ಸರ್ವೋಚ್ಚ ನ್ಯಾಯಾಲಯದ ಆದೇಶ !
ನವ ದೆಹಲಿ : ಕರ್ನಾಟಕದ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಈಗ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಇವರ ಅಧ್ಯಕ್ಷತೆಯ ಸಮಿತಿಯು ನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ. ನ್ಯಾಯಾಲಯವು ಈ ಬಗ್ಗೆ ವಿವರವಾದ ವಿಚಾರಣೆಯನ್ನು ನಂತರ ನಡೆಸಲಿದೆ. ಅದರಲ್ಲಿ ಕರ್ನಾಟಕದ ಹಿಂದೂ ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ೧೯೯೭ ರ ಕಾನೂನು ಮತ್ತು ದೇವಾಲಯವನ್ನು ರಾಮಚಂದ್ರಪುರ ಮಠಕ್ಕೆ ಹಸ್ತಾಂತರಿಸುವ ಆದೇಶಕ್ಕೆ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ನ್ಯಾಯಾಲಯವು ಈ ಸಮಿತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಆಡಳಿತ ಅಧಿಕಾರಿಗಳು ಮತ್ತು ಧಾರ್ಮಿಕ ತಜ್ಞರು ಸಹ ಇರುವರು ಎಂದು ಸ್ಪಷ್ಟಪಡಿಸಿದೆ.
ಮಾಜಿ ನ್ಯಾಯಾಧೀಶರ ನೇತೃತ್ವದ ಸಮಿತಿ ಸುಪರ್ದಿಗೆ ಗೋಕರ್ಣ ದೇವಾಲಯ: ಸುಪ್ರೀಂ ಕೋರ್ಟ್ ತೀರ್ಪು https://t.co/5z6aLcJZ35 via @KannadaPrabha #SupremeCourt #Gokarnatemple #RamchndrapuraMath
— kannadaprabha (@KannadaPrabha) April 19, 2021
೧. ೨೦೦೮ ರಲ್ಲಿ ಅಂದಿನ ಬಿಜೆಪಿ ಸರ್ಕಾರ ಈ ದೇವಾಲಯವನ್ನು ಹತ್ತಿರದ ರಾಮಚಂದ್ರಪುರ ಮಠದ ಭಾಗವೆಂದು ಘೋಷಿಸಿ ದೇವಾಲಯದ ನಿರ್ವಹಣೆಯನ್ನು ಮಠಕ್ಕೆ ಹಸ್ತಾಂತರಿಸಿತು. ಅದಕ್ಕೂ ಮೊದಲು ಈ ದೇವಾಲಯವನ್ನು ಸರಕಾರಿ ಸಮಿತಿಯು ನಡೆಸುತ್ತಿತ್ತು. ದೇವಾಲಯವನ್ನು ಮಠಕ್ಕೆ ಹಸ್ತಾಂತರಿಸಬಾರದು ಎಂದು ೨೦೧೮ ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು. ಅದರ ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.
೨. ಕರ್ನಾಟಕ ಉಚ್ಚ ನ್ಯಾಯಾಲಯವು ದೇವಾಲಯದ ನಿರ್ವಹಣೆಯನ್ನು ರಾಮಚಂದ್ರಪುರ ಮಠದಿಂದ ತೆಗೆದುಹಾಕಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ಸಲಹೆಗಾರರೆಂದು ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಲಾಗಿತ್ತು. ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಮುಂದೂಡಲಾಯಿತು.