ಪ್ರತಿಯೊಬ್ಬ ವ್ಯಕ್ತಿಯು ಪ್ರಭು ಶ್ರೀರಾಮನಂತೆ ವರ್ತಿಸುವನೋ, ಆಗ ರಾಮರಾಜ್ಯ ಬರಲಿದೆ. ರಾಮರಾಜ್ಯಕ್ಕಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಆವಶ್ಯಕತೆಯಿದೆ. ಚುನಾವಣೆಯ ಸಮಯದಲ್ಲಿ ನಾಯಕರು ಮತಕ್ಕಾಗಿ ನಮ್ಮ ಬಳಿ ಕೈಯೊಡ್ಡುತ್ತಾರೆ; ಆದರೆ ಭಗವಂತನು ನಮ್ಮ ಮುಖ್ಯ ನಾಯಕನಾಗಿದ್ದಾನೆ. ಆ ಮುಖ್ಯ ನಾಯಕನೊಂದಿಗೆ ಅನುಸಂಧಾನ ಇಟ್ಟುಕೊಳ್ಳಬೇಕು. ನಮಗೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಿಯೇ ಹಿಂದೂ ರಾಷ್ಟ್ರ ಸ್ಥಾಪಿಸ ಬೇಕಿದೆ. ಭಾರತದಲ್ಲಿ ಸಮಾನ ನಾಗರಿಕ ಕಾನೂನು, ಹಾಗೆಯೇ ಮತಾಂತರವನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ರಚಿಸಬೇಕು. ಕೃಷಿ ಮತ್ತು ಋಷಿಗಳ ರಕ್ಷಣೆ ಮಾಡಬೇಕು ಎಂದು ಹೇಳಿದರು.
(ಸೌಜನ್ಯ – Hindu Janajagruti Samiti)