ಕೊರೋನಾ ಅವಧಿಯಲ್ಲಿ, ಭಾರತದ ೫೦ ಸಾವಿರ ಹಳ್ಳಿಗಳನ್ನು ಸಂಪರ್ಕಿಸಿದ ಕ್ರೈಸ್ತ ಮಿಷನರಿಗಳು !

೧ ಲಕ್ಷ ಜನರ ಮತಾಂತರಗೊಳಿಸಿ, ನೂರಾರು ಚರ್ಚುಗಳನ್ನು ನಿರ್ಮಿಸಿದೆ ಎಂದು ಹೇಳಿಕೆ

ಬಿಕ್ಕಟ್ಟಿನ ಸಮಯದಲ್ಲಿ ಮತಾಂತರಿಸಲು ಪ್ರಯತ್ನಿಸಿ ಸತ್ತವರ ನೆತ್ತಿಯ ಮೇಲೆ ಬೆಣ್ಣೆಯನ್ನು ತಿನ್ನುವ ಕ್ರೈಸ್ತ ಮಿಷನರಿಗಳು ! ಇಂತಹದನ್ನು ತಡೆಗಟ್ಟಲು ಕೇಂದ್ರ ಸರಕಾರವು ತಕ್ಷಣ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕು !

ನವದೆಹಲಿ : ಭಾರತದಲ್ಲಿ ಕೊರೋನಾ ಮಹಾಮಾರಿಯ ಸಮಯದಲ್ಲಿ ಎಷ್ಟು ಚರ್ಚ್‍ಗಳನ್ನು ನಿರ್ಮಿಸಲಾಯಿತೋ, ಕಳೆದ ೨೫ ವರ್ಷಗಳಲ್ಲಿ ಅಷ್ಟು ನಿರ್ಮಿಸಿರಲಿಕ್ಕಿಲ್ಲ. ಇಲ್ಲಿಯವರೆಗೆ ಕ್ರೈಸ್ತ ಮಿಷನರಿಗಳು ೫೦ ಸಾವಿರ ಗ್ರಾಮಗಳನ್ನು ತಲುಪಿದ್ದಾರೆ. ಅದರಲ್ಲಿ ಶೇಕಡಾ ೨೫ ರಷ್ಟು ಗ್ರಾಮಗಳಲ್ಲಿ ‘ಗೊಸ್ಪೆಲ್'(ಏಸು ಕ್ರಿಸ್ತನ ಕಲಿಕೆ) ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಅವಧಿಯಲ್ಲಿ ೧ ಲಕ್ಷ ಜನರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗ ಅವರು ಯೇಸುಕ್ರಿಸ್ತನನ್ನು ನಂಬುತ್ತಾರೆ ಮತ್ತು ಪ್ರಾರ್ಥನೆ ಮಾಡಲು ಚರ್ಚ್‍ಗೆ ಬರುತ್ತಾರೆ. ಪ್ರತಿ ಚರ್ಚ್ ೧೦ ಹಳ್ಳಿಗಳಲ್ಲಿ ಪ್ರಾರ್ಥನೆ ನಡೆಸುತ್ತಿದೆ ಎಂದು ಆನ್‍ಲೈನ್ ಕಾರ್ಯಕ್ರಮವೊಂದರಲ್ಲಿ ‘ಅನ್ಫೋಲ್ಡಿಂಗ್ ವಲ್ರ್ಡ್’ ನ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರೀವ್ಸ್ ಹೇಳಿದ್ದಾರೆ. ‘ಅನ್ಫೋಲ್ಡಿಂಗ್ ವಲ್ರ್ಡ್’ ಈ ಸಂಸ್ಥೆಯು ಬೈಬಲ್ ಅನ್ನು ಸ್ಥಳೀಯ ಭಾಷೆಗಳಿಗೆ ಅನುವಾದಿಸುವ ಸಲಕರಣೆಗಳನ್ನು ಒದಗಿಸುತ್ತದೆ.

ಡೇವಿಡ್ ರೀವ್ಸ್ ತಮ್ಮ ಮಾತನ್ನು ಮುಂದುವರೆಸುತ್ತಾ,

. ಹೇಗೆ ಹೇಗೆ ನಿರ್ಬಂಧಗಳನ್ನು ತೆಗೆದುಹಾಕಲಾಯಿತೋ, ಹಾಗೇ ಮಿಷನರಿಗಳು ಸಕ್ರಿಯರಾದರು. ಈ ಕಾರ್ಯ ಕಷ್ಟಕರವಾಗಿದೆ; ಏಕೆಂದರೆ ಕೆಲವು ಮಿಷನರಿಗಳು ಕೊಲ್ಲಲ್ಪಟ್ಟರು. (ಇಂತಹ ಘಟನೆ ಭಾರತದಲ್ಲಿ ಎಲ್ಲಿಯೂ ಕೇಳಿಬಂದಿಲ್ಲದಿದ್ದರೂ ಸುಳ್ಳು ಮಾಹಿತಿ ನೀಡುವ ಮೂಲಕ ಹಿಂದೂಗಳನ್ನು ಅಸಹಿಷ್ಣುವೆಮದು ತೋರಿಸಲು ಪ್ರಯತ್ನಿಸುವ ರೀವ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ! – ಸಂಪಾದಕ) ಈ ಕಾರ್ಯದಲ್ಲಿ ಅನೇಕ ಅಡಚಣೆಗಳು ಬಂದರೂ, ಚರ್ಚ್‍ಗೆ ಈ ಕಾರ್ಯದಿಂದ ವಿಮುಖಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ.

೨. ಕೊರೋನಾದ ಸಮಯದಲ್ಲಿ, ಜನರು ಪರಸ್ಪರ ಭೇಟಿಯಾಗಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರಿಗೆ ದೂರವಾಣಿ ಮತ್ತು ವಾಟ್ಸಾಪ್ ಮೂಲಕ ಪ್ರಾರ್ಥನೆಗಳನ್ನು ತಲುಪಿಸಲು ಪ್ರಾರಂಭಿಸಿತು.