ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಸನಾತನದ ಆಯುರ್ವೇದಿಕ ಔಷಧಿಗಳು (ಪ್ರಾತಿನಿಧಿಕ ಛಾಯಾಚಿತ್ರ)

ಸದ್ಯ ಕೊರೊನಾದ ರೂಪದಲ್ಲಿ ಮುಂಬರುವ ಆಪತ್ಕಾಲ ಹೇಗಿರಬಹುದು ಎಂಬುದನ್ನು ಎಲ್ಲರೂ ಸ್ವಲ್ಪವಾದರೂ ಅನುಭವಿಸುತ್ತಿದ್ದಾರೆ. ‘ಔಷಧಾಲಯಗಳಿಗೆ (ಮೆಡಿಕಲ್ ಶಾಪ್) ಹೋದರೆ, ಅಲ್ಲಿ ತುಂಬಾ ಜನಸಂದಣಿ ಇರುತ್ತದೆ, ಕೆಲವೊಮ್ಮೆ ಔಷಧಾಲಯಗಳಲ್ಲಿ ನಮಗೆ ಬೇಕಾದ ಔಷಧಿಗಳೇ ಇರುವುದಿಲ್ಲ, ಔಷಧಿಗಳನ್ನು ‘ಆನ್‌ಲೈನ್ದಲ್ಲಿ ತರಿಸಿದರೆ ಅವು ಸಂಚಾರಸಾರಿಗೆ ನಿಷೇಧದಿಂದ ಸಮಯಕ್ಕೆ ಸರಿಯಾಗಿ ತಲುಪುವುದಿಲ್ಲ, ಅಲ್ಲದೇ ಔಷಧಗಳ ಕೊರತೆ ಇರುವುದರಿಂದ ಅವುಗಳ ಕಾಳಸಂತೆ ನಡೆಯುತ್ತಿದೆ. ಇಂತಹ ಅನೇಕ ಕಹಿ ಅನುಭವಗಳನ್ನು ಅನೇಕ ಜನರು ಅನುಭವಿಸಿದ್ದಾರೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧತೆಯನ್ನು ಮಾಡುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ರೋಗಗಳಿಗೆ ಬೇಕಾಗುವ ೨೦ ಆಯುರ್ವೇದಿಕ ಔಷಧಿಗಳನ್ನು ತಯಾರಿಸುತ್ತಿದೆ. ಈ ಔಷಧಿಗಳು ಶೀಘ್ರದಲ್ಲಿಯೇ ಲಭ್ಯವಾಗುವವು. ಈ ಔಷಧಿಗಳ ಮಾಹಿತಿಯನ್ನು ನಾವು ಕ್ರಮವಾಗಿ ನೋಡುತ್ತಿದ್ದೇವೆ.

೩. ಸನಾತನ ಆಡುಸೋಗೆ ಚೂರ್ಣ

೩ ಅ. ಗುಣಧರ್ಮ ಮತ್ತು ಉಪಯೋಗ : ಈ ಔಷಧಿಯು ತಂಪು ಗುಣಧರ್ಮದ್ದಾಗಿದ್ದು ಪಿತ್ತ ಮತ್ತು ಕಫ ನಾಶಕವಾಗಿದೆ. ಕಾಯಿಲೆಗಳಲ್ಲಿ ಇವುಗಳನ್ನು ಹೇಗೆ ಉಪಯೋಗಿಸಬೇಕು ಎಂದು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

೩ ಆ. ಸೂಚನೆ : ೮ ರಿಂದ ೧೪ ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಚೂರ್ಣವನ್ನು ತೆಗೆದುಕೊಳ್ಳಬೇಕು. (ಮುಂದುವರಿಯುವುದು) – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ ಗೋವಾ. (೧೧. ೬.೨೦೨೧)

ಈ ಔಷಧಿಗಳ ಸವಿಸ್ತಾರ ಮಾಹಿತಿ ಈ ಲಿಂಕ್ ನಲ್ಲಿ ಓದಬಹುದು :  sanatanprabhat.org/kannada/44909.html ಯಾವ ವ್ಯಕ್ತಿಗಳಲ್ಲಿ ಮಧ್ಯಮ (೩-೪ ಎಕರೆ) ಅಥವಾ ದೊಡ್ಡ ಪ್ರಮಾಣದಲ್ಲಿ  ಕೃಷಿ ಮಾಡಬಲ್ಲ ಭೂಮಿ ಇದೆಯೋ ಅಂತಹ ವ್ಯಕ್ತಿಗಳು ಸಮಾಜಬಾಂಧವರ ವಿಚಾರ ಮಾಡಿ ದೊಡ್ಡ ಪ್ರಮಾಣದಲ್ಲಿ ಔಷಧಿ ವನಸ್ಪರಿಗಳ ಕೃಷಿ ಮಾಡಬೇಕು. ಇದರಿಂದ ಅನೇಕರಿಗೆ ಆಯುರ್ವೇದ ಔಷಧಿ ವನಸ್ಪತಿಗಳು ದೊರೆತು ಅವರ ಆರೋಗ್ಯ ರಕ್ಷಣೆಯಾಗುವುದು. ಈ ಮೂಲಕವೂ ಸಮಷ್ಟಿ ಸಾಧನೆಯಾಗುವುದು.