ಮುಂಬರುವ ಭೀಕರ ಆಪತ್ಕಾಲಕ್ಕಾಗಿ ಹಾಗೂ ಸಾಮಾನ್ಯ ರೋಗಗಳಿಗೆ ಸನಾತನದ ನೂತನ ಆಯುರ್ವೇದಿಕ ಔಷಧಗಳು

ವೈದ್ಯ ಮೇಘರಾಜ ಪರಾಡಕರ್

ಸದ್ಯ ಕೊರೋನಾದ ರೂಪದಲ್ಲಿ ಮುಂಬರುವ ಆಪತ್ಕಾಲ ಹೇಗಿರಬಹುದು ಎಂಬುದನ್ನು ಎಲ್ಲರೂ ಸ್ವಲ್ಪವಾದರೂ ಅನುಭವಿಸುತ್ತಿದ್ದಾರೆ. ‘ಔಷಧಾಲಯಗಳಿಗೆ (ಮೆಡಿಕಲ್ ಶಾಪ್) ಹೋದರೆ, ಅಲ್ಲಿ ತುಂಬಾ ಜನಸಂದಣಿ ಇರುತ್ತದೆ, ಕೆಲವೊಮ್ಮೆ ಔಷಧಾಲಯಗಳಲ್ಲಿ ನಮಗೆ ಬೇಕಾದ ಔಷಧಿಗಳೇ ಇರುವುದಿಲ್ಲ, ಔಷಧಿಗಳನ್ನು ಆನ್‌ಲೈನ್ ತರಿಸಿದರೆ ಅವು ಸಂಚಾರಸಾರಿಗೆ ನಿಷೇಧದಿಂದ ಸಮಯಕ್ಕೆ ಸರಿಯಾಗಿ ತಲಪುವುದಿಲ್ಲ, ಅಲ್ಲದೇ ಔಷಧಗಳ ಕೊರತೆ ಇರುವುದರಿಂದ ಅವುಗಳ ಕಾಳಸಂತೆ ನಡೆಯುತ್ತಿದೆ. ಇಂತಹ ಅನೇಕ ಕಹಿ ಅನುಭವಗಳನ್ನು ಅನೇಕ ಜನರು ಅನುಭವಿಸಿದ್ದಾರೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧತೆಯನ್ನು ಮಾಡುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ರೋಗಗಳಿಗೆ ಬೇಕಾಗುವ ೨೦ ಆಯುರ್ವೇದಿಕ ಔಷಧಿಗಳನ್ನು ತಯಾರಿಸುತ್ತಿದೆ. ಈ ಔಷಧಿಗಳು ಶೀಘ್ರದಲ್ಲಿಯೇ ಲಭ್ಯವಾಗುವವು. ಈ ಔಷಧಿಗಳ ಮಾಹಿತಿಯನ್ನು ನಾವು ಕ್ರಮವಾಗಿ ನೋಡುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/44462.html

ಸನಾತನದ ಆಯುರ್ವೇದಿಕ ಔಷಧಿಗಳು (ಪ್ರಾತಿನಿಧಿಕ ಛಾಯಾಚಿತ್ರ)

೨. ಸನಾತನ ಪಿಪ್ಪಲಿ (ಹಿಪ್ಪಲಿ) ಚೂರ್ಣ

೨ ಅ. ಗುಣಧರ್ಮ ಮತ್ತು ಉಪಯೋಗ : ಈ ಔಷಧಿಯು ವಾತ ಮತ್ತು ಕಫ ನಾಶಕವಾಗಿದ್ದು, ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರ ಜೊತೆಗೆ ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ಔಷಧಿಗಳನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ತೆಗೆದುಕೊಳ್ಳುವ ಪದ್ಧತಿ ಕಾಲಾವಧಿ
1. ರಕ್ತದೊತ್ತಡ (ಬಿ.ಪಿ) ಕಡಿಮೆಯಾಗುವುದು, ಮೈ ತಣ್ಣಗಾಗುವುದು ತುಂಬಾ ಚಳಿಯಾಗುವುದು 2 ಚಿಟಿಕೆಯಷ್ಟು ಪಿಪ್ಪಲಿ ಚೂರ್ಣವನ್ನು 1 ಚಮಚ ಹಸಿ ಶುಂಠಿಯ ರಸದಲ್ಲಿ ಬೆರೆಸಿ ನೆಕ್ಕಬೇಕು ತಾತ್ಕಾಲಿಕ (ಆ ಸಮಯಕ್ಕೆ ಮಾತ್ರ)
2. ಕೆಮ್ಮು, ದಮ್ಮು, ಎದೆಯಲ್ಲಿ ಕಫವಾಗುವುದು, ಬಾಯಿಗೆ ರುಚಿ ಇಲ್ಲದಿರುವುದು, ಹಸಿವೇ ಆಗದಿರುವುದು, ಅಜೀರ್ಣ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಆಗುವುದು 2 ಚಿಟಿಕೆಯಷ್ಟು ಪಿಪ್ಪಲಿ ಚೂರ್ಣ, ಅರ್ಧ ಚಮಚ ತುಪ್ಪ ಮತ್ತು 1 ಚಮಚದಷ್ಟು ಜೇನುತುಪ್ಪನ್ನು ಒಟ್ಟಿಗೆ ಬೆರೆಸಿ ದಿನದಲ್ಲಿ 2 – 3 ಸಲ ನೆಕ್ಕಬೇಕು 5 ರಿಂದ 7 ದಿನ
3. ಮಲಬದ್ಧತೆ (ಕಾನಸ್ಟಿಪೇಶನ್) ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಚಿಟಿಕೆ ಪಿಪ್ಪಲಿ ಚೂರ್ಣ ಮತ್ತು 1 ಚಮಚ ತ್ರಿಫಲ ಚೂರ್ಣವನ್ನು ಬೆರೆಸಿ ಅರ್ಧ ಕಪ್ ಬಿಸಿನೀರಿನೊಂದಿಗೆ ಸೇವಿಸಬೇಕು 5 ರಿಂದ 7 ದಿನ
4. ಹಳೆಯ ಜ್ವರ (ಬಹಳ ದಿನಗಳಿಂದ ಬರುತ್ತಿರುವ ಜ್ವರ) 2 ಚಿಟಿಕೆ ಪಿಪ್ಪಲಿ ಚೂರ್ಣವನ್ನು 1 ಚಮಚ ಜೇನು ತುಪ್ಪದೊಂದಿಗೆ ದಿನದಲ್ಲಿ 3 ಸಲ ಸೇವಿಸಬೇಕು 7 ದಿನ
5. ‘ಹೈಪೋಥೈರಾಯಿಡ್’, ಶ್ವಸನವ್ಯೂಹದ ರೋಗಗಳು, ಗರ್ಭಾಶಯದಲ್ಲಿನ ಗಡ್ಡೆಗಳು (ಫೈಬ್ರಾಯಿಡ್), ಅಂಡಾಶಯದ ಗಡ್ಡೆಗಳು (ಓವೇರಿಯನ್ ಸಿಸ್ಟ), ಇತ್ಯಾದಿಗಳಿಗೆ `ವರ್ಧಮಾನ ಪಿಪ್ಪಲಿ ರಸಾಯನ’ವು ಉಪಯುಕ್ತವಾಗಿದೆ ಸೂರ್ಯೋದಯದ ಸಮಯದಲ್ಲಿ 1 ಬಟ್ಟಲು ಹಾಲಿನಲ್ಲಿ ಅರ್ಧ ಗ್ರಾಮ್ (1/8 ಚಮಚ) ಚೂರ್ಣವನ್ನು ಬೆರೆಸಿ ಕುದಿಸಿ, ಅದರಲ್ಲಿ 1 ಚಮಚ ತುಪ್ಪವನ್ನು ಹಾಕಿ ಕುಡಿಯಬೇಕು. ನಂತರ 1 ಗಂಟೆ ಏನೂ ತಿನ್ನಬಾರದು ಅಥವಾ ಕುಡಿಯಬಾರದು. ನಂತರ ಚೂರ್ಣದ ಪ್ರಮಾಣವನ್ನು ಪ್ರತಿದಿನ ಅರ್ಧ ಗ್ರಾಮ್‌ದಂತೆ ಹೆಚ್ಚಿಸಿ, 9 ನೇ ದಿನದಿಂದ ಹಿಡಿದು ಪ್ರತಿದಿನ ಅರ್ಧ ಗ್ರಾಮ್ ಕಡಿಮೆ ಮಾಡಬೇಕು. ಈ ಉಪಚಾರದ ಹೊರತು ಪಿಪ್ಪಲಿ ಚೂರ್ಣವನ್ನು ನಿರಂತರವಾಗಿ 8 ದಿನಗಳಿಗಿಂತ ಹೆಚ್ಚು ಉಪಯೋಗಿಸಬಾರದು 15 ದಿನ

ಉಪಯೋಗ ಔಷಧಿಯನ್ನು ತೆಗೆದುಕೊಳ್ಳುವ ಪದ್ಧತಿ ಕಾಲಾವಧಿ

೧. ರಕ್ತದೊತ್ತಡ (ಬಿ.ಪಿ) ಕಡಿಮೆಯಾಗುವುದು, ಮೈ ತಣ್ಣಗಾಗುವುದು ತುಂಬಾ ಚಳಿಯಾಗುವುದು ೨ ಚಿಟಿಕೆಯಷ್ಟು ಪಿಪ್ಪಲಿ ಚೂರ್ಣವನ್ನು ೧ ಚಮಚ ಹಸಿ ಶುಂಠಿಯ ರಸದಲ್ಲಿ ಬೆರೆಸಿ ನೆಕ್ಕಬೇಕು ತಾತ್ಕಾಲಿಕ (ಆ ಸಮಯಕ್ಕೆ ಮಾತ್ರ)

೨. ಕೆಮ್ಮು, ದಮ್ಮು, ಎದೆಯಲ್ಲಿ ಕಫವಾಗುವುದು, ಬಾಯಿಗೆ ರುಚಿ ಇಲ್ಲದಿರುವುದು, ಹಸಿವೇ ಆಗದಿರುವುದು, ಅಜೀರ್ಣ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಆಗುವುದು ೨ ಚಿಟಿಕೆಯಷ್ಟು ಪಿಪ್ಪಲಿ ಚೂರ್ಣ, ಅರ್ಧ ಚಮಚ ತುಪ್ಪ ಮತ್ತು ೧ ಚಮಚದಷ್ಟು ಜೇನುತುಪ್ಪನ್ನು ಒಟ್ಟಿಗೆ ಬೆರೆಸಿ ದಿನದಲ್ಲಿ ೨ ೩ ಸಲ ನೆಕ್ಕಬೇಕು ೫ ರಿಂದ ೭ ದಿನ

೩. ಮಲಬದ್ಧತೆ (ಕಾನಸ್ಟಿಪೇಶನ್) ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ೨ ಚಿಟಿಕೆ ಪಿಪ್ಪಲಿ ಚೂರ್ಣ ಮತ್ತು ೧ ಚಮಚ ತ್ರಿಫಲ ಚೂರ್ಣವನ್ನು ಬೆರೆಸಿ ಅರ್ಧ ಕಪ್ ಬಿಸಿನೀರಿನೊಂದಿಗೆ ಸೇವಿಸಬೇಕು ೫ ರಿಂದ ೭ ದಿನ

೪. ಹಳೆಯ ಜ್ವರ (ಬಹಳ ದಿನಗಳಿಂದ ಬರುತ್ತಿರುವ ಜ್ವರ) ೨ ಚಿಟಿಕೆ ಪಿಪ್ಪಲಿ ಚೂರ್ಣವನ್ನು ೧ ಚಮಚ ಜೇನು ತುಪ್ಪದೊಂದಿಗೆ ದಿನದಲ್ಲಿ ೩ ಸಲ ಸೇವಿಸಬೇಕು ೭ ದಿನ

೫. ‘ಹೈಪೋಥೈರಾಯಿಡ್’, ಶ್ವಸನವ್ಯೂಹದ ರೋಗಗಳು, ಗರ್ಭಾಶಯದಲ್ಲಿನ ಗಡ್ಡೆಗಳು (ಫೈಬ್ರಾಯಿಡ್), ಅಂಡಾಶಯದ ಗಡ್ಡೆಗಳು (ಓವೇರಿಯನ್ ಸಿಸ್ಟ), ಇತ್ಯಾದಿಗಳಿಗೆ ‘ವರ್ಧಮಾನ ಪಿಪ್ಪಲಿ ರಸಾಯನ’ವು ಉಪಯುಕ್ತವಾಗಿದೆ ಸೂರ್ಯೋದಯದ ಸಮಯದಲ್ಲಿ ೧ ಬಟ್ಟಲು ಹಾಲಿನಲ್ಲಿ ಅರ್ಧ ಗ್ರಾಮ್ (೧/೮ ಚಮಚ) ಚೂರ್ಣವನ್ನು ಬೆರೆಸಿ ಕುದಿಸಿ, ಅದರಲ್ಲಿ ೧ ಚಮಚ ತುಪ್ಪವನ್ನು ಹಾಕಿ ಕುಡಿಯಬೇಕು. ನಂತರ ೧ ಗಂಟೆ ಏನೂ ತಿನ್ನಬಾರದು ಅಥವಾ ಕುಡಿಯಬಾರದು. ನಂತರ ಚೂರ್ಣದ ಪ್ರಮಾಣವನ್ನು ಪ್ರತಿದಿನ ಅರ್ಧ ಗ್ರಾಮ್‌ದಂತೆ ಹೆಚ್ಚಿಸಿ, ೯ ನೇ ದಿನದಿಂದ ಹಿಡಿದು ಪ್ರತಿದಿನ ಅರ್ಧ ಗ್ರಾಮ್ ಕಡಿಮೆ ಮಾಡಬೇಕು. ಈ ಉಪಚಾರದ ಹೊರತು ಪಿಪ್ಪಲಿ ಚೂರ್ಣವನ್ನು ನಿರಂತರವಾಗಿ ೮ ದಿನಗಳಿಗಿಂತ ಹೆಚ್ಚು ಉಪಯೋಗಿಸಬಾರದು ೧೫ ದಿನ

೨ ಆ. ಸೂಚನೆ

೧. ೮ ರಿಂದ ೧೪ ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು ೩ ರಿಂದ ೭ ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔ?ಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

೨. ಮಧುಮೇಹ ಇದ್ದವರು ಔ?ಧಿಯನ್ನು ಜೇನುತುಪ್ಪ ಅಥವಾ ಸಕ್ಕರೆಯ ಜೊತೆಗೆ ತೆಗೆದುಕೊಳ್ಳದೇ ನೀರಿನೊಂದಿಗೆ ತೆಗೆದುಕೊಳ್ಳಬೇಕು ಅಥವಾ ಕೇವಲ ಅಗಿದು ತಿನ್ನಬೇಕು.

೩. ಉಷ್ಣತೆಯ ಲಕ್ಷಣಗಳು (ಉ? ಪದಾರ್ಥಗಳಿಂದ ತೊಂದರೆಯಾಗುವುದು, ಬಾಯಲ್ಲಿ ಹುಣ್ಣಾಗುವುದು, ಮೈಕೈ ಉರಿಯುವುದು, ಉರಿ ಮೂತ್ರ, ಮೈಮೇಲೆ ಬೊಕ್ಕೆಗಳು ಏಳುವುದು, ತಲೆ ಸುತ್ತುವಿಕೆ ಇತ್ಯಾದಿ) ಇರುವಾಗ ಮತ್ತು ಬೇಸಿಗೆ ಮತ್ತು ಮಳೆಗಾಲದ ನಂತರ ಬರುವ ಶರದ ಋತು (ಅಕ್ಟೋಬರ್‌ನ ಹೀಟ್) ವಿನ ಕಾಲಗಳಲ್ಲಿ ಪಿಪ್ಪಲಿಯನ್ನು ಆದ? ಉಪಯೋಗಿಸಬಾರದು ಅಥವಾ ಬಳಕೆ ಕಡಿಮೆ ಮಾಡಬೇಕು.

೪. ಉಷ್ಣತೆ ಹೆಚ್ಚಾದರೆ ಪಿಪ್ಪಲಿಯ ಸೇವನೆ ನಿಲ್ಲಿಸಿ ೧ ೨ ದಿನ, ೧ ಲೋಟ ನಿಂಬೆಹಣ್ಣಿನ ಶರಬತ್ತನ್ನು ದಿನದಲ್ಲಿ ೨ ಬಾರಿ ಕುಡಿಯಬೇಕು.

೩. ಸನಾತನ ಆಡುಸೋಗೆ ಚೂರ್ಣ

೩ ಅ. ಗುಣಧರ್ಮ ಮತ್ತು ಉಪಯೋಗ : ಈ ಔಷಧಿಯು ತಂಪು ಗುಣಧರ್ಮದ್ದಾಗಿದ್ದು ಪಿತ್ತ ಮತ್ತು ಕಫ ನಾಶಕವಾಗಿದೆ. ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ
1. ಮೂಗಿನಿಂದ ರಕ್ತ ಬರುವುದು, ಉಷ್ಣತೆಯ ರೋಗಗಳು, ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು ಮತ್ತು ಬಿಳಿಸೆರಗು (ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು) 1 ಚಮಚ ಆಡುಸೋಗೆಯ ಚೂರ್ಣ ಮತ್ತು 1 ಚಮಚ ಕಲ್ಲು ಸಕ್ಕರೆಯ ಮಿಶ್ರಣವನ್ನು ದಿನಕ್ಕೆ 2 – 3 ಸಲ ನೀರಿನೊಂದಿಗೆ ಸೇವಿಸಬೇಕು. 7 ದಿನಗಳು
2. ಕಫದೊಂದಿಗೆ ಕೆಮ್ಮು ಮತ್ತು ಉಬ್ಬಸ (ಅಸ್ಥಮಾ) 1 ಚಮಚ ಆಡುಸೋಗೆಯ ಚೂರ್ಣ, ಅರ್ಧ ಚಮಚ ಶುಂಠಿ ಅಥವಾ ಪಿಪ್ಪಲಿಯ ಚೂರ್ಣ, 2 ಚಮಚ ಜೇನು ತುಪ್ಪ ಇವುಗಳನ್ನು ಬೆರೆಸಿ ದಿನದಲ್ಲಿ 5 – 6 ಸಲ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ನೆಕ್ಕಬೇಕು 7 ದಿನಗಳು
3. ಕ್ಷಯರೋಗದ (ಟಿ.ಬಿ) ಉಪಚಾರಕ್ಕೆ ಸಹಾಯಕ ಬೆಳಗ್ಗೆ ಮತ್ತು ಸಾಯಂಕಾಲ 1 ಚಮಚ ಆಡುಸೋಗೆಯ ಚೂರ್ಣ, 1 ಚಮಚ ತುಪ್ಪ ಮತ್ತು 1 ಚಮಚ ಸಕ್ಕರೆಯ ಮಿಶ್ರಣವನ್ನು ಮಾಡಿ ಸೇವಿಸಬೇಕು, ನಂತರ ಒಂದು ಬಟ್ಟಲು ಬಿಸಿನೀರು ಕುಡಿಯಬೇಕು. 1 ರಿಂದ 3 ತಿಂಗಳು
4. ದಡಾರ ಮತ್ತು ಸಿಡಬು ಹಾಗೆಯೇ ಜ್ವರಬರಿಸುವ ಇತರ ಸೋಂಕು ರೋಗಗಳು ಬೆಳಗ್ಗೆ ಮತ್ತು ಸಾಯಂಕಾಲ ಅರ್ಧ ಚಮಚ ಆಡುಸೋಗೆಯ ಚೂರ್ಣ ಮತ್ತು ಅರ್ಧ ಚಮಚ ಜೇಷ್ಟಮಧು ಚೂರ್ಣ ಇವುಗಳ ಮಿಶ್ರಣವನ್ನು ಮಾಡಿ ನೀರಿನೊಂದಿಗೆ ಸೇವಿಸಬೇಕು 7 ದಿನಗಳು
5. ಯಾವುದೇ ರೀತಿಯ ಗಾಯ (ಹುಣ್ಣು) ದಿನದಲ್ಲಿ 2 ಸಲ ಬಿಸಿಮಾಡಿ ಆರಿಸಿದ ನೀರಿನಲ್ಲಿ ಆಡುಸೋಗೆಯ ಚೂರ್ಣವನ್ನು ಕಲಿಸಿ ಗಾಯಕ್ಕೆ ಹಚ್ಚಬೇಕು. 7 ದಿನಗಳು

ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ

೧. ಮೂಗಿನಿಂದ ರಕ್ತ ಬರುವುದು, ಉಷ್ಣತೆಯ ರೋಗಗಳು, ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು ಮತ್ತು ಬಿಳಿಸೆರಗು (ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು) ೧ ಚಮಚ ಆಡುಸೋಗೆಯ ಚೂರ್ಣ ಮತ್ತು ೧ ಚಮಚ ಕಲ್ಲು ಸಕ್ಕರೆಯ ಮಿಶ್ರಣವನ್ನು ದಿನಕ್ಕೆ ೨ – ೩ ಸಲ ನೀರಿನೊಂದಿಗೆ ಸೇವಿಸಬೇಕು. ೭ ದಿನಗಳು

೨. ಕಫದೊಂದಿಗೆ ಕೆಮ್ಮು ಮತ್ತು ಉಬ್ಬಸ (ಅಸ್ಥಮಾ) ೧ ಚಮಚ ಆಡುಸೋಗೆಯ ಚೂರ್ಣ, ಅರ್ಧ ಚಮಚ ಶುಂಠಿ ಅಥವಾ ಪಿಪ್ಪಲಿಯ ಚೂರ್ಣ, ೨ ಚಮಚ ಜೇನು ತುಪ್ಪ ಇವುಗಳನ್ನು ಬೆರೆಸಿ ದಿನದಲ್ಲಿ ೫ – ೬ ಸಲ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ನೆಕ್ಕಬೇಕು ೭ ದಿನಗಳು
ದಡಾರ ಮತ್ತು ಸಿಡಬು ಹಾಗೆಯೇ ಜ್ವರಬರಿಸುವ ಇತರ ಸೋಂಕು ರೋಗಗಳು ಬೆಳಗ್ಗೆ ಮತ್ತು ಸಾಯಂಕಾಲ ಅರ್ಧ ಚಮಚ ಆಡುಸೋಗೆಯ ಚೂರ್ಣ ಮತ್ತು ಅರ್ಧ ಚಮಚ ಜೇ?ಮಧು ಚೂರ್ಣ ಇವುಗಳ ಮಿಶ್ರಣವನ್ನು ಮಾಡಿ ನೀರಿನೊಂದಿಗೆ ಸೇವಿಸಬೇಕು ೭ ದಿನಗಳು

೫. ಯಾವುದೇ ರೀತಿಯ ಗಾಯ (ಹುಣ್ಣು) ದಿನದಲ್ಲಿ ೨ ಸಲ ಬಿಸಿಮಾಡಿ ಆರಿಸಿದ ನೀರಿನಲ್ಲಿ ಆಡುಸೋಗೆಯ ಚೂರ್ಣವನ್ನು ಕಲಿಸಿ ಗಾಯಕ್ಕೆ ಹಚ್ಚಬೇಕು. ೭ ದಿನಗಳು

೩ ಆ. ಸೂಚನೆ : ೮ ರಿಂದ ೧೪ ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು ೩ ರಿಂದ ೭ ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔ?ಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು. (ಮುಂದುವರಿಯುವುದು)

– ವೈದ್ಯ ಮೇಘರಾಜ ಮಾಧವ ಪರಾಡಕರ್, ಸನಾತನ ಆಶ್ರಮ, ರಾಮನಾಥಿ ಗೋವಾ. (೧೧. ೬.೨೦೨೧)