ರಾಷ್ಟ್ರನಿಷ್ಠ ಮತ್ತು ಹಿಂದುತ್ವದ ಪಕ್ಷವನ್ನು ಮಂಡಿಸುತ್ತಿದ್ದ ಪತ್ರಕರ್ತ ರೋಹಿತ್ ಸರ್ದಾನ ನಿಧನ
ಖ್ಯಾತ ಪತ್ರಕರ್ತ ಮತ್ತು ನಿರೂಪಕ ರೋಹಿತ್ ಸರ್ದಾನ ನೋಯ್ಡಾದ ಮೆಟ್ರೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೪೨ ವರ್ಷವಾಗಿತ್ತು. ಅವರು ಕೊರೋನಾದ ಸೋಂಕಿಗೆ ಒಳಗಾಗಿದ್ದರು; ಆದರೆ ನಂತರ ಅವರ ವರದಿಯು ನಕಾರಾತ್ಮಕ ಬಂದಿತ್ತು. ನಂತರ ಅವರಿಗೆ ೨೯ ಎಪ್ರಿಲ್ ರಾತ್ರಿ ಉಸಿರಾಟದ ತೊಂದರೆಯಾಗತೊಡಗಿದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.