‘ಭಾರತದ ಪರಿಸ್ಥಿತಿ ಹದಗೆಟ್ಟಿರುವುದರಿಂದ ಜಗತ್ತು ಸಹಾಯ ಮಾಡಬೇಕು !’(ಅಂತೆ)

ತಥಾಕಥಿತ ಪರಿಸರವಾದಿ ಗ್ರೆಟಾ ಥನ್‌ಬರ್ಗ್‌ರಿಂದ ಮೊಸಳೆ ಕಣ್ಣೀರು ಸುರಿಸುತ್ತಾ ಮನವಿ !

ಗ್ರೇಟಾ ಥನ್‌ಬರ್ಗ್‌ಗೆ ಭಾರತದ ಬಗ್ಗೆ ತುಂಬಾ ಒಲವು ಇದ್ದರೆ, ಅವರು ಭಾರತದಲ್ಲಿ ರಾಷ್ಟ್ರ ವಿರೋಧಿ ರೈತ ಚಳವಳಿಗೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಭಾರತೀಯರಲ್ಲಿ ಕ್ಷಮೆಯಾಚಿಸಬೇಕು ! ಈ ಸಂದರ್ಭದಲ್ಲಿ, ಜಾಗತಿಕ ಸ್ತರದಲ್ಲಿ ತನ್ನ ಚಾರಿತ್ರ್ಯ ಮಲೀನವಾಗಿದ್ದರಿಂದ ತನ್ನ ಚಾರಿತ್ರ್ಯವನ್ನು ಪುನಃ ಹೆಚ್ಚಿಸಲು ಅವಳು ಅಂತಹ ಮನವಿಯನ್ನು ಮಾಡುತ್ತಿರುವಂತೆ ನಟಿಸುತ್ತಿದ್ದಾಳೆಂದು ಭಾರತೀಯರಿಗೆ ತಿಳಿದಿದೆ !

ನವದೆಹಲಿ – ಭಾರತವು ಪ್ರಸ್ತುತ ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಆಮ್ಲಜನಕ, ಹಾಸಿಗೆಗಳು, ವೆಂಟಿಲೇಟರ್ ಇತ್ಯಾದಿಗಳ ಕೊರತೆಯನ್ನು ಎದುರಿಸುತ್ತಿದೆ. ಆದ್ದರಿಂದ, ಜಗತ್ತು ನೇತೃತ್ವವಹಿಸಿ ಕೊರೋನಾ ಯುದ್ಧವನ್ನು ಎದುರಿಸುತ್ತಿರುವ ಭಾರತಕ್ಕೆ ಸಹಾಯ ಮಾಡಬೇಕು ಎಂಬ ನುಡಿಮುತ್ತನ್ನು ಸ್ವೀಡನ್‌ನ ತಥಾಕಥಿತ ಪರಿಸರ ಕಾರ್ಯಕರ್ತೆ ಗ್ರೆಟಾ ಥನಬರ್ಗ್ ಟ್ವೀಟ್ ಮಾಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಗ್ರೆಟಾ ಥನಬರ್ಗ್ ಭಾರತದಲ್ಲಿ ರಾಷ್ಟ್ರ ವಿರೋಧಿ ರೈತ ಚಳುವಳಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಹಾಗೆ ಮಾಡುವಾಗ, ಅವಳು ಟೂಲಕಿಟ್(ಆಂದೋಲನ ಮಾಡುವ ಹಂತಗಳು) ಶೇರ್ ಮಾಡಿದ್ದರು. ಇದರಿಂದ, ವಿಶ್ವದಾದ್ಯಂತದ ಭಾರತ ವಿರೋಧಿ ಪಡೆಗಳು ರೈತ ಚಳವಳಿಗೆ ಬೆಂಬಲ ನೀಡುತ್ತಿರುವುದು ಗಮನಕ್ಕೆ ಬಂದಿತ್ತು. ಆದ್ದರಿಂದ ಅವಳನ್ನು ಟೀಕಿಸಲಾಗಿತ್ತು.