ರಾಷ್ಟ್ರನಿಷ್ಠ ಮತ್ತು ಹಿಂದುತ್ವದ ಪಕ್ಷವನ್ನು ಮಂಡಿಸುತ್ತಿದ್ದ ಪತ್ರಕರ್ತ ರೋಹಿತ್ ಸರ್ದಾನ ನಿಧನ

ರೋಹಿತ್ ಸರ್ದಾನ

ನವ ದೆಹಲಿ – ಖ್ಯಾತ ಪತ್ರಕರ್ತ ಮತ್ತು ನಿರೂಪಕ ರೋಹಿತ್ ಸರ್ದಾನ ನೋಯ್ಡಾದ ಮೆಟ್ರೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೪೨ ವರ್ಷವಾಗಿತ್ತು. ಅವರು ಕೊರೋನಾದ ಸೋಂಕಿಗೆ ಒಳಗಾಗಿದ್ದರು; ಆದರೆ ನಂತರ ಅವರ ವರದಿಯು ನಕಾರಾತ್ಮಕ ಬಂದಿತ್ತು. ನಂತರ ಅವರಿಗೆ ೨೯ ಎಪ್ರಿಲ್ ರಾತ್ರಿ ಉಸಿರಾಟದ ತೊಂದರೆಯಾಗತೊಡಗಿದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಏಪ್ರಿಲ್ ೩೦ ರ ಮಧ್ಯಾಹ್ನ ನಿಧನರಾದರು.

ಅವರು ಹಿಂದಿ ಸುದ್ದಿ ಚಾನೆಲ್ ‘ಆಜ್ ತಕ್’ ನಲ್ಲಿ ನೌಕರಿಯನ್ನು ಮಾಡುತ್ತಿದ್ದರು. ಅವರು ‘ದಂಗಲ್’ ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಮಾಡುತ್ತಿದ್ದರು. ೨೦೧೮ ರಲ್ಲಿ ಅವರಿಗೆ ಗಣೇಶ ಶಂಕರ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರು ಮೊದಲು ‘ಝೀ ನ್ಯೂಸ್’ ಸುದ್ದಿವಾಹಿನಿಯಲ್ಲಿ ನೌಕರಿ ಮಾಡುತ್ತಿದ್ದರು. ಅಲ್ಲಿ ಅವರು ‘ತಾಲ್ ಠೊಕ್ ಕೆ’ ಕಾರ್ಯಕ್ರಮದ ಸೂತ್ರಸಂಚಾಲಕರಾಗಿದ್ದರು. ಅವರು ರಾಷ್ಟ್ರ ಮತ್ತು ಹಿಂದುತ್ವದ ವಿಷಯವನ್ನು ಖಂಡತುಂಡವಾಗಿ ಮಂಡಿಸುತ್ತಿದ್ದರು. ಕೆಲವೇ ವರ್ಷಗಳೊಳಗೆ, ಅವರು ನಿರೂಪಕರಾಗಿ ಹೆಸರುಗಳಿಸಿಕೊಂಡಿದ್ದರು (ಪ್ರಸಿದ್ಧರಾಗಿದ್ದರು). ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಇತರರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ರೋಹಿತ್ ಸರ್ದಾನ ಅವರ ಸಾವಿನ ಬಗ್ಗೆ ಸಂತಸ ಪಟ್ಟ ಮತಾಂಧರು !

ಮತಾಂಧರ ವಿಕೃತ ಮಾನಸಿಕತೆ ! ಈ ಬಗ್ಗೆ ಪ್ರಗತಿ(ಅಧೋಗತಿ)ಪರರು ಹಾಗೂ ಜಾತ್ಯತೀತವಾದಿಗಳ ತುಟಿ ಪಿಟಕ್ ಎನ್ನುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ !

ರೋಹಿತ್ ಸರ್ದಾನ ಅವರ ನಿಧನದ ನಂತರ, ಕೆಲವು ಮತಾಂಧರು ಸಾಮಾಜಿಕ ಮಾಧ್ಯಮದಿಂದ ಸಂತೋಷವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

೧. ‘ಈ ಜಗತ್ತಿನಲ್ಲಿ ಕೊಳಕು ಜನರ ಅಗತ್ಯವಿಲ್ಲ, ಇದು ಒಳ್ಳೆಯ ಸುದ್ದಿ’ ಎಂದು ಅಲಿ ಮೌಲಾ’ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ನಲ್ಲಿ ಬರೆದಿದ್ದಾರೆ.

೨. ಸರದಾನಾ ಮುಸಲ್ಮಾನರ ಬಗ್ಗೆ ದ್ವೇಷವನ್ನು ಹಬ್ಬಿಸುತ್ತಿದ್ದರು ಕಳೆದ ವರ್ಷ, ಅವರು ತಬಲಿಗಿ ಜಮಾತಿನ ವಿರುದ್ಧ ಬೊಗಳುತ್ತಿದ್ದರು. ಕೊರೋನಾ ಹರಡಲು ಬಂಗಾಲದ ಚುನಾವಣೆ ಮತ್ತು ಹರಿದ್ವಾರ ಕುಂಭದ ಅಗತ್ಯವಿರಲಿಲ್ಲ. ಇದಕ್ಕಾಗಿಯೇ ಅಲ್ಲಾಹನು ಒಂದು ಯೋಜನೆಯನ್ನು ರೂಪಿಸಿದನು ಮತ್ತು ಸರದಾನನನ್ನು ನರಕಕ್ಕೆ ಹೋಗಲು ಆರಿಸಿದನು, ಎಂದು ಇರ್ಫಾನ್ ಬಸೀರ್ ವಾನಿ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

೩. ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾ ಕಳುಹಿಸುತ್ತಾ ಅವರೇ ನರಕಕ್ಕೆ ಹೋದರು ಎಂದು ‘ಆಕ್ಸ್’ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ಬರೆದಿದೆ.

ಇಂತಹ ರೀತಿಯ ಟ್ವೀಟ್ ಗಳು ಅನೇಕ ಮತಾಂಧರಿಂದ ಬಂದಿವೆ.