ಮುಂಬರುವ ಭೀಕರ ಆಪತ್ಕಾಲಕ್ಕಾಗಿ ಅಲ್ಲದೇ ದಿನನಿತ್ಯ ಉಪಯುಕ್ತವಾಗಿರುವ ಸನಾತನದ ನೂತನ ಆಯುರ್ವೇದದ ಔಷಧಿಗಳು

ವೈದ್ಯ ಮೇಘರಾಜ ಪರಾಡಕರ್

ಸದ್ಯ ಕೊರೊನಾ ರೂಪದಲ್ಲಿ ಆಪತ್ಕಾಲದ ತುಣುಕನ್ನು ಅನುಭವಿಸುತ್ತಿದ್ದೇವೆ. ‘ಚಿಕಿತ್ಸಾಲಯಕ್ಕೆ ಹೋಗಬೇಕೆಂದರೆ ಬಹಳ ಜನದಟ್ಟಣೆ ಇರುತ್ತದೆ. ಔಷಧಾಲಯದಲ್ಲಿ ಔಷಧಿಗಳು ಲಭ್ಯವಿರುವುದಿಲ್ಲ, ಆನ್‌ಲೈನ್ ಔಷಧಿಗಳನ್ನು ತರಿಸಿದರೂ, ಸಂಚಾರ ನಿರ್ಬಂಧದ ಕಾರಣದಿಂದ ಸರಿಯಾದ ಸಮಯಕ್ಕೆ ಅವು ತಲುಪುವುದಿಲ್ಲ, ಔಷಧಿಗಳ ಕೊರತೆಯಿರುವುದರಿಂದ ಅವುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ, ಇತ್ಯಾದಿ ಅನೇಕ ಕೆಟ್ಟ ಅನುಭವಗಳನ್ನು ಅನೇಕ ಜನರು ಪಡೆದಿದ್ದಾರೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ. ಈ ಔಷಧಿಗಳು ಬೇಗನೆ ಉಪಲಬ್ಧವಾಗಲಿದೆ. ಈ ಔಷಧಗಳ ಕುರಿತು ಮಾಹಿತಿಯನ್ನು ನಾವು ಒಂದೊಂದಾಗಿ ತಿಳಿದುಕೊಳ್ಳುವವರಿದ್ದೇವೆ.

೪. ಸನಾತನ ಯಷ್ಟಿಮಧು (ಜ್ಯೇಷ್ಠ ಮಧು) ಚೂರ್ಣ

೪ ಅ. ಗುಣಧರ್ಮ ಮತ್ತು ಸಂಭವನೀಯ ಉಪಯೋಗ : ಈ ಔಷಧವು ತಂಪು(ಶೀತಲ) ಗುಣಧರ್ಮವನ್ನು ಹೊಂದಿದ್ದು, ಕಣ್ಣು, ಚರ್ಮ, ಕೂದಲು ಮತ್ತು ಗಂಟಲಿಗೆ ಹಿತಕರವಾಗಿದೆ. ಈ ಕಾಯಿಲೆಗಳಿಗೆ ಸಂಭವನೀಯ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಇನ್ನಿತರ ರೋಗಗಳಿಗೆ ಅನುಗುಣವಾಗಿ ಉಪಚಾರಗಳಲ್ಲಿ ಬದಲಾವಣೆಯಾಗಬಹುದು. ಆದುದರಿಂದ ಔಷಧಿಗಳನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ಸೇವಿಸಬೇಕು.

ಉಪಯೋಗ ಔಷಧಿ ತೆಗೆದುಕೊಳ್ಳುವ ಪದ್ಧತಿ

ಕಾಲಾವಧಿ

೧. ಫಿಟ್ಸ್ ಬರುವುದು ಬೆಳಗ್ಗೆ ಮತ್ತು ಸಾಯಂಕಾಲ ೩ ಗ್ರಾಮ್ (೧ ಚಮಚ) ಜ್ಯೇಷ್ಠಮಧ ಚೂರ್ಣವನ್ನು ಅರ್ಧ ಲೋಟ ಬೂದುಗುಂಬಳಕಾಯಿ ರಸದಲ್ಲಿ ತೆಗೆದುಕೊಳ್ಳಬೇಕು. ೬ ತಿಂಗಳು
೨. ಕೆಮ್ಮು, ಗಂಟಲು ನೋವು, ಧ್ವನಿ ಬೀಳುವುದು, ಗಂಟಲಿನಿಂದ ಕಫ ಹೊರಗೆ ಬೀಳದಿರುವುದು ಮತ್ತು ಬಾಯಿ ಹುಣ್ಣು ಪ್ರತಿದಿನ ೪ ಸಲ ಕಾಲು ಚಮಚ ಜ್ಯೇಷ್ಠಮಧ ಚೂರ್ಣ ಅಗಿದು ತಿನ್ನುವುದು. ೫ ದಿನ
೩. ದವಡೆಯಿಂದ ರಕ್ತ ಬರುವುದು ಎರಡು ಸಲದ ಊಟದ ಬಳಿಕ ಕಾಲು ಚಮಚ ಜ್ಯೇಷ್ಠಮಧ ಚೂರ್ಣ ಮತ್ತು ೧ ಚಮಚ ಕಪ್ಪು ಎಳ್ಳು ಅಗಿದು, ಅಗಿದು ತಿನ್ನಬೇಕು ಮತ್ತು ೫ ನಿಮಿಷಗಳ ಬಳಿಕ ಬಾಯಿ ಮುಕ್ಕಳಿಸಬೇಕು. ೭ ದಿನ
೪. ಪಿತ್ಥದಿಂದ ತೊಳೆಸುವುದು, ಅಸ್ವಸ್ಥ ಎನಿಸುವುದು, ತಲೆ ನೋವು ಮತ್ತು ಆಮ್ಲಪಿತ್ಥ ಇವುಗಳು ವಾಂತಿಯ ಮೂಲಕ ಶುದ್ಧಿಯಾಗಲು ೪ ಚಮಚ ಜ್ಯೇಷ್ಠಮಧ ಚೂರ್ಣ ೨ ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯ ಬೇಕು ಮತ್ತು ಸ್ನಾನಗೃಹದಲ್ಲಿ ಕುಕ್ಕುರುಗಾಲಿನಲ್ಲಿ ಅಥವಾ ಸ್ಟೂಲಿನ ಮೇಲೆ ಕುಳಿತುಕೊಂಡು ವಾಂತಿಯಾಗುವವರೆಗೆ ನಾಲಿಗೆಯ ಮೇಲೆ ತಿಕ್ಕಬೇಕು. ಈ ಉಪಚಾರ ಅತ್ಯಾವಶ್ಯಕವಿದ್ದರೆ ೬ ತಿಂಗಳಿಗೊಮ್ಮೆ ಮಾಡಬೇಕು. ಬಳಿಕ ೨ ದಿನ ಹಗುರವಾದ ಆಹಾರ (ರವೆಯ ಉಪ್ಪಿಟ್ಟು, ಶಿರಾ, ಮೆತ್ತಗಿನ ಅನ್ನ, ಅನ್ನ ತೊವ್ವೆ, ಹೆಸರು ಬೇಳೆಯ ಕಿಚಡಿ) ಸೇವಿಸಬೇಕು. ತಾತ್ಕಾಲಿಕ
೫. ಮಲಬದ್ಧತೆ ಎರಡು ಸಲದ ಊಟದ ಮೊದಲು ೧ ಚಮಚ ಜ್ಯೇಷ್ಠಮಧ ಚೂರ್ಣವನ್ನು ಮತ್ತು ೧ ಚಿಟಿಕೆ ಉಪ್ಪನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು ೧೫ ದಿನ
೬. ಮುಖದ ಮೇಲೆ ಮೊಡವೆ ಆಗುವುದು ಜ್ಯೇಷ್ಠಮಧ ಚೂರ್ಣವನ್ನು ಹಾಲಿನಲ್ಲಿ ಕಲಸಿ ಅದರ ಲೇಪವನ್ನು ಹಚ್ಚಿ ಅದು ಒಣಗಿದ ಬಳಿಕ ತೊಳೆಯಬೇಕು. ೧೫ ದಿನ
೭. ಉಷ್ಣತೆಯ ರೋಗ (ಉಷ್ಣ ಪದಾರ್ಥಗಳು ಸೇರದಿರುವುದು ಬಾಯಿಯಲ್ಲಿ ಹುಣ್ಣಾಗುವುದು, ಮೈಯಲ್ಲಿ ಉರಿಯಾಗುವುದು, ಮೂತ್ರ ಮಾರ್ಗದಲ್ಲಿ ಉರಿಯಾಗುವುದು, ಮೈಮೇಲೆ ಗುಳ್ಳೆಗಳಾಗುವುದು, ತಲೆ ಸುತ್ತುವುದು ಇತ್ಯಾದಿ) ೨ ಸಲ ೧ ಚಮಚ ಜ್ಯೇಷ್ಠಮಧ ಚೂರ್ಣವನ್ನು ೧ ಚಮಚ ತುಪ್ಪದಲ್ಲಿ ತೆಗೆದುಕೊಳ್ಳಬೇಕು. ೧೫ ದಿನ
೮. ತೂಕ ಕಡಿಮೆಯಿರುವುದು ಮತ್ತು ಆಯಾಸ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿ ೩೦ ನಿಮಿಷಗಳ ಬಳಿಕ ೧ ಚಮಚ ಜ್ಯೇಷ್ಠಮಧ ಚೂರ್ಣವನ್ನು ೧ ಕಪ್ ಹಾಲು ಮತ್ತು ೨ ಚಮಚ ತುಪ್ಪದೊಂದಿಗೆ ಸೇವಿಸಬೇಕು. ನಂತರ ೧ ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು. ೩ ತಿಂಗಳು
೯. ಜ್ವರ ದಿನದಲ್ಲಿ ೨ ಸಲ ಅರ್ಧ ಚಮಚ ಜ್ಯೇಷ್ಠಮಧ ಚೂರ್ಣ, ಅರ್ಧ ಚಮಚ ತುಳಸಿಯ ರಸ, ಅರ್ಧ ಚಮಚ ಹಸಿಶುಂಠಿಯ ರಸ ಮತ್ತು ೧ ಚಮಚ ಜೇನುತುಪ್ಪ ಇವುಗಳ ಮಿಶ್ರಣ ತೆಗೆದುಕೊಳ್ಳಬೇಕು ೩ ರಿಂದ ೫ ದಿನ
೧೦. ಬಾವು ಸಾಕಷ್ಟು ಪ್ರಮಾಣದಲ್ಲಿ ಜ್ಯೇಷ್ಠಮಧ ಚೂರ್ಣ ತೆಗೆದುಕೊಂಡು ಅದರಲ್ಲಿ ಅವಶ್ಯಕತೆಗನುಸಾರ ಉಗುರುಬೆಚ್ಚಗಿನ ನೀರನ್ನು ಸೇರಿಸಿ ದಪ್ಪನೆಯ ಲೇಪ ಮಾಡಬೇಕು. ಒಂದು ಗಂಟೆಯ ಬಳಿಕ ಲೇಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ೭ ದಿನ

೪ ಆ. ಸೂಚನೆ

೧. ೩ ರಿಂದ ೭ ವರ್ಷದವರು ವಯಸ್ಕರ ಪ್ರಮಾಣದ ಕಾಲುಭಾಗ ಮತ್ತು ೮ ರಿಂದ ೧೪ ವರ್ಷದವರು ವಯಸ್ಕರ ಅರ್ಧ ಪ್ರಮಾಣದಲ್ಲಿ ಚೂರ್ಣವನ್ನು ಸೇವಿಸಬೇಕು.

೨. ಜ್ಯೇಷ್ಠಮಧು ಚೂರ್ಣವನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ವಾಂತಿಯಾಗುತ್ತದೆ. ಆದುದರಿಂದ ಅದನ್ನು ಅಳತೆಯಲ್ಲಿಯೇ ತೆಗೆದುಕೊಳ್ಳಬೇಕು.

೫. ಸನಾತನ ಲಾವಂಚದ ಚೂರ್ಣ

೫ ಅ. ಗುಣಧರ್ಮ ಮತ್ತು ಸಂಭವನೀಯ ಉಪಯೋಗ : ಈ ಔಷಧಿಯು ತಂಪು ಗುಣಧರ್ಮವನ್ನು ಹೊಂದಿದ್ದು ಪಿತ್ಥ ಮತ್ತು ಕಫ ನಾಶಕವಾಗಿದೆ. ಈ ಔಷಧಿಯಿಂದ ರೋಗಗಳ ಮೇಲಾಗುವ ಸಂಭವನೀಯ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರೊಂದಿಗೆ ಇತರ ರೋಗಗಳಿಗೆ ಅನುಗುಣವಾಗಿ ಉಪಚಾರಗಳಲ್ಲಿ ಬದಲಾವಣೆಯಾಗಬಹುದು. ಇದರಿಂದ ಔಷಧಿಯನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿ ತೆಗೆದುಕೊಳ್ಳುವ ಪದ್ಧತಿ
೧. ಉಷ್ಣತೆಯ ರೋಗ (ಉಷ್ಣ ಪದಾರ್ಥಗಳು ಸೇರದಿರುವುದು, ಬಾಯಿಯಲ್ಲಿ ಹುಣ್ಣಾಗುವುದು, ಮೈಯಲ್ಲಿ ಉರಿಯಾಗುವುದು, ಮೂತ್ರ ಮಾರ್ಗದಲ್ಲಿ ಉರಿಯಾಗುವುದು, ಮೈಮೇಲೆ ಗುಳ್ಳೆಗಳಾಗುವುದು, ತಲೆ ಸುತ್ತುವುದು, ಕೂದಲು ಉದುರುವುದು ಇತ್ಯಾದಿ) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ೧ ಚಮಚ ಲಾವಂಚದ ಚೂರ್ಣ ೧ ಕಪ್ ಹಾಲು ಮತ್ತು ೧ ಚಮಚ ಕಲ್ಲುಸಕ್ಕರೆಯ ಮಿಶ್ರಣದೊಂದಿಗೆ ಸೇವಿಸಬೇಕು. ಈ ಔಷಧವನ್ನು ಸೇವಿಸಿದ ಬಳಿಕ ಸಾಧಾರಣ ೧ ಗಂಟೆಯವರೆಗೆ ಏನನ್ನೂ ತಿನ್ನಬಾರದು-ಕುಡಿಯಬಾರದು. ೭ ದಿನ
೨. ಹೊಟ್ಟೆ ತೊಳೆಸಿದಂತಾಗುವುದು, ವಾಂತಿ, ಬೇಧಿಯಾಗುವುದು ಮತ್ತು ಮಲದೊಂದಿಗೆ ರಕ್ತ ಬೀಳುವುದು ಲಾವಂಚ ಚೂರ್ಣ, ತುಂಗೆ ಗಡ್ಡೆಯ ಚೂರ್ಣ, ಕೊತ್ತಂಬರಿ ಪುಡಿ ಮತ್ತು ಬಡಿಸೋಪಿನ ಪುಡಿಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಬೇಕು. ಇದರ ೧ ಚಮಚ ಔಷಧಿಯನ್ನು ದಿನದಲ್ಲಿ ೩-೪ ಸಲ ೧ ಲೋಟದಷ್ಟು ಬಿಸಿನೀರಿನೊಂದಿಗೆ ಸೇವಿಸಬೇಕು ೩ ರಿಂದ ೪ ದಿನ
೩. ಜ್ವರ ದಿನದಲ್ಲಿ ೩-೪ ಸಲ ಕಾಲು ಚಮಚ ಲಾವಂಚದ ಚೂರ್ಣವನ್ನು ೧ ಲೋಟದಷ್ಟು ಬಿಸಿನೀರಿನೊಂದಿಗೆ ಸೇವಿಸಬೇಕು. ೩ ರಿಂದ ೪ ದಿನ
೪. ಬೇಸಿಗೆಯ ದಿನಗಳಲ್ಲಿ ಉಷ್ಣತೆಯ ಕಾಯಿಲೆ ಆಗಬಾರದೆಂದು ಕುಡಿಯುವ ೧ ಲೀಟರ್ ನೀರಿನಲ್ಲಿ ಅರ್ಧ ಚಮಚದಷ್ಟು ಪ್ರಮಾಣದಲ್ಲಿ ಲಾವಂಚದ ಚೂರ್ಣವನ್ನು ಹಾಕಿ ಕುಡಿಯಬೇಕು. ನೀರಡಿಕೆಯಾದಾಗಲೆಲ್ಲ ಈ ನೀರನ್ನು ಸೇವಿಸಬೇಕು. ಶರದ್‌ಋತು (ಅಕ್ಟೋಬರ್ ಬಿಸಿಲು)

೫ಆ. ಸೂಚನೆ:

೩ ರಿಂದ ೭ ವರ್ಷದವರು ವಯಸ್ಕರ ಪ್ರಮಾಣದ ಕಾಲು ಚಮಚ ಮತ್ತು ೮ ರಿಂದ ೧೪ ವರ್ಷದವರು ವಯಸ್ಕರ ಪ್ರಮಾಣದ ಅರ್ಧ ಚಮಚ ಚೂರ್ಣವನ್ನು ಸೇವಿಸಬೇಕು.

೬. ಸನಾತನ ತುಂಗೆ ಗಡ್ಡೆ (ನಾಗರಮೋತಾ) ಚೂರ್ಣ

೬ಅ. ಗುಣಧರ್ಮ ಮತ್ತು ಸಂಭವನೀಯ ಉಪಯೋಗ: ಈ ಔಷಧಿಯು ತಂಪು ಗುಣಧರ್ಮವನ್ನು ಹೊಂದಿದ್ದು, ಪಿತ್ಥ ಮತ್ತು ಕಫ ನಾಶಕವಾಗಿದೆ. ಈ ಚೂರ್ಣದಿಂದ ಕಾಯಿಲೆಗಳಲ್ಲಿನ ಸಂಭವನೀಯ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರೊಂದಿಗೆ ಇತರ ಕಾಯಿಲೆಗಳಿಗೆ ಅನುಗುಣವಾಗಿ ಉಪಚಾರಗಳಲ್ಲಿ ಬದಲಾವಣೆಯಾಗಬಹುದು. ಇದರಿಂದ ಔಷಧಿಯನ್ನು ವೈದ್ಯರ ಮಾರ್ಗದರ್ಶನದಡಿಯಲ್ಲಿಯೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ತೆಗೆದುಕೊಳ್ಳುವ ಪದ್ಧತಿ ಕಾಲಾವಧಿ
೧. ನೀರಡಿಕೆಯಾಗುವುದು, ಮೈ ಕೈ ಸಿಡಿಯುವಿಕೆ ಮತ್ತು ಮೈ ಕೈ ನೋವು ೧ ಲೀಟರ ನೀರಿನಲ್ಲಿ ಅರ್ಧಚಮಚ ಪ್ರಮಾಣದಲ್ಲಿ ತುಂಗೆ ಗಡ್ಡೆಯ ಚೂರ್ಣವನ್ನು ಹಾಕಿ ನೀರು ೫ ನಿಮಿಷ ಕುದಿಸಬೇಕು. ನೀರಡಿಕೆಯಾದರೆ ಇದೇ ನೀರು ಕುಡಿಯಬೇಕು. ೩-೪ ದಿನ
೨. ತೊಳೆಸುವುದು, ವಾಂತಿ, ಅತಿಸಾರ (ಭೇದಿ) ಆಗುವುದು ಮತ್ತು ಶೌಚದಲ್ಲಿ ರಕ್ತ ಬೀಳುವುದು ಲಾವಂಚ ಚೂರ್ಣ, ತುಂಗೆ ಗಡ್ಡೆಯ ಚೂರ್ಣ, ಕೊತ್ತಂಬರಿ ಪುಡಿ ಮತ್ತು ಬಡೇಸೋಪಿನ ಪುಡಿ ಇದನ್ನು ಸಮಭಾಗ ಮಿಶ್ರಣ ಮಾಡಬೇಕು. ಇದರ ೧ ಚಮಚ ಮಿಶ್ರಣವನ್ನು ದಿನದಲ್ಲಿ ೩-೪ ಸಲ ೧ ಲೋಟ ಬಿಸಿನೀರಿನೊಂದಿಗೆ ಸೇವಿಸಬೇಕು. ೩-೪ ದಿನ
೩. ಮೈ ಜಡವಾಗುವುದು, ಹಸಿವೆಯಾಗದಿರುವುದು, ಮೂತ್ರ ಕೆಸರಿನಂತಿರುವುದು, ಜ್ವರ ಬಂದಾಗ ಹಾಗೂ ರಕ್ತಶುದ್ಧಿಗಾಗಿ ೧ ಚಮಚ ತುಂಗೆ ಗಡ್ಡೆ ಚೂರ್ಣ ೧ ಲೋಟದಷ್ಟು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ದಿನದಲ್ಲಿ ೩-೪ ಸಲ ಸೇವಿಸಬೇಕು. ೭ ದಿನ
೪. ಚಿಕ್ಕಮಕ್ಕಳಿಗೆ ಹಲ್ಲು ಬರುವಾಗ ಉಂಟಾಗುವ ಜ್ವರ ಅಥವಾ ಈ ಸಮಯದಲ್ಲಿನ ಇತರ ಕಾಯಿಲೆಗಳು, ಅಲ್ಲದೇ ಸ್ತನಪಾನ ಮಾಡುವ ಶಿಶುಗಳಿಗೆ ಬರುವ ಜ್ವರ ೧ ಲೋಟ ನೀರಿನಲ್ಲಿ ೧ ಚಮಚ ತುಂಗೆ ಗಡ್ಡೆಯ ಚೂರ್ಣವನ್ನು ಹಾಕಿ ಕುದಿಸಿ ಸೋಸಬೇಕು. ದಿನದಲ್ಲಿ ೫-೬ ಸಲ ಇದರ ಸ್ವಲ್ಪ ಸ್ವಲ್ಪ ನೀರನ್ನು ಶಿಶುವಿಗೆ ಕುಡಿಸಬೇಕು. ೭ ದಿನ

೬ ಆ. ಸೂಚನೆ:

೩ ರಿಂದ ೭ ವರ್ಷದವರು ವಯಸ್ಕರ ಪ್ರಮಾಣದ ಕಾಲು ಚಮಚ ಮತ್ತು ೮ ರಿಂದ ೧೪ ವರ್ಷದವರು ವಯಸ್ಕರ ಪ್ರಮಾಣದ ಅರ್ಧ ಚಮಚ ಪ್ರಮಾಣದಲ್ಲಿ ಚೂರ್ಣವನ್ನು ಸೇವಿಸಬೇಕು. – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೧.೬.೨೦೨೧)