಲಯಗಳಲ್ಲಿ ದೇವರು ನೆಲೆಸಿರುವುದರಿಂದ ಹೆಚ್ಚು ಸಾತ್ವಿಕತೆ ಇರುತ್ತದೆ. ಅಂತಹ ಸ್ಥಳದಲ್ಲಿ, ಪ್ರತಿಯೊಂದು ಕೃತಿಯು ದೇವರಿಗೆ ಅಪೇಕ್ಷಿತ ರೀತಿಯಲ್ಲಿ ಆದರ್ಶ ನಿರ್ವಹಣೆಯಾಗುವುದು ಅಪೇಕ್ಷಿತವಾಗಿರುತ್ತದೆ. ದೇವಸ್ಥಾನದ ಮೂಲಕ ದೇವರ ಸೇವೆ, ಧಾರ್ಮಿಕ ಹಿತಾಸಕ್ತಿ, ಭಕ್ತನ ಹಿತವನ್ನು ಸಾಧಿಸಬೇಕು. ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಅನ್ನಛತ್ರ ಮತ್ತು ಧರ್ಮಶಾಲೆಗಳು ಇರಬೇಕು. ಅರ್ಚಕರು ಮತ್ತು ಟ್ರಸ್ಟಿಗಳು ದೇವಾಲಯಗಳ ಪ್ರಮುಖರಾಗಿರದೇ ದೇವರು ಮತ್ತು ಭಕ್ತರ ನಡುವಿನ ಕೊಂಡಿಯಾಗಿರುತ್ತಾರೆ. ಆದ್ದರಿಂದ ಅವರಲ್ಲಿನ ಸೇವಕ ಭಾವವನ್ನು ಹೊಂದಿರಬೇಕು. ದೇವಾಲಯಗಳ ನಿರ್ವಹಣೆಯನ್ನು ನೋಡಲು ಬುದ್ಧಿಯು ಸಾತ್ವಿಕವಾಗಿರಬೇಕು. ಅದಕ್ಕಾಗಿ ದೇವಸ್ಥಾನಗಳ ವ್ಯವಸ್ಥಾಪಕರು ದೇವರ ಭಕ್ತರಾಗಬೇಕು.” ಎಂದು ಹೇಳಿದರು.

ದೇವಸ್ಥಾನದಲ್ಲಿ ವಾದ ಅಲ್ಲ ಬದಲಾಗಿ ಸಂವಾದ ಆಗಬೇಕು ! – ನ್ಯಾಯವಾದಿ ಅಭಿಷೇಕ ಭಗತ, ಮುಖ್ಯಸ್ಥರು, ಶ್ರೀ ಜಗದಾಂಬಾ ತುಳಜಾಭವಾನಿದೇವಿ ದೇವಸ್ಥಾನ, ನಗರ

ನ್ಯಾಯವಾದಿ ಅಭಿಷೇಕ ಭಗತ

ದೇವಸ್ಥಾನಗಳ ವ್ಯವಸ್ಥೆ, ಪರಿಸರ, ವಾತಾವರಣ ಆಹ್ಲಾದಕರವಾಗಿರಬೇಕು. ಆದ್ದರಿಂದ ಅಲ್ಲಿಂದಲೇ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಿ ಭಕ್ತರಿಗೆಲಾಭವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಪ್ರಯತ್ನಿಸುತ್ತಿದ್ದೇವೆ. ದೇವಸ್ಥಾನಗಳಲ್ಲಿ ಸಂವಾದ ನಡೆಯಬೇಕು, ವಿವಾದಗಳಲ್ಲ.

ಟ್ರಸ್ಟಿಗಳು, ಅರ್ಚಕರು ಮತ್ತು ಭಕ್ತರಿಗೆ ಪ್ರಶಿಕ್ಷಣ ನೀಡಬೇಕು ! – ಮದನಮೋಹನ ಉಪಾಧ್ಯಾಯ, ಸಂಸ್ಥಾಪಕ, ಮಿಷನ್ ಸನಾತನ, ರಾಯಪುರ, ಛತ್ತೀಸ್‌ಗಢ

ಮದನಮೋಹನ ಉಪಾಧ್ಯಾಯ

ಅರ್ಚಕರಿಗೆ ಸೂಕ್ತ ಗೌರವಧನ ಸಿಗಬೇಕು. ಅಲ್ಲದೆ ಅವರಿಗೆ ಸೂಕ್ತ ಪ್ರಶಿಕ್ಷಣ ನೀಡುವುದು ಅವಶ್ಯಕವಾಗಿದೆ. ಆಗ ಮಾತ್ರ ಅವರಿಂದ ದೇವತೆಗಳ ಸೇವೆ ಉತ್ತಮರೀತಿಯಲ್ಲಿ ಆಗಬಹುದು. ಅರ್ಚಕರು ಒಳ್ಳೆಯವರಾಗಿದ್ದರೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಆದ್ದರಿಂದ ಟ್ರಸ್ಟಿಗಳು, ಅರ್ಚಕರು ಮತ್ತು ಭಕ್ತರಿಗೆ ಪ್ರಶಿಕ್ಷಣ ನೀಡಬೇಕಾಗಿದೆ.

ದೇವಾಲಯಗಳಲ್ಲಿ ಆಯುಧಗಳು ಮತ್ತು ಗ್ರಂಥಗಳ ತರಬೇತಿಯ ಸೌಲಭ್ಯಗಳು ಇರಬೇಕು ! – ಮಹಂತ ದೀಪಕ ಗೋಸ್ವಾಮಿ, ಸಂಸ್ಥಾಪಕ ಮತ್ತು ಅಧ್ಯಕ್ಷ, ಜ್ಞಾನಂ ಫೌಂಡೇಶನ್, ಜೈಪುರ, ರಾಜಸ್ಥಾನ

ಮಹಂತ ದೀಪಕ ಗೋಸ್ವಾಮಿ

ಟ್ರಸ್ಟಿಗಳು ಮತ್ತು ಅರ್ಚಕರು ಎಷ್ಟು ಸ್ವಾರ್ಥವನ್ನು ತ್ಯಾಗ ಮಾಡುತ್ತಾರೆಯೋ, ಅಷ್ಟು ದೇವಸ್ಥಾನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ನಾವು ಭಕ್ತರಿಗೆ ಉತ್ತಮ ಗುಣಮಟ್ಟದ ಪ್ರಸಾದವನ್ನು ವಿತರಿಸಲು ಪ್ರಾರಂಭಿಸಿದ್ದೇವೆ. ಬಳಿಕ ಭಕ್ತರ ಸಂಖ್ಯೆ ಹೆಚ್ಚಾಯಿತು. ಇದರೊಂದಿಗೆ ‘ವಿಐಪಿ’ ಪಾಸ್ ನೀಡುವ ಸಂಸ್ಕೃತಿ ನಿಲ್ಲಬೇಕು. ದೇವಾಲಯಗಳಲ್ಲಿ ಶಸ್ತ್ರ ಮತ್ತು ಶಸ್ತ್ರಾಸ್ತ್ರ ಕಲಿಸಲು ಸೌಲಭ್ಯಗಳು ಇರಬೇಕು. ಇದರಿಂದ ದೇಶದ ರಕ್ಷಣೆಯಾಗುತ್ತದೆ. ಧರ್ಮ ಬಲಗೊಂಡರೆ ಮಾತ್ರ ಹಿಂದೂ ರಾಷ್ಟ್ರ ಬರುತ್ತದೆ, ಅದಕ್ಕಾಗಿ ಎಲ್ಲ ದೇವಸ್ಥಾನಗಳಿಂದ ಧರ್ಮಶಿಕ್ಷಣ ನೀಡಬೇಕು ಎಂದು ಹೇಳಿದರು.